ವರದಿಗಾರರು :
ರಾಜ್ಯ ವರದಿಗಾರರು, ||
ಸ್ಥಳ :
ಹರಿಹರ
ವರದಿ ದಿನಾಂಕ :
28-10-2025
16.52 ಲಕ್ಷ ಮೌಲ್ಯದ 30 ಬೈಕ್ ವಶ
ದಾವಣಗೆರೆ: ಇಬ್ಬರು ಅಂತರ ಜಿಲ್ಲಾ ಬೈಕ್ ಕಳ್ಳರು ಸಿಕ್ಕುಬಿದ್ದರು – 16.52 ಲಕ್ಷ ಮೌಲ್ಯದ 30 ಬೈಕ್ ವಶ ದಾವಣಗೆರೆ: ಜಿಲ್ಲೆಯ ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಹರಿಹರ ನಗರ ಠಾಣೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಇಬ್ಬರು ಅಂತರ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ₹16,52,000 ಮೌಲ್ಯದ ವಿವಿಧ ಕಂಪನಿಗಳ 30 ಬೈಕ್‌ಗಳು ವಶಪಡಿಸಿಕೊಳ್ಳಲಾಗಿದೆ. ಘಟನೆ ಹಿನ್ನೆಲೆ:
ಹರಿಹರೇಶ್ವರ ಲೇಔಟ್‌ನ ಶ್ರೀಜಿತ್ (ದಿನಾಂಕ: 26-05-2025), ಇಂದಿರಾನಗರದ ಶಾಬಾಜ್ (13-06-2025), ವಿದ್ಯಾನಗರದ ಮಂಜುನಾಥ (24-06-2025) ಮತ್ತು ನಿತೀಶ್ (31-07-2025) ತಮ್ಮ ದ್ವಿಚಕ್ರ ವಾಹನಗಳು ಕಳವಾಗಿರುವ ಬಗ್ಗೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳ ಪತ್ತೆ ಕಾರ್ಯ:
ಬೈಕ್ ಕಳ್ಳತನ ಪ್ರಕರಣಗಳ ಪತ್ತೆಗೆ ಎಸ್‌ಪಿ ಉಮಾ ಪ್ರಶಾಂತ್ (ಐಪಿಎಸ್), ಎಎಸ್ಪಿ ಪರಮೇಶ್ವರ ಹೆಗಡೆ, ಹಾಗೂ ಡಿವೈಎಸ್ಪಿ ಬಿ.ಎಸ್. ಬಸವರಾಜ್ ಮಾರ್ಗದರ್ಶನದಲ್ಲಿ, ಹರಿಹರ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಆರ್.ಎಫ್. ದೇಸಾಯಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು. ತಂಡವು ತಾಂತ್ರಿಕ ಹಾಗೂ ಬೌತಿಕ ಸಾಕ್ಷ್ಯಾಧಾರಗಳ ನೆರವಿನಿಂದ ತನಿಖೆ ಮುಂದುವರಿಸಿ, ಕಳ್ಳರ ಸುಳಿವು ಪತ್ತೆಹಚ್ಚಿತು. ಬಂಧನ ವಿವರ:
ದಿನಾಂಕ 17-10-2025 ರಂದು ಹರಿಹರ ನಗರದ ಹರಪನಹಳ್ಳಿ ರಸ್ತೆಯಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಆರೋಪಿತರಾದ
ಪ್ರತಾಪ (ತಂದೆ ಲಚ್ಚಾನಾಯ್ಕ್) – ದೊಡ್ಡಲಿಂಗೇನಹಳ್ಳಿ ಗ್ರಾಮ, ತರಿಕೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ
ಬೋಜರಾಜ್ (ತಂದೆ ಮಂಜುನಾಥ) – ಗದ್ದಿಕೆರೆ ಗ್ರಾಮ, ಹಗರಿಬೊಮ್ಮನಹಳ್ಳಿ ತಾಲ್ಲೂಕು, ಬಳ್ಳಾರಿ ಜಿಲ್ಲೆ ಇವರನ್ನು ತಡೆದು ವಿಚಾರಣೆ ನಡೆಸಿದಾಗ, ಅನೇಕ ಬೈಕ್ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದವು. ಆರೋಪಿಗಳ ಹಿನ್ನೆಲೆ:
ಈ ಇಬ್ಬರು ಆರೋಪಿಗಳು ಹಿಂದೆಯೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಟೌನ್ ಪೊಲೀಸ್ ಠಾಣೆ ಹಾಗೂ ಬಾಗಲಕೋಟೆ ಜಿಲ್ಲೆಯ ಹುನಗುಂದ ಠಾಣೆಗಳಲ್ಲಿ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಬಂಧಿತರಾಗಿದ್ದರು. ಪೊಲೀಸ್ ಶ್ಲಾಘನೆ:
ಅಂತರ ಜಿಲ್ಲಾ ಬೈಕ್ ಕಳ್ಳತನ ಪ್ರಕರಣ ಪತ್ತೆಹಚ್ಚಿದ ಹರಿಹರ ಠಾಣೆ ಪತ್ತೆ ತಂಡವನ್ನು ಎಸ್‌ಪಿ ಉಮಾ ಪ್ರಶಾಂತ್ ಐಪಿಎಸ್ ಶ್ಲಾಘಿಸಿದ್ದಾರೆ.
