ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ಕೋಲಾರ
ವರದಿ ದಿನಾಂಕ :
27-10-2025
ಕೋಲಾರದಲ್ಲಿ ಬಾರ್ ಕ್ಯಾಶಿಯರ್ ಕೊಲೆ: ಎಣ್ಣೆ ಜೊತೆ ಮಿಕ್ಸ್ಚರ್ ನೀಡದ ಕಾರಣಕ್ಕೆ ದುಷ್ಕೃತ್ಯ
ಕೋಲಾರದ ಮಾಲೂರು ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಎಣ್ಣೆ ಜೊತೆ ಮಿಕ್ಸ್ಚರ್ ನೀಡದ ಕಾರಣಕ್ಕೆ ದುಷ್ಕರ್ಮಿ ಯೊಬ್ಬ ಬಾರ್ ಕ್ಯಾಶಿಯರ್ ಕುಮಾರ್ 45 ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಹಾಸನ ಮೂಲದ ಕುಮಾರ್ ಅವರು ಲಕ್ಕೂರು ಗ್ರಾಮದ ವೈನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದರು, ಆರೋಪಿ ಅವರ ಮನೆಗೆ ತೆರಳಿ ಅವರ ಪತ್ನಿ ಮತ್ತು ಮಕ್ಕಳ ಎದುರಿನಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಸಂಬಂಧ ಮಾಲೂರು ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
