ವರದಿಗಾರರು :
ಮಹೇಶ್ ಕುಮಾರ್, ||
ಸ್ಥಳ :
ಬಳ್ಳಾರಿ
ವರದಿ ದಿನಾಂಕ :
14-11-2025
ಅಣಕು ಪ್ರದರ್ಶನಕ್ಕೆ ಅಗತ್ಯ ಸಿದ್ಧತೆಗೆ ಎಸಿ ಪಿ. ಪ್ರಮೋದ್ ಸೂಚನೆ
ಕುಡತಿನಿ, ಬಳ್ಳಾರಿ: ಕುಡತಿನಿ ಸಮೀಪದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಬಿಟಿಪಿಎಸ್) ನಲ್ಲಿ ನವೆಂಬರ್ 14ರಂದು ಬೆಳಿಗ್ಗೆ 11 ಗಂಟೆಗೆ ಕಟ್ಟಡ ಕುಸಿತದ ಪರಿಸ್ಥಿತಿಯನ್ನು ಕುರಿತ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನವನ್ನು ಎನ್‌ಡಿಆರ್‌ಎಫ್ ತಂಡದೊಂದಿಗೆ ಜಿಲ್ಲಾಡಳಿತದ ಸಹಕಾರದಲ್ಲಿ ಆಯೋಜಿಸಲಾಗಿದೆ ಎಂದು ಸಹಾಯಕ ಆಯುಕ್ತ ಪಿ. ಪ್ರಮೋದ್ ತಿಳಿಸಿದ್ದಾರೆ.
ನಗರದ ನೂತನ ಜಿಲ್ಲಾಡಳಿತ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಎಸಿ ಪಿ. ಪ್ರಮೋದ್, ಅಣುಕು ಪ್ರದರ್ಶನದಲ್ಲಿ ಭಾಗವಹಿಸುವ ಎಲ್ಲಾ ಇಲಾಖೆಗಳು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ವಿಪತ್ತು ಜಾಗೃತಿ – ಸಾರ್ವಜನಿಕರಿಗೆ ಮಾರ್ಗದರ್ಶನ: ಕೈಗಾರಿಕಾ ಪ್ರದೇಶಗಳಲ್ಲಿ ಸಂಭವಿಸಬಹುದಾದ ರಾಸಾಯನಿಕ ಸೋರಿಕೆ, ಕಟ್ಟಡ ಕುಸಿತ, ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಸಭೆಯಲ್ಲಿ ನೀಡಿದ ನಿರ್ದೇಶನಗಳು:
ತುರ್ತು ಪರಿಸ್ಥಿತಿಯಲ್ಲಿ ಎಚ್ಚರಿಕೆ ಗಂಟೆ, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕ್ರಮಗಳ ಬಗ್ಗೆ ವಿವರ ನೀಡಲಾಗುವುದು. ಅಗತ್ಯ ಸಾಮಗ್ರಿಗಳ ಕಿಟ್, ರಕ್ಷಣಾ ಸಾಧನಗಳು ಹಾಗೂ ಇಲಾಖೆಗಳ ನಡುವೆ ಸಂಯೋಜನೆ ಕುರಿತು ಅಭ್ಯಾಸ ನಡೆಯಲಿದೆ. ಅಣಕು ಪ್ರದರ್ಶನದ ವೇಳೆ ತುರ್ತು ಆಂಬುಲೆನ್ಸ್, ವೈದ್ಯರು ಮತ್ತು ಆರೋಗ್ಯ ತುರ್ತು ಸೇವೆಗಳು ಸಿದ್ಧವಾಗಿರಬೇಕು. ಅಗ್ನಿಶಾಮಕದಳ, ಪೊಲೀಸರಿಂದ ಬಂದೋಬಸ್ತ್ ಹಾಗೂ ವಾಹನ ದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸೂಚನೆ.
ವಿದ್ಯಾರ್ಥಿಗಳಿಗಾಗಿ ನ.15ರಂದು ವಿಶೇಷ ಕಾರ್ಯಕ್ರಮ: ನವೆಂಬರ್ 15ರಂದು ಬೆಳಿಗ್ಗೆ 11ಕ್ಕೆ ಬಳ್ಳಾರಿ ನಗರದ ಮುನಿಸಿಪಲ್ ಕಾಲೇಜು ಹಾಗೂ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ತತ್‌ಕ್ಷಣದ ಹೃದಯಾಘಾತ, ತುರ್ತು ಚಿಕಿತ್ಸೆ ಮತ್ತು ವಿಪತ್ತು ಪ್ರತಿಕ್ರಿಯೆ ಕುರಿತ ಅಣುಕು ಪ್ರದರ್ಶನವನ್ನು ವಿಪತ್ತು ನಿರ್ವಹಣಾ ಪ್ರಾಧಿಕಾರ ನಡೆಸಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಡಿಡಿಪಿಯು ಅಧಿಕಾರಿ ಅವರಿಗೆ ಸೂಚಿಸಲಾಗಿದೆ.
ಸಭೆಯಲ್ಲಿ ಪಾಲ್ಗೊಂಡವರು: ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್, ಡಾ. ಆರ್. ಅಬ್ದುಲ್ಲಾ, ಎನ್‌ಡಿಆರ್‌ಎಫ್‌ನ ಇನ್ಸ್ಪೆಕ್ಟರ್ ರಾಮ್ ಭಜ್, ಅಧಿಕಾರಿ ಸುಭಾಷ್ ಶಿಂಧೆ, ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪಾಟೀಲ್, ವಿಪತ್ತು ಪ್ರಾಧಿಕಾರದ ಪರಿಣಿತ ಪರಮೇಶ್ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
