ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
10-04-2025
ಚೆನ್ನೈ ತಂಡದಿಂದ ರುತುರಾಜ್ ಔಟ್ – ತಲಾ ಮತ್ತೆ ಕ್ಯಾಪ್ಟನ್ !
ಚೆನ್ನೈ: ಲೆಜೆಂಡ್ ಕ್ರಿಕೆಟಿಗ, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಉಸಿರಾಗಿರುವ ಮಹೇಂದ್ರ ಸಿಂಗ್ ಧೋನಿ ಮತ್ತೆ ಸಿಎಸ್‌ಕೆ ತಂಡದ ನಾಯಕನಾಗಿ ಕಂಬ್ಯಾಕ್ ಮಾಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಾಲಿ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ (Ruturaj Gaikwad) ಅವರು ಮೊಣಕೈ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಇಡೀ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ. ಹೀಗಾಗಿ ಬಾಕಿ ಉಳಿದಿರುವ 9 ಪಂದ್ಯಗಳಿಗೆ ಎಂ.ಎಸ್ ಧೋನಿ ಅವರೇ ನಾಯಕತ್ವ ವಹಿಸಲಿದ್ದಾರೆ ಎಂದು ಮುಖ್ಯಕೋಚ್ ಸ್ಟೀಫನ್ ಫ್ಲೆಮಿಂಗ್ ಖಚಿತಪಡಿಸಿದ್ದಾರೆ. ನಾಳೆ (ಏ.11) ಕೋಲ್ಕತ್ತಾ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಸರದಿಯ 6ನೇ ಪಂದ್ಯವನ್ನಾಡಲಿದೆ.
ಇತ್ತೀಚೆಗೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ತುಷಾರ್ ದೇಶ್‌ಪಾಂಡೆ ಅವರ ಬೌಲಿಂಗ್‌ನಲ್ಲಿ ಚೆಂಡು ರುತುರಾಜ್ ಅವರ ಬಲ ಮೊಣಕೈಗೆ ಬಲವಾಗಿ ಬಡಿದಿತ್ತು. ಈ ವೇಳೆ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ರುತುರಾಜ್ ತಂಡಕ್ಕಾಗಿ ಬ್ಯಾಟಿಂಗ್ ಮುಂದುವರಿಸಿದ್ದರು. ಆದ್ರೆ ಆ ಪಂದ್ಯದಲ್ಲಿ ಸಿಎಸ್‌ಕೆ ಸೋಲು ಕಂಡಿತು. ಇನ್ನೂ ಏಪ್ರಿಲ್ 8ರಂದು ಪಂಬಾಜ್ ಕಿಂಗ್ಸ್ (Punjab Kings) ವಿರುದ್ಧದ ಪಂದ್ಯದಲ್ಲಿಯೂ ರುತುರಾಜ್ ಬ್ಯಾಟಿಂಗ್ ವೈಫಲ್ಯ ಎದುರಿದರು. ಇದೀಗ ಮೊಣಕೈ ಗಾಯದ ಸಮಸ್ಯೆ ಉಲ್ಬಣಗೊಂಡಿದ್ದು, ಪ್ರಸ್ತುತ ಐಪಿಎಲ್ ಟೂರ್ನಿಯಿಂದಲೇ ಅವರು ಹೊರಗುಳಿಯಲಿದ್ದಾರೆ ಎಂದು ಸಿಎಸ್‌ಕೆ ಮುಖ್ಯಕೋಚ್ ತಿಳಿಸಿದ್ದಾರೆ.
2023ರ ಆವೃತ್ತಿಯಲ್ಲಿ ಸಿಎಸ್‌ಕೆ ಎಂ.ಎಸ್ ಧೋನಿ ನಾಯಕತ್ವದಲ್ಲಿ 5ನೇ ಬಾರಿಗೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿತ್ತು. ಆ ಬಳಿಕ ಧೋನಿ ತಮ್ಮ ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದರು. 2024ರ ಆವೃತ್ತಿಯಿಂದ ರುತುರಾಜ್ ಗಾಯಕ್ವಾಡ್ ಸಿಎಸ್‌ಕೆ ತಂಡದ ನಾಯಕನಾಗಿ ಮುಂದುವರಿಯುತ್ತಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ 5 ಪಂದ್ಯಗಳನ್ನಾಡಿರುವ ಸಿಎಸ್‌ಕೆ ಕೇವಲ 1ರಲ್ಲಿ ಮಾತ್ರ ಗೆಲುವು ಸಾಧಿಸಿದೆ.
