ವರದಿಗಾರರು :
ದರ್ಶನ ಎಂ.ಎನ್., ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
25-10-2025
ಅ. 27 ಮತ್ತು 28: ಆಧುನಿಕ ಹೈನುಗಾರಿಕೆ ತರಬೇತಿ ದಾವಣಗೆರೆಯಲ್ಲಿ
ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಅಕ್ಟೋಬರ್ 27 ಮತ್ತು 28 ರಂದು “ಆಧುನಿಕ ಹೈನುಗಾರಿಕೆ ಸಾಕಾಣಿಕೆ” ಕುರಿತ ಎರಡು ದಿನಗಳ ತರಬೇತಿಯನ್ನು ಆಯೋಜಿಸಲಾಗಿದೆ.
ಆಸಕ್ತ ರೈತರು ತಮ್ಮ ಆಧಾರ್ ಕಾರ್ಡ್ ನಕಲು, ಎರಡು ಪಾಸ್‌ಪೋರ್ಟ್ ಸೈಜ್ ಫೋಟೋ ಹಾಗೂ ಪರಿಶಿಷ್ಟ ಜಾತಿ/ಪಂಗಡದವರು ಜಾತಿ ಪ್ರಮಾಣ ಪತ್ರದ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿಗೆ ಯಾವುದೇ ಪ್ರೋತ್ಸಾಹಧನ ಅಥವಾ ಭತ್ಯೆ ನೀಡಲಾಗುವುದಿಲ್ಲ. ಈ ತರಬೇತಿ ದಾವಣಗೆರೆ ಜಿಲ್ಲೆಯ ರೈತರಿಗೆ ಮಾತ್ರ ಸೀಮಿತವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂರವಾಣಿ ಸಂಖ್ಯೆ 08192-233787 ಗೆ ಸಂಪರ್ಕಿಸಲು ಅಧಿಕಾರಿಗಳು ತಿಳಿಸಿದ್ದಾರೆ.
