ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
13-11-2025
ಚಿಕ್ಕ ಪೇಟ ಸೇರಿ 16 ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ: ಪೌರಾಯುಕ್ತರಿಗೆ ಮನವಿ
ಬೀದರ್: ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ ಚಿಕ್ಕಪೇಟ ಸೇರಿದಂತೆ 16 ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದರಿಂದ ತಕ್ಷಣ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ರಾಷ್ಟೀಯ ದಲಿತ್ ಬ್ರಿಗೇಡ್ ಸಂಘಟನೆಯ ಮುಖಂಡರು ಮನವಿ ಸಲ್ಲಿಸಿದರು.ಮನವಿಯಲ್ಲಿ ಚಿಕ್ಕಪೇಟ ಗ್ರಾಮದಲ್ಲಿ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಕಸದ ವಾಹನ, ಕಸದ ಗುಂಡಿಗಳು, ಬೀದಿ ದೀಪಗಳ ಕೊರತೆ, ಸೇರಿದಂತೆ ನಾಗರಿಕರಿಗೆ ಅಗತ್ಯ ಸೇವೆಗಳು ಲಭ್ಯವಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.
ಅಲ್ಲದೆ ಮನೆ ಹಕ್ಕು ಖಾತೆಗಳು (ಖಾತೆ/ಮ್ಯುಟೇಶನ್) ಹಾಗೂ ಹೊಸ ವಿದ್ಯುತ್ ಸಂಪರ್ಕ ಸೇರಿದಂತೆ ತಂತ್ರಾAಶದ ನವೀಕರಣವೂ ಆಗದಿರುವುದು ಜನರಿಗೆ ದೊಡ್ಡ ತೊಂದರೆ ಉಂಟುಮಾಡುತ್ತಿದೆ ಎಂದು ಹೇಳಲಾಗಿದೆ.ದಿನನಿತ್ಯ ಜನಸಂಚಾರವಿರುವ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿರುವ ಕಾರಣ ಅಪಘಾತದ ಭೀತಿ ಹೆಚ್ಚಿದ್ದು, ಬೀದಿ ದೀಪಗಳನ್ನು ತುರ್ತಾಗಿ ಅಳವಡಿಸಬೇಕು ಎಂದು ಬೇಡಲಾಗಿದೆ.ಅಭಿವೃದ್ಧಿ ಕಾಮಗಾರಿಗಳನ್ನು ತಕ್ಷಣ ಪ್ರಾರಂಭಿಸಿ, ಸೇವಾ ಖಾತೆಗಳನ್ನು ಡಿಜಿಟಲ್ ತಂತ್ರಾAಶದಲ್ಲಿ ಅಳವಡಿಸಿ ಸಾರ್ವಜನಿಕರಿಗೆ ಸುಗಮ ಸೇವೆ ಒದಗಿಸಬೇಕೆಂದು ಒತ್ತಾಯಿಸಿ ರಾಷ್ಟಿçಯ ದಲಿತ್ ಬ್ರಿಗೆಡ್ ವತಿಯಿಂದ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ರಾಷ್ಟಿçಯ ದಲಿತ್ ಬ್ರಿಗೆಡ್ ರಾಜ್ಯಧ್ಯಕ್ಷರಾದ ಶಿವು ಜೀರ್ಗೆ, ಕಲ್ಯಾಣರಾವ ಗೂನಳ್ಳಿಕರ್, ಪ್ರದೀಪ ಸಾಗರ, ಮೊಹನ ಸಾಗರ, ಸಂಜು ಲಕ್ಷಿö್ಮದೊಡಿ, ಲಕ್ಷಿö್ಮಣ ಕಾಂಬಳೆ, ವಿಜಯಕುಮಾರ ಕಸ್ತೂರೆ, ಅವಿನಾಶ ದೀನೆ ಉಪಸ್ಥತರಿದ್ದರು.
