ವರದಿಗಾರರು :
ಬಸವರಾಜ್ ನವಣಿ ||
ಸ್ಥಳ :
ಬೆಳಗಾವಿ
ವರದಿ ದಿನಾಂಕ :
22-11-2025
ಬೆಳಗಾವಿ ಕನ್ನಡ ಭವನ ವಶಪಡಿಕೆ ವಿಳಂಬ: ಡಿಸೆಂಬರ್ 8ರ ಗಡುವು ನೀಡಿದ ಕನ್ನಡ ಸಂಘಟನೆಗಳು; ಅಧಿವೇಶನ ವೇಳೆ ಉಗ್ರ ಹೋರಾ�
ಬೆಳಗಾವಿ ಕನ್ನಡ ಸಂಘಟನೆಗಳ ಸಭೆಯಲ್ಲಿ, ರಾಜ್ಯ ಸರ್ಕಾರ ಬಿಡುಗಡೆ ಮಾಡಿದ 50 ಲಕ್ಷ ರೂ. ಅನುದಾನದ ಸದ್ವಿನಿಯೋಗ ಕುರಿತು ಜಿಲ್ಲಾಧಿಕಾರಿಗಳು ಇನ್ನೂ ಸಭೆ ಕರೆಯದಿರುವುದನ್ನು ಖಂಡಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಯಿತು. ರಾಜ್ಯ ಸರ್ಕಾರ 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ನೆಹರು ನಗರದ ಕನ್ನಡ ಭವನವನ್ನು ಖಾಸಗಿ ಸಂಘದಿಂದ ವಶಕ್ಕೆ ತೆಗೆದುಕೊಳ್ಳಲು ಜೂನ್ 24 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾದರೂ, ಐದು ತಿಂಗಳು ಕಳೆದರೂ ಭವನ ವಶಕ್ಕೆ ಬರದಿರುವುದು ಸಭೆಯಲ್ಲಿ ಗಂಭೀರ ವಿಷಯವಾಯಿತು. ಡಿಸೆಂಬರ್ 8ರ ಒಳಗೆ ಕನ್ನಡ ಭವನವನ್ನು ಜಿಲ್ಲಾಧಿಕಾರಿಗಳ ಸಮಿತಿಯ ವಶಕ್ಕೆ ಹಸ್ತಾಂತರಿಸಬೇಕು ಎಂದು ಸಭೆಯು ಗಡುವು ನೀಡಿದ್ದು, ಇಲ್ಲವಾದಲ್ಲಿ ಬೆಳಗಾವಿ ಅಧಿವೇಶನದ ಸಮಯದಲ್ಲಿ ಕನ್ನಡ ಸಂಘಟನೆಗಳು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಸಭೆಯಲ್ಲಿ ಕನ್ನಡ ರಕ್ಷಣಾ ವೇದಿಕೆ, ಗಡಿ ಕನ್ನಡಿಗರ ಸೇನೆ ಸೇರಿದಂತೆ ಅನೇಕ ಸಂಘಟನೆಯ ನಾಯಕರು ಮಾತನಾಡಿ, ಬೆಳಗಾವಿ, ನಿಪ್ಪಾಣಿ, ಖಾನಾಪುರ ಮತ್ತು ಗ್ರಾಮೀಣ ಭಾಗಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ತ್ವರಿತವಾಗಿ ಆಯೋಜಿಸಲು ಆಗ್ರಹಿಸಿದರು.
