ವರದಿಗಾರರು :
;ಡಾ . ಜ್ಯೋತಿ , ||
ಸ್ಥಳ :
ತುಮಕೂರು
ವರದಿ ದಿನಾಂಕ :
08-10-2025
ಲಿವುಡ್ ಬಿಗ್ ಬಾಸ್ ಮನೆಗೆ ಬೀಗಮುದ್ರೆ – ಶೋ ಭವಿಷ್ಯ ಗೊಂದಲದಲ್ಲಿ ಬೆಂಗಳೂರು,
ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋಸ್ ನಲ್ಲಿ ನಿರ್ಮಿಸಲಾಗಿದ್ದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮನೆಯು ಸಂಪೂರ್ಣವಾಗಿ ನಿಯಮ ಉಲ್ಲಂಘನೆ ಮೂಲಕ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ತೀವ್ರ ಕ್ರಮ ಕೈಗೊಂಡಿದೆ.
ಜಿಲ್ಲಾ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ಬಳಿಕ, ಅಕ್ರಮವಾಗಿ ನಿರ್ಮಿತ ಸೆಟ್‌ಗೆ ಬೀಗಮುದ್ರೆ ಹಾಕಲಾಗಿದ್ದು, ಜೊತೆಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನು ಕೂಡ ಕಡಿತಗೊಳಿಸಲಾಗಿದೆ. ಈ ಕ್ರಮದ ಪರಿಣಾಮವಾಗಿ, ಬಿಗ್ ಬಾಸ್ 12ನೇ ಆವೃತ್ತಿಯ ಚಿತ್ರೀಕರಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಹೈಕೋರ್ಟ್ ಮೆಟ್ಟಿಲೆರುವ ಜಾಲಿವುಡ್: ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜಾಲಿವುಡ್ ಸ್ಟುಡಿಯೋಸ್ ಆಡಳಿತ ಮಂಡಳಿ, ಸರಕಾರದ ಕ್ರಮವನ್ನು ಪ್ರಶ್ನಿಸಿ ಇಂದು ಹೈಕೋರ್ಟ್ ಮೆಟ್ಟಿಲು ಎರುವ ಸಾಧ್ಯತೆ ಇದೆ. ನ್ಯಾಯಾಲಯದಿಂದ ನಿರೀಕ್ಷಿಸಲಾದ ತಾತ್ಕಾಲಿಕ ತಡೆ ಆಜ್ಞೆ (ಸ್ಟೇ) ದೊರಕಿದರೆ, ಶೋ ಮತ್ತೆ ಮುಂದುವರಿಯುವ ಸಾಧ್ಯತೆ ಇದೆ.
ಸ್ಪರ್ಧಿಗಳಿಗೆ ರೆಸಾರ್ಟ್‌ನ ಆಶ್ರಯ: ಪ್ರಸ್ತುತ ಬಿಗ್ ಬಾಸ್ ಮನೆ ಮುಚ್ಚಲ್ಪಟ್ಟ ಹಿನ್ನೆಲೆಯಲ್ಲಿ, ಶೋನಲ್ಲಿರುವ 17 ಮಂದಿ ಸ್ಪರ್ಧಿಗಳನ್ನು ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಈಗಲ್ ಟನ್ ರೆಸಾರ್ಟ್ ಗೆ ಸ್ಥಳಾಂತರಿಸಲಾಗಿದೆ. ಅಲ್ಲಿ 12 ಕೊಠಡಿಗಳನ್ನು ಸ್ಪರ್ಧಿಗಳಿಗಾಗಿ ಕಾಯ್ದಿರಿಸಲಾಗಿದೆ ಎನ್ನಲಾಗಿದೆ.
ಹಿಂದಿನ ಅಕ್ರಮ ಚಟುವಟಿಕೆಗಳ ಮಾಹಿತಿ: ಜಾಲಿವುಡ್ ಆಡಳಿತ ಮಂಡಳಿ 2024ರಿಂದಲೇ ಈ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದು, ಯಾವುದೇ ಸರಕಾರಿ ಅನುಮತಿ ಇಲ್ಲದೆ ವರ್ಷಕ್ಕೆ ಮೂರ್ನಾಲ್ಕು ತಿಂಗಳು ಬಿಗ್ ಬಾಸ್ ಶೋ ಚಿತ್ರೀಕರಣ ನಡೆಸುತ್ತಿದ್ದುದು ಅಧಿಕಾರಿಗಳ ತನಿಖೆಯಲ್ಲಿ ಬಹಿರಂಗವಾಗಿದೆ.
ಮುಂದೆ ಏನೆಂಬುದರತ್ತ ಕುತೂಹಲ: ಈ ಪ್ರಕರಣದ ಬಗ್ಗೆ ರಾಜ್ಯ ಹೈಕೋರ್ಟ್ ಯಾವ ತೀರ್ಮಾನ ನೀಡುತ್ತದೆ ಎಂಬುದನ್ನು ಕೇಳಿ ಬಿಗ್ ಬಾಸ್ ಕನ್ನಡ ಶೋ ಭವಿಷ್ಯ ನಿರ್ಧರವಾಗಲಿದೆ. ಶೋ ಮುಂದುವರಿಯಬಹುದೋ ಅಥವಾ ಬೇರೆ ಸ್ಥಳಕ್ಕೆ ಸ್ಥಳಾಂತರಗೊಳ್ಳಬಹುದೋ ಎಂಬ ಚರ್ಚೆ ಈಗಾಗಲೇ ಶುರುವಾಗಿದೆ.
