ವರದಿಗಾರರು :
ನಜ್ರುಲ್ಲಾ ಬೇಗ್ ||
ಸ್ಥಳ :
ತುಮಕೂರು
ವರದಿ ದಿನಾಂಕ :
21-10-2025
ಕಬಡ್ಡಿ: ದಕ್ಷಿಣ ಕನ್ನಡ ಬಾಲಕ-ಬಾಲಕಿಯರ ತಂಡಗಳ ರಾಜ್ಯ ಮಟ್ಟದ ಚಾಂಪಿಯನ್ ಜಯ
ತುಮಕೂರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಾಲಕರ ಮತ್ತು ಬಾಲಕಿಯರ ತಂಡಗಳು ಚಾಂಪಿಯನ್‌ಶಿಪ್ ಗೆದ್ದಿವೆ.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಆಶ್ರಯದಲ್ಲಿ ನಡೆದ ಎರಡು ದಿನಗಳ ಟೂರ್ನಿಯಲ್ಲಿ 30 ಜಿಲ್ಲೆಗಳಿಂದ ಒಟ್ಟು 66 ತಂಡಗಳು ಭಾಗವಹಿಸಿದ್ದವು. ಬಾಲಕರ ವಿಭಾಗದ ಫೈನಲ್‌ನಲ್ಲಿ ದಕ್ಷಿಣ ಕನ್ನಡ ತಂಡವು ವಿಜಯಪುರವನ್ನು 36–26 ಅಂಕಗಳಿಂದ ಸೋಲಿಸಿ ಚಾಂಪಿಯನ್ ಆಯಿತು. ಬಾಲಕಿಯರ ವಿಭಾಗದ ಫೈನಲ್ ಪಂದ್ಯವು ರೋಚಕವಾಗಿದ್ದು, ದಕ್ಷಿಣ ಕನ್ನಡದ ಬಾಲಕಿಯರು ಚಿಕ್ಕೋಡಿಯನ್ನು 46–44 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಜಯಿಸಿದರು.
ಬಾಲಕರು: ಉತ್ತಮ ರೇಡರ್ – ಸಂದೀಪ್ (ವಿಜಯಪುರ), ಉತ್ತಮ ಡಿಫೆಂಡರ್ – ಆನಂದ್ (ದಕ್ಷಿಣ ಕನ್ನಡ), ಉತ್ತಮ ಆಲ್ ರೌಂಡರ್ – ಸಯೀಮ್ (ಉಡುಪಿ)
ಬಾಲಕಿಯರು: ಉತ್ತಮ ರೇಡರ್ – ಹಂಷಿತಾ (ದಕ್ಷಿಣ ಕನ್ನಡ), ಉತ್ತಮ ಡಿಫೆಂಡರ್ – ರುಕ್ಸಾನಾ (ಹಾವೇರಿ), ಉತ್ತಮ ಆಲ್ ರೌಂಡರ್ – ಸುರಕ್ಷಾ (ಚಿಕ್ಕೋಡಿ)
