ವರದಿಗಾರರು :
ನಾ.ಅಶ್ವಥ್ ಕುಮಾರ್ ||
ಸ್ಥಳ :
ಚಾಮರಾಜನಗರ
ವರದಿ ದಿನಾಂಕ :
11-11-2025
ಮಾರ್ಟಳ್ಳಿ ಧರ್ಮಗುರುಗಳಿಂದ ರೈತರ ಧರಣಿಗೆ ಬೆಂಬಲ
ಚಾಮರಾಜನಗರ: ಏತ ನೀರಾವರಿ ಯೋಜನೆ ರೂಪಿಸುವಂತೆ ಆಗ್ರಹಿಸಿ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ವಡಕೆಹಳ್ಳ ಗ್ರಾಮದಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ ಮಂಗಳವಾರ 16ನೇ ದಿನಕ್ಕೆ ಕಾಲಿಟ್ಟಿತು.
ಈ ಧರಣಿಗೆ ಮಾರ್ಟಳ್ಳಿ ಚರ್ಚ್ ಧರ್ಮಗುರು ಫಾ. ಡಾ. ಎಂ. ವಿನ್ಸೆಂಟ್ ಅವರ ನೇತೃತ್ವದಲ್ಲಿ ಧಾರ್ಮಿಕ ನಾಯಕರು ಬೆಂಬಲ ಸೂಚಿಸಿದರು. ಧರಣಿ ಸ್ಥಳದಲ್ಲಿ ಗ್ರಾಮಸ್ಥರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರು ಮಾತನಾಡಿ, “ನೀರಾವರಿ ಯೋಜನೆಗಾಗಿ ನಾವು ಶಾಂತಿಯುತ ಹೋರಾಟ ನಡೆಸುತ್ತಿದ್ದೇವೆ. ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಧರಣಿಯನ್ನು ಮುಂದುವರಿಸಲಾಗುವುದು,” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಫಾ. ಡಾ. ಎಂ. ವಿನ್ಸೆಂಟ್, ಫಾ. ಪ್ರಕಾಶ್, ಫಾ. ಸಂತಿಯಾಗು, ಮಾರ್ಟಳ್ಳಿ ಕಾನ್ವೆಂಟಿನ ಕನ್ಯಾಸ್ತ್ರೀಯರು, ಮಾಜಿ ಸೈನಿಕ ಜೋಸೆಫ್, ನಿವೃತ್ತ ಶಿಕ್ಷಕ ಆಲ್ಬರ್ಟ್, ರೈತ ಸಂಘದ ಅಧ್ಯಕ್ಷ ಅರ್ಪುದರಾಜ್ ಹಾಗೂ ಕಾರ್ಯದರ್ಶಿ ಲೂರ್ದುಸ್ವಾಮಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
