ವರದಿಗಾರರು :
ಬಸವರಾಜ್ ||
ಸ್ಥಳ :
ಕೊಪ್ಪಳ
ವರದಿ ದಿನಾಂಕ :
25-09-2025
“ರಾಜ್ಯಮಟ್ಟದ ಸಿ.ಎಂ. ಕಪ್ಗೆ ಬೇತಲ್ ಪದವಿ ಮಹಿಳಾ ಮಹಾವಿದ್ಯಾಲಯದ ಕ್ರೀಡಾಪಟುಗಳ ಆಯ್ಕೆ – ಗಂಗಾವತಿ ಪಟುಗಳ ಚಾಮತ್�
"ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ದಸರಾ ಹಾಗೂ ಸಿ.ಎಂ. ಕಪ್–2025 ಕ್ರೀಡಾಕೂಟದಲ್ಲಿ ಗಂಗಾವತಿಯ ಬೇತಲ್ ಪದವಿ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಅದ್ಭುತ ಸಾಧನೆ ಮೆರೆದಿದ್ದಾರೆ
ಕೊಪ್ಪಳ ಜಿಲ್ಲೆಯನ್ನು ಪ್ರತಿನಿಧಿಸಿದ ಈ ಪಟುಗಳು ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಿ.ಎಂ. ಕಪ್ಗೆ ಆಯ್ಕೆಯಾಗಿದ್ದಾರೆ. ಮಹ್ಮದಿ ಬೇಗಂ, ದಾನಮ್ಮ, ರೇಖಾ, ಐಶ್ವರ್ಯ, ಆಶಾ ಮತ್ತು ಅಸ್ಮಾ ಅವರು ತಮತಮ ವಿಭಾಗಗಳಲ್ಲಿ ಪ್ರಥಮ ಸ್ಥಾನಗಳನ್ನು ಕಬಳಿಸಿ ಗಂಗಾವತಿಯ ಕೀರ್ತಿಯನ್ನು ಎತ್ತಿದ್ದಾರೆ.
ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್ ಹಾಗೂ ವುಶು ತರಬೇತುದಾರ ಬಾಬುಸಾಬ್ ವಿದ್ಯಾರ್ಥಿನಿಯರ ಹೋರಾಟ ಮನೋಭಾವ, ಶಿಸ್ತು ಮತ್ತು ಕ್ರೀಡಾಸ್ಫೂರ್ತಿಯನ್ನು ಶ್ಲಾಘಿಸಿ, ರಾಜ್ಯಮಟ್ಟದಲ್ಲಿ ಇನ್ನಷ್ಟು ಪದಕಗಳನ್ನು ತಂದುಕೊಡುವ ವಿಶ್ವಾಸ ವ್ಯಕ್ತಪಡಿಸಿದರು.
ಗಂಗಾವತಿ ಪಟುಗಳ ಈ ಚಾಮತ್ಕಾರಿಕ ಗೆಲುವು, ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಚಿನ್ನದ ಅಧ್ಯಾಯವಾಗಿ ಉಳಿಯಲಿದೆ."
