ವರದಿಗಾರರು :
ಬಸವರಾಜ ಪೂಜಾರಿ, ||
ಸ್ಥಳ :
ಬೀದರ್
ವರದಿ ದಿನಾಂಕ :
28-10-2025
ಗೌರಿ ಶುಗರ್ ಆ್ಯಂಡ್ ಡಿಸ್ಟಲರೀಸ್ ರೈತರಿಗೆ ಹೆಚ್ಚು ಬೆಲೆ – 15 ದಿನಗಳಲ್ಲಿ ಬಿಲ್ ಪಾವತಿ
ಬೀದರ್: ಭಾಲ್ಕಿ ತಾಲ್ಲೂಕಿನ ಬಾಜೋಳಗಾದ ಗೌರಿ ಶುಗರ್ ಆ್ಯಂಡ್ ಡಿಸ್ಟಲರೀಸ್ ಪ್ರೈವೇಟ್ ಲಿಮಿಟೆಡ್ (ಘಟಕ ಸಂಖ್ಯೆ 13) ಕಾರ್ಖಾನೆಯಲ್ಲಿ ಬಾಯ್ಲರ್ ಅಗ್ನಿ ಪ್ರದೀಪನಾ ಪೂಜೆ ಹಾಗೂ ಕಬ್ಬು ನುರಿಸುವ ಕಾರ್ಯಕ್ರಮ ನಡೆಯಿತು.
ಕಾರ್ಖಾನೆಯ ಮುಖ್ಯಸ್ಥರು ಮತ್ತು ಓಂಕಾರ ಗ್ರೂಪ್ಸ್ ಅಧ್ಯಕ್ಷರಾದ ಬಾಬುರಾವ್ ಬೋತ್ರೆ ಪಾಟೀಲ ಹಾಗೂ ಮಾಜಿ ಶಾಸಕ ಪ್ರಕಾಶ ಖಂಡ್ರೆ ಬಾಯ್ಲರ್ ಪೂಜೆ ನೆರವೇರಿಸಿದರು. ಇದೇ ವೇಳೆ ಯಂತ್ರಕ್ಕೆ ಕಬ್ಬು ಹಾಕಲಾಯಿತು
ಈ ಹಂಗಾಮಿನಲ್ಲಿ ಕಾರ್ಖಾನೆಯು ಜಿಲ್ಲೆಯ ಇತರೆ ಕಾರ್ಖಾನೆಗಳಿಗಿಂತ ಹೆಚ್ಚು ಬೆಲೆ ರೈತರಿಗೆ ನೀಡಲಿದ್ದು, ಕಬ್ಬು ಪೂರೈಸಿದ 15 ದಿನಗಳೊಳಗೆ ಬಿಲ್ ಪಾವತಿ ಮಾಡಲಾಗುವುದು ಎಂದು ಬಾಬುರಾವ್ ಬೋತ್ರೆ ಪಾಟೀಲ ಹೇಳಿದರು. ತೂಕ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ ಎಂದರು.
ಕಾರ್ಖಾನೆಗೆ ಕಬ್ಬು ಸಾಗಿಸಿ ಸಹಕರಿಸುವಂತೆ ರೈತರಿಗೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದೆ ರೂಪಾತಾಯಿ ಪಾಟೀಲ ನೀಲಂಗೆಕರ್, ರೇಖಾತಾಯಿ ಬಾಬುರಾವ್ ಬೋತ್ರೆ ಪಾಟೀಲ, ಮಾಜಿ ಸಚಿವ ಸಂಭಾಜಿರಾವ್ ಪಾಟೀಲ, ನಿರ್ದೇಶಕ ಓಂರಾಜೆ ಬೋತ್ರೆ ಪಾಟೀಲ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಹಾಗೂ ಕಾರ್ಖಾನೆಯ ವಿವಿಧ ಅಧಿಕಾರಿಗಳು ಮತ್ತು ಕಾರ್ಮಿಕರು ಉಪಸ್ಥಿತರಿದ್ದರು.
