ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
28-10-2025
ಕುಣಿಗಲ್ ತಹಸಿಲ್ದಾರ್ ರಶ್ಮಿಗೆ ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ – ಆಯೋಗದ ಕಠಿಣ ಕ್ರಮ
ತುಮಕೂರು: ಮಾಹಿತಿ ಹಕ್ಕು ಕಾಯ್ದೆಯಡಿ ನೀಡಲಾದ ಅರ್ಜಿಗೆ ಸರಿಯಾದ ಮಾಹಿತಿ ನೀಡದೇ, ಆಯೋಗದ ಆದೇಶಕ್ಕೂ ಗೌರವ ತೋರದೆ ವರ್ತಿಸಿದ ಕುಣಿಗಲ್ ತಹಸಿಲ್ದಾರ್ ರಶ್ಮಿ ವಿರುದ್ಧ ಮಾಹಿತಿ ಹಕ್ಕು ಆಯುಕ್ತ ರುದ್ರಣ್ಣ ಹರ್ತಿಕೋಟೆ ಗಂಭೀರ ಕ್ರಮ ಕೈಗೊಂಡಿದ್ದಾರೆ.
ಆಯುಕ್ತರು ತಮ್ಮ ತೀರ್ಪಿನಲ್ಲಿ, ತಹಸಿಲ್ದಾರ್‌ರ ನಿರ್ಲಕ್ಷ್ಯ ಮತ್ತು ಆಯೋಗದ ಆದೇಶದ ಅವಹೇಳನಕಾರಿ ವರ್ತನೆ ಹಿನ್ನೆಲೆಯಲ್ಲಿ ₹25,000 ದಂಡ ವಿಧಿಸುವಂತೆ ಹಾಗೂ ಅರ್ಜಿದಾರರಿಗೆ ₹5,000 ಪರಿಹಾರವನ್ನು ನೀಡುವಂತೆ ಆದೇಶಿಸಿದ್ದಾರೆ.
ಅದೇ ವೇಳೆ, ಅರ್ಜಿದಾರರು ಕೇಳಿದ್ದ ದಾಖಲೆಗಳು ಲಭ್ಯವಿಲ್ಲವೆಂದು ಉದಾಸೀನತೆಯಿಂದ ಹಿಂಬರಹ ನೀಡಿದ ಕಾರ್ಯಾಂಗದ ಅಧಿಕಾರಿಗಳಿಗೂ ಎಚ್ಚರಿಕೆ ಸೂಚನೆ ನೀಡಲಾಗಿದೆ.
ಈ ಪ್ರಕರಣವನ್ನು ಕೃಷ್ಣರಾಜಪೇಟೆಯ ಉಪ ಆಯುಕ್ತ (AC) ಕಿಶೋರ್ ಅವರ ಮೇಲ್ವಿಚಾರಣೆಯಲ್ಲಿ ಪರಿಗಣಿಸಲಾಯಿತು ಎಂದು ವರದಿಯಾಗಿದೆ.
ಮಾಹಿತಿ ಹಕ್ಕು ಕಾಯ್ದೆ (RTI Act, 2005) ಪ್ರಕಾರ, ಸರ್ಕಾರಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಮತ್ತು ಸಂಪೂರ್ಣ ಮಾಹಿತಿಯನ್ನು ನೀಡುವುದು ಕಡ್ಡಾಯ. ಅದನ್ನು ಉಲ್ಲಂಘಿಸಿದರೆ ಆಯೋಗದ ಆದೇಶದಡಿ ದಂಡ ವಿಧಿಸಬಹುದು.
