ವರದಿಗಾರರು :
ಮಹೇಶ್ ಕುಮಾರ್, ||
ಸ್ಥಳ :
ಬಳ್ಳಾರಿ
ವರದಿ ದಿನಾಂಕ :
14-11-2025
ಬಳ್ಳಾರಿಯಲ್ಲಿ ಅಗ್ನಿವೀರ್ ನೇಮಕಾತಿ — 200 ಅಭ್ಯರ್ಥಿಗಳು ಮುಂದಿನ ಹಂತಕ್ಕೆ
ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿಯ ಮೊದಲ ದಿನ ಸ್ಪಂದನೆ ಉತ್ತಮವಾಗಿತ್ತು. ಬೆಂಗಳೂರು ಆರ್‌ಓ ಕಚೇರಿ ವ್ಯಾಪ್ತಿಯ 13 ಜಿಲ್ಲೆಗಳ ಸುಮಾರು 400 ಯುವಕರು ರ‍್ಯಾಲಿಗೆ ಹಾಜರಾಗಿ ತಮ್ಮ ದೈಹಿಕ ಹಾಗೂ ಶಾರೀರಿಕ ಸಾಮರ್ಥ್ಯ ಪರೀಕ್ಷೆಗಳಿಗೆ ಒಳಪಟ್ಟರು.
ನಿಗದಿತ ಸಮಯಕ್ಕೆ ಅಭ್ಯರ್ಥಿಗಳು ವರದಿ ಮಾಡಿಕೊಂಡು 1,600 ಮೀ. ಓಟ, ದೈಹಿಕ ಸಾಮರ್ಥ್ಯ, ಮೈ ಒತ್ತುವಿಕೆ, ಜಂಪ್ ಸೇರಿದಂತೆ ವಿವಿಧ ಹಂತಗಳ ಪರೀಕ್ಷೆಗಳನ್ನು ಎದುರಿಸಿದರು. ದಿನವಿಡೀ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಒಟ್ಟು 200 ಯುವಕರು ಮುಂದಿನ ಹಂತಕ್ಕೆ ಅರ್ಹರು ಎಂದು ಸೇನಾ ನೇಮಕಾತಿ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ರ‍್ಯಾಲಿ ಪ್ರಕ್ರಿಯೆ ಶಿಸ್ತುಬದ್ಧ ಹಾಗೂ ಪಾರದರ್ಶಕವಾಗಿ ನಡೆಯಿತು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ಹಂತದ ಪರೀಕ್ಷೆಗಳ ಬಗ್ಗೆ ಅಗತ್ಯ ಮಾರ್ಗದರ್ಶನವನ್ನು ಅಧಿಕಾರಿಗಳು ನೀಡಿದರು. ನೇಮಕಾತಿ ರ‍್ಯಾಲಿ ಮುಂದಿನ ದಿನಗಳಲ್ಲೂ ಮುಂದುವರಿಯಲಿದೆ ಎಂದು ಮಾಹಿತಿ ನೀಡಲಾಗಿದೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
