ವರದಿಗಾರರು :
ದರ್ಶನ್ ಎಂ.ಎನ್ ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
08-11-2025
3.7 ಟನ್ ಪಡಿತರ ರಾಗಿ ಜಪ್ತಿ: ಅಕ್ರಮ ಸಾಗಾಟ ಬಯಲು
ಕೆಎ–68–4827 ನಂಬರಿನ ನೀಲಿ ಬಣ್ಣದ ವಿಂಟ್ರಾ ವಿ–30 ಮಾದರಿಯ ಗೂಡ್ಸ್ ವಾಹನದಲ್ಲಿ 3,770 ಕೆಜಿ ಪಡಿತರ ರಾಗಿಯನ್ನು ಸಂಗ್ರಹಿಸಿಕೊಂಡು ಸಾಗಿಸಲಾಗುತ್ತಿತ್ತು. ವಾಹನ ನಿಲ್ಲಿಸಿ ತಪಾಸಣೆ ನಡೆಸಿದ ವೇಳೆ ಅಕ್ರಮ ಪಡಿತರ ಸಾಗಾಟ ಬಯಲಾಗಿದೆ.
ಬಂಧಿತನಾಗಿ ಹರಿಹರ ತಾಲೂಕಿನ ಮಲೇಬೆನ್ನೂರಿನ ಗುಜರಿ ವ್ಯಾಪಾರಿ ಸೈಯದ್ ಇರ್ಷಾದ್ ಅಲಿ ಗುರುತಿಸಲ್ಪಟ್ಟಿದ್ದಾನೆ.
ಜಿಲ್ಲಾ ಪೊಲೀಸ್ ಕಚೇರಿಯ ಪಿಎಸ್ಐ ಸಾಗರ್ ಅತ್ತರ್ ವಾಲಾ, ಬಡಾವಣೆ ಠಾಣೆಯ ಪಿಎಸ್ಐ ಅನ್ನಪೂರ್ಣಮ್ಮ, ಸಿಬ್ಬಂದಿಗಳು ಹಾಗೂ ಆಹಾರ ನಿರೀಕ್ಷಕ ಮಂಜುನಾಥ್ ಟಿ. ಅವರ ತಂಡವು ಸ್ಥಳಕ್ಕೆ ಭೇಟಿ ನೀಡಿ ದಾಳಿ ನಡೆಸಿದರು.
ಪರಿಶೀಲನೆಯ ವೇಳೆ ವಾಹನದಲ್ಲಿ 76 ಪ್ಲಾಸ್ಟಿಕ್ ಚೀಲಗಳಲ್ಲಿ ಒಟ್ಟು 3,770 ಕೆಜಿ ಪಡಿತರ ರಾಗಿ ಪತ್ತೆಯಾಗಿದೆ. ಇದರ ಮೌಲ್ಯ ಅಂದಾಜು ₹1,13,100 ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಯಾವುದೇ ಖರೀದಿ ಬಿಲ್ ತೋರಿಸಲು ವಿಫಲರಾದರು. ವಿಚಾರಣೆ ವೇಳೆ ಅವರು ಮಲೇಬೆನ್ನೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಪಡಿತರ ರಾಗಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ ದಾವಣಗೆರೆ ಎಪಿಎಂಸಿಗೆ ಮಾರಾಟ ಮಾಡಲು ತರಲಾಗುತ್ತಿತ್ತು ಎಂದು ಒಪ್ಪಿಕೊಂಡಿದ್ದಾರೆ.
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ದೊರೆತ ಪಡಿತರ ಧಾನ್ಯವನ್ನು ಅನಧಿಕೃತವಾಗಿ ಖರೀದಿಸಿ ಮಾರಾಟ ಮಾಡಲು ಯತ್ನಿಸಿರುವುದು ದೃಢಪಟ್ಟಿದೆ. ಪೊಲೀಸರು ಆರೋಪಿತನನ್ನು ವಶಕ್ಕೆ ಪಡೆದು ವಾಹನ ಮತ್ತು ಪಡಿತರ ರಾಗಿಯನ್ನು ಜಪ್ತಿ ಮಾಡಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
