ವರದಿಗಾರರು :
ಸಿಂಚನ ||
ಸ್ಥಳ :
ಧಾರವಾಡ
ವರದಿ ದಿನಾಂಕ :
01-11-2025
ಧಾರವಾಡ: ವಾಹನ ಬ್ಯಾಟರಿಗಳ ಆರೋಪಿಗಳ ಬಂಧನ: ಲಕ್ಷಾಂತರ ಮೌಲ್ಯದ ವಸ್ತು ವಶ
ಧಾರವಾಡ ಜಿಲ್ಲೆ ಕಲಘಟಗಿ ಠಾಣಾ ಪೊಲೀಸರು ವಾಹನಗಳ ಬ್ಯಾಟರಿ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ . ಅಕ್ಟೋಬರ್ 30, 31,2025 ಮತ್ತು ಅಕ್ಟೋಬರ್ 25,26, 2025 ರಂದು ಲಾರಿಗಳಿಂದ ಒಟ್ಟು ಏಳು ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು. ಪೊಲೀಸರು 2.35 ರೂ ಮೌಲ್ಯದ 25 ವಾಹನ ಬ್ಯಾಟರಿಗಳು ಮತ್ತು 1.95 ಲಕ್ಷ ರೂ ಮೌಲ್ಯದ 2 ಮೋಟರ್ ಸೈಕಲ್ ಗಳು ಒಟ್ಟು 4.35 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿ ಕೊಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯನ್ನು ಪೊಲೀಸ್ ಅಧಿಕ್ಷಕ ಗುಂಜನ್ ಆರ್ಯ ಹೆಚ್ಚುವರಿ ಪೊಲೀಸ್ ಅಧಿಕಾರಿ ಮತ್ತು ಪೊಲೀಸ್ ಉಪಾದೀಕ್ಷಕ ವಿನೋದ ಎಂ ಮುಕ್ತಿದಾರ ಅವರ ಮಾರ್ಗದರ್ಶನದಲ್ಲಿ ಕಲಘಟಗಿ ಪಿ ಐ ಶ್ರೀಶೈಲ ಕೌಜಲಗಿ ಹಾಗೂ ತಂಡ ಯಶಸ್ವಿಯಾಗಿ ನಡೆಸಿದೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
