ವರದಿಗಾರರು :
ಮೀನಾಕ್ಷಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
21-03-2025
ಯುವ ಸಿನಿಮಾ ಹಾಡಿಗೆ ಹೆಣೈಕ್ಳ ಭರ್ಜರಿ ಕುಣಿತ
ರತ್ನನ್ ಪ್ರಪಂಚ ಖ್ಯಾತಿಯ ರೋಹಿತ್ ಪದಕಿ ಹಾಗೂ ದೊಡ್ಮನೆ ಹುಡ್ಗ ಯುವರಾಜ್ ಕುಮಾರ್ ಕಾಂಬಿನೇಷನ್ ಎಕ್ಕ ಸಿನಿಮಾದ ಮೊದಲ ಹಾಡು ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸುತ್ತಿದೆ. ನಾಗಾರ್ಜುನ್ ಶರ್ಮಾ ಸಾಹಿತ್ಯ, ಚರಣ್ ಸಂಗೀತ, ಯುವ ಭರ್ಜರಿ ಕುಣಿತ..ಟೋಟಲ್ ಆಗಿ ಎಕ್ಕ ಮಾರ್ ಮಾರ್ ಮಾಸ್ ಹಾಡು ಟ್ರೆಂಡಿಂಗ್ ನಲ್ಲಿದೆ. ಚರಣ್ ರಾಜ್ ಕಂಪೋಸ್ ಮಾಡಿರುವ ಭರ್ಜರಿ ಬೀಟ್ಸ್ ಗೆ ಹಾಡು ಕೇಳಿದವರನ್ನು ನಿಂತಲ್ಲೇ ಕುಣಿಸುತ್ತಿದೆ.ಎಕ್ಕ ಮಾರ್ ಮಾರ್ ಅಂತಾ ಸಿನಿಮಾಪ್ರೇಮಿಗಳು ಕೂಡ ಕುಣಿಯೋದಿಕ್ಕೆ ಶುರು ಮಾಡಿದ್ದಾರೆ. ನಟಿ ಚೈತ್ರಾ ಆಚಾರ್ ಸೇರಿದಂತೆ ಅನೇಕ ಲೇಡಿ ಫ್ಯಾನ್ಸ್, ಗಂಡೈಕ್ಳು ಕೂಡ ಹುಕ್ ಸ್ಟೆಪ್ಸ್ ಗೆ ಹೆಜ್ಜೆ ಹಾಕಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ 1 ಮಿಲಿಯನ್ಸ್ ಗೂ ಅಧಿಕ ವೀಕ್ಷಣೆ ಕಂಡಿರುವ ಈ ಮಾಸ್ ಧಮಾಕೇಧಾರ್ ಗೀತೆಗೆ ಸಾಕಷ್ಟು ಮಂದಿ ರೀಲ್ಸ್ ಮಾಡುತ್ತಿದ್ದಾರೆ.
ಜೂನ್ 6ಕ್ಕೆ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನದಲ್ಲಿರುವ ಚಿತ್ರತಂಡ ಅದರಂತೆ ಭರದಿಂದ ಶೂಟಿಂಗ್ ನಡೆಸುತ್ತಿದೆ. ಕೆಆರ್‌ಜಿ ಸ್ಟುಡಿಯೋಸ್, ಪಿಆರ್‌ಕೆ ಪ್ರೊಡಕ್ಷನ್ಸ್ ಹಾಗೂ ಜಯಣ್ಣ ಫಿಲ್ಮ್ಸ್ ಜಂಟಿಯಾಗಿ ‘ಎಕ್ಕ’ ಸಿನಿಮಾ ನಿರ್ಮಾಣ ಮಾಡುತ್ತಿವೆ. ನಾಯಕಿಯಾಗಿ ಸಂಪದ, ಸಂಜನಾ ಅಭಿನಯಿಸುತ್ತಿದ್ದಾರೆ.
