ಲೈವ್ ಟಿವಿ ನ್ಯೂಸ್

ದಿನಾಂಕ : 15-04-2025

‘ಕುಬೇರ’ ಚಿತ್ರದ ಪೋಸ್ಟರ್ ಔಟ್- ಧನುಷ್ ಸಿನಿಮಾ ಬಗ್ಗೆ ಸಿಕ್ತು ಅಪಡೇಟ್ !

ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ್
ವರದಿ ಸ್ಥಳ :ಬೆಂಗಳೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 7416+

ತಮಿಳಿನ ನಟ ಧನುಷ್ ‘ಕುಬೇರ’ ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಸದ್ಯ ಈ ಸಿನಿಮಾದ ಪೋಸ್ಟರ್‌ವೊಂದು ರಿಲೀಸ್ ಆಗಿದೆ. ಈ ಚಿತ್ರದ ಮೊದಲ ಸಾಂಗ್ ರಿಲೀಸ್ ಬಗ್ಗೆ ಚಿತ್ರತಂಡ ಬಿಗ್ ಅಪ್‌ಡೇಟ್‌ವೊಂದು ಕೊಟ್ಟಿದೆ.

ಧನುಷ್, ರಶ್ಮಿಕಾ ಮಂದಣ್ಣ, ನಾಗಾರ್ಜುನ ಅಕ್ಕಿನೇನಿ ನಟನೆಯ ‘ಕುಬೇರ’ ಸಿನಿಮಾದ ಮೊದಲ ಹಾಡನ್ನು ಏ.20ರಂದು ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ. ಧನುಷ್ ನಟನೆಯ ಜೊತೆ ಡ್ಯಾನ್ಸ್‌ನಲ್ಲಿಯೂ ಮುಂದು. ಹಾಗಾಗಿ ಅವರು ಸಖತ್ ಮಾಸ್ ಮತ್ತು ಕ್ಲಾಸ್ ಡ್ಯಾನ್ಸ್ ಮಾಡಿದ್ದಾರೆ ಎಂಬುದು ಪೋಸ್ಟರ್ ಲುಕ್‌ನಿಂದ ಸುಳಿವು ಸಿಕ್ಕಿದೆ. ಸಾಂಗ್ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

ಈಗಾಗಲೇ ಧನುಷ್ ಭಿಕ್ಷುಕನ ರೋಲ್‌ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಚಿತ್ರತಂಡ ರಿಲೀಸ್ ಮಾಡಿತ್ತು. ನಿಜಕ್ಕೂ ಸಿನಿಮಾದಲ್ಲಿ ಧನುಷ್ ಭಿಕ್ಷಕನಾ ಅಥವಾ ಚಿತ್ರದ ಟೈಟಲ್ ತಕ್ಕಂತೆ `ಕುಬೇರ’ನಾ ಎಂಬುದನ್ನು ಸಿನಿಮಾ ರಿಲೀಸ್ ಆಗುವವರೆಗೂ ಕಾಯಬೇಕಿದೆ.

‘ಪುಷ್ಪ 2′ ಸಕ್ಸಸ್ ಬಳಿಕ ರಶ್ಮಿಕಾ ಮಂದಣ್ಣ ನಟಿಸಿರುವ `ಕುಬೇರ’ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಜೂನ್ 20ರಂದು ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand