ವರದಿಗಾರರು :
ಶಿವು ರಾಠೋಡ. ||
ಸ್ಥಳ :
ಹುಣಸಗಿ
ವರದಿ ದಿನಾಂಕ :
27-11-2025
ಗುಳಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದೇಣಿಗೆ
ಗುಳಬಾಳ, ಹುಣಸಗಿ ತಾಲ್ಲೂಕಿನ ಗುಳಬಾಳ ಗ್ರಾಮದ ನಿವಾಸಿ ಶ್ರೀಮತಿ ಯಂಕಮ್ಮ ಬಮ್ಮನಳ್ಳಿ ಅವರು ತಮ್ಮ ಹಳೆಯ ಶಾಲೆಗೆ ₹10,000/- (ಹತ್ತು ಸಾವಿರ ರೂಪಾಯಿ) ಮೌಲ್ಯದ ಮೈಕ್ ಸೌಂಡ್ ಸಿಸ್ಟಮ್ ದೇಣಿಗೆ ನೀಡಿದರು. ಅವರು ತಮ್ಮ ಶಾಲೆಯಲ್ಲಿ ಓದಿದವರು ಆದ ಕಾರಣ, “ನಾನು ಕಲಿತ ಶಾಲೆ ನನ್ನ ಹೆಮ್ಮೆ” ಎಂಬ ಅಭಿಮಾನದಿಂದ, ಶಾಲೆಯಲ್ಲಿ ನಡೆಯುವ ರಾಷ್ಟ್ರೀಯ ಕಾರ್ಯಕ್ರಮಗಳು, ಜಯಂತಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ತಮ್ಮ ವೈಯಕ್ತಿಕ ಹಣದಲ್ಲಿ ಈ ದೇಣಿಗೆ ನೀಡಿದ್ದಾರೆ. ಶಿಕ್ಷಕರು ಈ ಉದಾಹರಣೆಯನ್ನು ಸಹೂರು ಹಿತಕರವಾಗಿ ಕುರಿತು, ಹುಣಸಗಿ ತಾಲ್ಲೂಕಿನ ಎಲ್ಲಾ ಪದವೀಧರರಿಗೂ ತಮ್ಮ ಊರಿನ ಶಾಲೆಗೆ ದೇಣಿಗೆ ನೀಡುವಂತೆ ಪ್ರೇರಣೆ ನೀಡಿದರು ಎಂದು ತಿಳಿಸಿದ್ದಾರೆ. ಈ ಪ್ರಯತ್ನಕ್ಕೆ ನಮ್ಮ ಶಾಲೆಯ ಎಲ್ಲಾ ಶಿಕ್ಷಕರ ಪ್ರೇರಣೆ ಎಂದು ಪ್ರಧಾನ ಗುರು ಭೀಮನಗೌಡ ಬಿರಾದಾರ ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷರು ದೈಹಿಕ ಶಿಕ್ಷಕರಾದ ಬಸನಗೌಡ ವಠಾರ, ಶಿಕ್ಷಕರಾದ ಪ್ರಭುಗೌಡ ಬಿರಾದಾರ, ಕಡ್ಲಬಾಳಪ್ಪ, ಹುಲಗಣ್ಣ ಹೊಸಮನಿ, ಯಂಕಮ್ಮ ಬಮ್ಮನಳ್ಳಿ, ಭಾಗ್ಯಶ್ರೀ ಕಕ್ಕೇರಿ, ಸರೋಜಾ ಅಂಬಿಗೇರ ಮತ್ತು ಇತರರು ಉಪಸ್ಥಿತರಿದ್ದರು.
