ವರದಿಗಾರರು :
ಬಸವರಾಜ. ನಾಯಕ್ ||
ಸ್ಥಳ :
ಕೊಪ್ಪಳ
ವರದಿ ದಿನಾಂಕ :
19-09-2025
ರಾಜ್ಯಮಟ್ಟದ ಸಿ.ಎಂ. ಕಪ್ಗೆ ಬೇತಲ್ ಪದವಿ ಮಹಿಳಾ ಮಹಾವಿದ್ಯಾಲಯದ ಕ್ರೀಡಾಪಟುಗಳ ಆಯ್ಕೆ
ದಸರಾ ವುಶು ಕ್ರೀಡಾಕೂಟದಲ್ಲಿ ಗಂಗಾವತಿ ಪಟುಗಳ ಚಾಮತ್ಕಾರಿಕ ಗೆಲುವು ಗಂಗಾವತಿ :- ವಿಜಯನಗರ ಜಿಲ್ಲೆಯ ಹೊಸಪೇಟೆಯ ಕ್ರೀಡಾ ಸಂಕೀರ್ಣದಲ್ಲಿ ದಸರಾ ಹಾಗೂ ಸಿ.ಎಂ. ಕಪ್–2025 ಕಲಬುರ್ಗಿ ವಿಭಾಗ ಮಟ್ಟದ ವುಶು ಕ್ರೀಡಾಕೂಟವು ವಿಜೃಂಭಣೆಯಿಂದ ಜರುಗಿತು.
ಕೊಪ್ಪಳ, ವಿಜಯನಗರ, ಯಾದಗಿರಿ, ರಾಯಚೂರು, ಕಲಬುರ್ಗಿ, ಬೀದರ್ ಮತ್ತು ಬಳ್ಳಾರಿ ಜಿಲ್ಲೆಗಳ ಪಟುಗಳು ಭಾಗವಹಿಸಿದ ಈ ಕ್ರೀಡಾಕೂಟದಲ್ಲಿ ಗಂಗಾವತಿಯ ಬೇತಲ್ ಪದವಿ ಮಹಿಳಾ ಮಹಾವಿದ್ಯಾಲಯದ ಪಟುಗಳು ಚಾಮತ್ಕಾರಿಕ ಸಾಧನೆ ಮೆರೆದಿದ್ದಾರೆ. ಕೊಪ್ಪಳ ಜಿಲ್ಲೆಯನ್ನು ಪ್ರತಿನಿಧಿಸಿದ ಈ ಪಟುಗಳು ವಿವಿಧ ವಿಭಾಗಗಳಲ್ಲಿ ಪ್ರಥಮ ಸ್ಥಾನಗಳನ್ನು ಕಬಳಿಸಿ, ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಿ.ಎಂ. ಕಪ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತರ ಪಟ್ಟಿ: -39 ಕೆಜಿ ಮಹ್ಮದಿ ಬೇಗಂ ಪ್ರಥಮ ಸ್ಥಾನ, -42 ಕೆಜಿ ದಾನಮ್ಮ – ದ್ವಿತೀಯ, ತೈಜಿಶಾನ್ ವಿಭಾಗದಲ್ಲಿ ಪ್ರಥಮಸ್ಥಾನ, -45 ಕೆಜಿ ರೇಖಾ – ಪ್ರಥಮ ಸ್ಥಾನ, -48ಕೆಜಿ ಐಶ್ವರ್ಯ – ಪ್ರಥಮ ಸ್ಥಾನ, -52 ಕೆಜಿ ಆಶಾ – ಪ್ರಥಮ ಸ್ಥಾನ, -60 ಕೆಜಿ ಅಸ್ಮಾ – ಪ್ರಥಮ ಸ್ಥಾನ ಪಡೆದಿದ್ದಾರೆ. ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್ ಮಾತನಾಡಿ “ವಿದ್ಯಾರ್ಥಿನಿಯರ ಹೋರಾಟ ಮನೋಭಾವ ಮತ್ತು ಶಿಸ್ತು ಶ್ಲಾಘನೀಯ. ರಾಜ್ಯಮಟ್ಟದ ಸಿ.ಎಂ. ಕಪ್ನಲ್ಲಿ ಅವರು ಮತ್ತಷ್ಟು ಮೆರೆಯುವ ವಿಶ್ವಾಸವಿದೆ. ಪೋಷಕರ ಪ್ರೋತ್ಸಾಹವೂ ಈ ಸಾಧನೆಗೆ ಕಾರಣ” ಎಂದು ಸಂತೋಷ ವ್ಯಕ್ತಪಡಿಸಿದರು.
ರಾಜ್ಯ ವುಶೂ ತರಬೇತಿದಾರರಾದ ಬಾಬುಸಾಬ್ ಮಾತನಾಡುತ್ತ “ನಮ್ಮ ವಿದ್ಯಾರ್ಥಿನಿಯರು ತೋರಿದ ಹೋರಾಟ ಮನೋಭಾವ, ಶಿಸ್ತು ಮತ್ತು ಕ್ರೀಡಾಸ್ಫೂರ್ತಿ ನನಗೆ ಹೆಮ್ಮೆಯನ್ನುಂಟು ಮಾಡಿದೆ. ಇವರ ಸಾಧನೆ ಕೇವಲ ಕಾಲೇಜಿನಷ್ಟೇ ಅಲ್ಲ, ಗಂಗಾವತಿ ಹಾಗೂ ಕೊಪ್ಪಳ ಜಿಲ್ಲೆಯ ಗೌರವವನ್ನು ಹೆಚ್ಚಿಸಿದೆ. ರಾಜ್ಯಮಟ್ಟದ ಸಿ.ಎಂ. ಕಪ್ನಲ್ಲಿ ಇವರು ಇನ್ನಷ್ಟು ಮೆರೆದೂ ಹೆಚ್ಚಿನ ಪದಕಗಳನ್ನು ತಂದುಕೊಡುವ ವಿಶ್ವಾಸವಿದೆ. ಪೋಷಕರ ಹಾಗೂ ಕಾಲೇಜು ಆಡಳಿತ ಮಂಡಳಿಯ ನಿರಂತರ ಪ್ರೋತ್ಸಾಹವೇ ಈ ಸಾಧನೆಯ ಬಲವಾಗಿದೆ.”
ಗಂಗಾವತಿ ಪಟುಗಳ ಈ ಗೆಲುವು ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಪ್ರಭಾವಿ ಅಧ್ಯಾಯವಾಗಿ ಉಳಿಯಲಿದೆ.ಸಾಧನೆಯನ್ನು ಮೆಚ್ಚಿ ಬೇತಲ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧಿಕಾರಿ ಹೇಮಾ ಸುಧಾಕರ್, ಅಧ್ಯಕ್ಷ ರಾಜು ಸುಧಾಕರ್, ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್, ಖಜಾಂಚಿ ಸುಜಾತಾ ರಾಜು, ಮುಖ್ಯ ವುಶೂ ತರಬೇತುದಾರ ಬಾಬುಸಾಬ್ ಮತ್ತು ದೈಹಿಕ ಶಿಕ್ಷಕಿ ಗೀತಾ ಕೊಳ್ಳಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ರಾಜ್ಯಮಟ್ಟದಲ್ಲಿ ಯಶಸ್ಸಿನ ಹಾರೈಕೆ ಮಾಡಿದರು.
