ವರದಿಗಾರರು :
ರಾಮಕೃಷ್ಣೇಗೌಡ, ||
ಸ್ಥಳ :
ಮೈಸೂರು
ವರದಿ ದಿನಾಂಕ :
07-10-2025
ತಂಬಾಕು ಹರಾಜು ಪೂರ್ವ ಸಭೆ – ರೈತರಿಂದ ಬೆಲೆಯ ಸುಧಾರಣೆ ಸೇರಿದಂತೆ ಹಲವು ಬೇಡಿಕೆಗಳು
ಕಟ್ಟೆಮಳಲವಾಡಿ, ಹುಣಸೂರು ತಾಲ್ಲೂಕು – 06 ಅಕ್ಟೋಬರ್ 2025:
ಕಟ್ಟೆಮಳಲವಾಡಿ ತಂಬಾಕು ಮಾರುಕಟ್ಟೆಯಲ್ಲಿ ತಂಬಾಕು ಹರಾಜು ನಿರ್ದೇಶಕರು ದಿನಾಂಕ 8-10-2025 ರಿಂದ ಮಾರುಕಟ್ಟೆ ಆರಂಭವಾಗಲಿದೆ ಎಂದು ತಿಳಿಸಿ, ರೈತರಿಗೆ ಶಿಸ್ತು ಮತ್ತು ನಿರ್ದೇಶನ ಪಾಲನೆಯ apel ಮಾಡಿದರು. ರೈತರು ತಂಬಾಕು ಮಂಡಳಿಯ ಮಾರ್ಗಸೂಚಿಗಳನ್ನು ಪಾಲಿಸಿದರೆ ಮಾತ್ರ ಸಹಕಾರ ಸಿಗುತ್ತದೆ ಎಂದು ಅವರು ತಿಳಿಸಿದರು.
ಈ ಸಭೆಯಲ್ಲಿ ಹಲವಾರು ರೈತರು ತಮ್ಮ ಸಮಸ್ಯೆಗಳನ್ನು ಮತ್ತು ಬೇಡಿಕೆಗಳನ್ನು ಮುಂದಿಟ್ಟರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹುಣಸೂರು ತಾಲ್ಲೂಕು ಅಧ್ಯಕ್ಷ ಮೋದೂರು ಮಹೇಶ್ ಅವರು ಮಾತನಾಡಿ, ಈ ಬಾರಿ ಹವಾಮಾನ ವೈಪರಿತ್ಯದಿಂದಾಗಿ ತಂಬಾಕು ಬೆಳೆಗೆ ಭಾರಿ ಹಾನಿಯಾಗಿದ್ದು, ರೈತರು ಮೂರು ಬಾರಿ ಗೊಬ್ಬರ ಹಾಕಿದ್ರು ಕೂಡ ಬೆಳೆಯು ಕುಂಠಿತವಾಗಿದೆ. ಇಡೀ ಬೆಳೆ ಹರಾಜಿಗೆ ತರುವ ಹಂತದಲ್ಲಿದ್ದಾಗ 'ಬ್ಲಾಕ್' ಆಗಿ ಮತ್ತೆ ನಷ್ಟಕ್ಕೆ ದಾರಿ ಮಾಡಿಕೊಟ್ಟಿದೆ ಎಂದರು.
ಮುಖ್ಯ ಬೇಡಿಕೆಗಳು:
ರೈತರು ಖರೀದಿಸಿದ ರಸಗೊಬ್ಬರದ ವೆಚ್ಚವನ್ನು ತಂಬಾಕು ಮಂಡಳಿ ಭರಿಸಬೇಕು.
ತಂಬಾಕು ಪ್ರಾರಂಭಿಕ ಬೆಲೆ ಕನಿಷ್ಠ ₹350 ಆಗಿರಬೇಕು.
ಸರಾಸರಿ ಬೆಲೆ ₹375 ಆಗಿ ನಿಗದಿಪಡಿಸಬೇಕು.
ಆಂಧ್ರಪ್ರದೇಶದಲ್ಲಿ ಉನ್ನತ ದರ್ಜೆಯ ತಂಬಾಕಿಗೆ ₹420 ಸಿಗುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ಹೆಚ್ಚು ಬೆಲೆ ನೀಡಬೇಕು.
ಈ ಎಲ್ಲ ಬೇಡಿಕೆಗಳನ್ನು ಮುಖ್ಯವಾಗಿ ಮುಂದಿಟ್ಟುಕೊಂಡು, ಮೋದೂರು ಮಹೇಶ್ ಅವರು ತಂಬಾಕು ಹರಾಜು ಅಧೀಕ್ಷಕರಿಗೆ ಮನವಿಪತ್ರವನ್ನು ಸಲ್ಲಿಸಿದರು.
