ವರದಿಗಾರರು :
ನರೇಂದ್ರ ಬಾಬು ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
13-03-2025
ಆಸ್ತಿಯಲ್ಲಿ ಪಾಲು ಕೇಳುವವರಿಗೆ ಶಾಕ್ !
ತಾತ-ಮುತ್ತಾತನ ಕಾಲದ್ದು ಹಾಗೂ ತಂದೆ-ತಾಯಿ ಮಾಡಿಟ್ಟ ಆಸ್ತಿ ತಮ್ಮ ಮಕ್ಕಳಿಗೆ ಸುಲಭವಾಗಿ ಸಿಗುತ್ತಿತ್ತು. ಆಸ್ತಿ ಕಾರಣಕ್ಕೆ ಎಷ್ಟೋ ಸಂಬಂಧಗಳು ಮುರಿದುಬಿದ್ದಿರುವುದೂ ಉಂಟು. ಆಸ್ತಿ ವಿಚಾರವಾಗಿ ಸಂಬಂಧಗಳನ್ನೇ ಕಳಚಿಕೊಂಡವರಿದ್ದಾರೆ. ಆಸ್ತಿಗಾಗಿ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಹಾಗೂ ಪೋಷಕರು-ಮಕ್ಕಳ ನಡುವೆ ವೈಷಮ್ಯ ಮೂಡಿ ಅಂತರ ಏರ್ಪಟ್ಟಿದೆ.
ಇನ್ನೂ ಕೆಲವು ಮನೆಗಳಲ್ಲಿ ಆಸ್ತಿಯನ್ನು ಸಮಾನವಾಗಿ ಹಂಚಿಕೊಂಡು ನಾನಾಯ್ತು, ನಂದಾಯ್ತು ಎಂದುಕೊಂಡು ಜಾಲಿಯಾಗಿದ್ದಾರೆ. ಆದರೆ ಇನ್ನು ಮುಂದೆ ನೀವು ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಈ ಕೆಲಸ ಮಾಡಲೇಬೇಕು. ಇಲ್ಲದಿದ್ದರೆ ನಿಮ್ಮ ಕೈಗೆ ಆಸ್ತಿ ಸಿಗುವುದೇ ಇಲ್ಲ. ಮೊದಲೆಲ್ಲ ಕಾನೂನುಬದ್ಧವಾಗಿಯೇ ಸಿಗುತ್ತಿದ್ದ ಆಸ್ತಿಯು ಇನ್ನು ಮುಂದೆ ಸುಲಭವಾಗಿ ಸಿಗುವುದಿಲ್ಲ. ಏಕೆಂದರೆ ಇದಕ್ಕೂ ಕರ್ನಾಟಕದಲ್ಲಿ ಹೊಸ ಕಾನೂನು ಬಂದಿದೆ.
ಮೊದಲೆಲ್ಲ ತಂದೆ ತಾಯಿಯ ಆಸ್ತಿ ಮಕ್ಕಳಿಗೆ ಸೇರುತ್ತೆ ಎನ್ನುವ ಕಾನೂನಿತ್ತು. ಕೆಲವರು ಆಸ್ತಿ ಸಿಕ್ಕ ಮೇಲೆ ತಂದೆ-ತಾಯಿಯನ್ನು ನಡುನೀರಿನಲ್ಲಿ ಕೈಬಿಟ್ಟವರೂ ಇದ್ದಾರೆ. ಪೋಷಕರು ಇದ್ದ ಎಲ್ಲವನ್ನೂ ಕಳೆದುಕೊಂಡು ವೃದ್ಧಾಶ್ರಮಗಳಿಗೆ ಸೇರಿರುವ ನಿದರ್ಶನಗಳೂ ಇವೆ. ಇದನ್ನೆಲ್ಲ ಮನಗಂಡಿರುವ ಕರ್ನಾಟಕ ಕರ್ನಾಟಕ ಸರ್ಕಾರವು ಆಸ್ತಿಯಲ್ಲಿ ಪಾಲು ಕೇಳುವ ವಿಚಾರದಲ್ಲಿ ಹೊಸ ನಿಯಮಗಳನ್ನು ರೂಪಿಸಿದೆ. ಸರ್ಕಾರ ಸೂಚಿಸಿರುವಂತೆ ಮಕ್ಕಳು ನಡೆದುಕೊಳ್ಳದಿದ್ದರೆ, ಇನ್ನುಮುಂದೆ ನಿಮಗೆ ಪೋಷಕರ ಆಸ್ತಿ ಸಿಗುವುದೇ ಇಲ್ಲ ಎಂದು ಎಚ್ಚರಿಕೆ ನೀಡಿದೆ. ಇಷ್ಟಕ್ಕೂ ಸರ್ಕಾರ ತಂದಿರುವ ಹೊಸ ಕಾನೂನಿನ ವಿವರ ಇಲ್ಲಿದೆ ನೋಡಿ..
ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ತಂದೆ-ತಾಯಿಯನ್ನು ಆರೈಕೆ ಮಾಡುತ್ತಿಲ್ಲ. ಇಂತಹ ಹಲವರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಪೋಷಕರು ಒಂದು ವೇಳೆ ಮಕ್ಕಳು ಅಥವಾ ಸಂಬಂಧಿಕರು ತಮ್ಮನ್ನು ಆರೈಕೆ ಮಾಡದಿದ್ದರೆ, ಅವರ ಹೆಸರಿಗೆ ಮಾಡಿರುವ ಆಸ್ತಿ ವಿಲ್ ಅಥವಾ ದಾನಪತ್ರವನ್ನು ರದ್ದು ಮಾಡುವ ಅಧಿಕಾರ ಹೊಂದಿರುತ್ತಾರೆ. ಅವರಿಗೆ ಇಷ್ಟವಿಲ್ಲದಿದ್ದರೆ ಮಕ್ಕಳಿಗೆ ಆಸ್ತಿ ಕೊಡುವಂತಿಲ್ಲ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ವಿಧಾನ ಪರಿಷತ್‌ನಲ್ಲಿ ಮಾಹಿತಿ ನೀಡಿದ್ದಾರೆ.
