ವರದಿಗಾರರು :
ಶ್ರೀನಿವಾಸ್ ಹೆಚ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
28-10-2025
ಟರ್ಕಿಯಲ್ಲಿ ರಾತ್ರಿ 6.1 ಭೂಕಂಪ! ಕಟ್ಟಡಗಳು ನೆಲಸಮ – ಮಕ್ಕಳ ಸಮೇತ ನೂರಾರು ಕುಟುಂಬ ಬೀದಿಗೆ
ರಾತ್ರೋರಾತ್ರಿ ಪ್ರಬಲ ಭೂಕಂಪ ಸಂಭವಿಸಿ ಭಾರೀ ವಿನಾಶಕ್ಕೆ ಕಾರಣವಾಗಿದೆ. ಟರ್ಕಿಯ ಸಿಂದಿರ್ಗಿಯಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ಕಟ್ಟಡಗಳು ಅಲುಗಾಡಿದೆ. ಇನ್ನೂ ಕೆಲವು ಕಟ್ಟಡಗಳು ನೆಲಸಮವಾಗಿದೆ. ಮಕ್ಕಳ ಸಮೇತ ಕುಟುಂಬಗಳು ಮನೆತೊರೆದು ಬೀದಿಗೆ ಬಂದಿದ್ದಾರೆ.
ರಾತ್ರೋರಾತ್ರಿ (Night) ಎಲ್ಲರೂ ಊಟ ಮಾಡಿ ಮಲಗುವ ಸಮಯದಲ್ಲಿ ಪ್ರಬಲ ಭೂಕಂಪ (Earthquake) ಸಂಭವಿಸಿದ್ದು, ಜನರನ್ನೇ ನಡುಗಿಸಿದೆ. ಟರ್ಕಿಯ (Turkey) ಪೂರ್ವ ಭಾಗದಲ್ಲಿ ಮತ್ತೊಮ್ಮೆ ಭಯಾನಕ ಭೂಕಂಪ ಸಂಭವಿಸಿದೆ. ಸೋಮವಾರ ತಡರಾತ್ರಿ ಸ್ಥಳೀಯ ಸಮಯ ಪ್ರಕಾರ ರಾತ್ರಿ 10:48ಕ್ಕೆ (GMT 19:48) ಸಿಂದಿರ್ಗಿ ನಗರದಲ್ಲಿ ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಭೂಕಂಪ ಬೆಳಕಿಗೆ ಬಂದಿದೆ. ಇದರಿಂದ ಭಾರೀ ಹಾನಿ ಸಂಭವಿಸಿದೆ.
ಇಜ್ಮಿರ್ ನಗರದಿಂದ ಸುಮಾರು 138 ಕಿಲೋಮೀಟರ್ ದೂರದಲ್ಲಿರುವ ಸಿಂದಿರ್ಗಿ ಎಂಬ ಸಣ್ಣ ಪಟ್ಟಣವು ಪರ್ವತ ಪ್ರದೇಶದಲ್ಲಿದ್ದು, ಭೂಕಂಪನ ಚಟುವಟಿಕೆಗೆ ಗುರಿಯಾಗುವಂತಿದೆ. ಈ ಭೂಕಂಪದ ಸ್ಪರ್ಶಗಳು ದೇಶದ ಆರ್ಥಿಕ ರಾಜಧಾನಿ ಇಸ್ತಾನ್‌ಬುಲ್ ಮತ್ತು ಪ್ರವಾಸಿ ಕೇಂದ್ರ ಇಜ್ಮಿರ್‌ನವರೆಗೂ ಕಂಡುಬಂದಿವೆ. ರಾತ್ರಿ ಪ್ರಬಲ ಭೂಕಂಪ, ಜನರಲ್ಲಿ ಆತಂಕ! ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ಸಂಸ್ಥೆ (AFAD) ಪ್ರಕಾರ, ಇದು ಕಳೆದ ಮೂರು ತಿಂಗಳಲ್ಲಿ ಈ ಪ್ರದೇಶದ ಮೇಲೆ ಬೀರಿದ ಎರಡನೇ ಪ್ರಮುಖ ಭೂಕಂಪವಾಗಿದೆ. ರಾತ್ರಿ ಸಂಭವಿಸಿದ ಭೂಕಂಪದಲ್ಲಿ ಹಲವಾರು ಕಟ್ಟಡಗಳು ಬಿರುಕು ಬಿಟ್ಟಿವೆ. ಇನ್ನೂ ಕೆಲವು ಕಟ್ಟಡಗಳು ನೆಲಸಮವಾಗಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ. ಇದರಿಂದಾಗಿ ಅನೇಕ ಕುಟುಂಬ ಮನೆಗಳನ್ನು ತೊರೆದು ಬೀದಿಗೆ ಬಂದಿದ್ದಾರೆ. ಮಕ್ಕಳು, ವೃದ್ಧರು ಸೇರಿ ಜನರು ಆತಂಕದಲ್ಲಿದ್ದಾರೆ.
