ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
02-04-2025
ಮೈದಾನದಲ್ಲೇ ಧೀಮಾಕು ತೋರಿಸಿದ ದಿಗ್ವೇಶ್ ರಥಿಗೆ ಬಿತ್ತು ಭಾರೀ ದಂಡ !
ಲಕ್ನೋ: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲೇ ಧೀಮಾಕು ತೋರಿಸಿದ ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ದಿಗ್ವೇಶ್ ರಥಿಗೆ ಬಿಸಿಸಿಐ ಭಾರೀ ದಂಡ ವಿಧಿಸಿದೆ.
ಐಪಿಎಲ್ (IPL) ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯದ ಶುಲ್ಕದ 25% ಪ್ರತಿಶತ ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.
ಆಗಿದ್ದೇನು? : ದಿಗ್ವೇಶ್ ರಥಿ ಮೂರನೇ ಓವರ್ ಎಸೆಯುತ್ತಿದ್ದರು. 5ನೇ ಎಸೆತದಲ್ಲಿ ಸ್ಟ್ರೈಕ್‌ನಲ್ಲಿದ್ದ ಪ್ರಿಯಾಂಶ್ ಆರ್ಯ ಅವರು ಬಲವಾಗಿ ಹೊಡೆಯಲು ಯತ್ನಿಸಿ ಶಾರ್ದೂಲ್ ಠಾಕೂರ್ ಕೈಗೆ ಕ್ಯಾಚ್ ನೀಡಿ ಹೊರ ನಡೆದರು.
8 ರನ್ ಗಳಿಸಿ ಮೈದಾನ ತೊರೆಯುತ್ತಿದ್ದಾಗ ರಥಿ ಪ್ರಿಯಾಂಶ್ ಆರ್ಯ ಬಳಿ ಬಂದು ಪತ್ರ ಬರೆಯುವ ಮೂಲಕ ಸಂಭ್ರಮಿಸಿದ್ದರು. ಉದ್ದೇಶಪೂರ್ವಕವಾಗಿ ಆಟಗಾರನ ಬಳಿ ಬಂದು ಸಂಭ್ರಮಾಚರಣೆ ಮಾಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದ್ದಕ್ಕೆ ದಿಗ್ವೇಶ್ ರಥಿ ದಂಡ ವಿಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ 7 ವಿಕೆಟ್ ನಷ್ಟಕ್ಕೆ 171 ರನ್ ಹೊಡೆಯಿತು. ಗುರಿ ಬೆನ್ನಟ್ಟಿದ ಪಂಜಾಬ್ 16.2 ಓವರ್‌ಗಳಲ್ಲಿ 177 ರನ್ ಹೊಡೆದು ಜಯಗಳಿಸಿತು. ಪ್ರಭಸಿಮ್ರನ್ ಸಿಂಗ್ ಮತ್ತು ಶ್ರೇಯಸ್ ಅಯ್ಯರ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಈ ಜಯದಿಂದ ಐದನೇ ಸ್ಥಾನದಲ್ಲಿದ್ದ ಪಂಜಾಬ್ ಎರಡನೇ ಸ್ಥಾನಕ್ಕೆ ಜಿಗಿದರೆ ಮೂರನೇ ಸ್ಥಾನದಲ್ಲಿದ್ದ ಲಕ್ನೋ ಆರನೇ ಸ್ಥಾನಕ್ಕೆ ಜಾರಿದೆ.
