ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
06-04-2025
ನ್ಯೂಜಿಲೆಂಡ್‌ನ v/s ಪಾಕಿಸ್ತಾನ: ಕ್ರಿಕೆಟ್ ಪಂದ್ಯದ ವೇಳೆಯೇ ಗ್ರೌಂಡ್‌ನಲ್ಲಿ ಪವರ್‌ಕಟ್; ಮುಂದೇನಾಯ್ತು?
ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ(New Zealand) ಬೇ ಓವಲ್ ಸ್ಟೇಡಿಯಂನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ನಡೆಯುತ್ತಿದ್ದಾಗಲೇ ಕರೆಂಟ್ ಹೋದ ವಿಚಿತ್ರ ಘಟನೆ ನಡೆದಿದೆ.
ನ್ಯೂಜಿಲೆಂಡ್‌ನ ಬೌಲರ್ ಜಾಕೋಬ್ ಡಫಿ ಬೌಲಿಂಗ್ ಮಾಡುತ್ತಿದ್ದಾಗ ಏಕಾಏಕಿ ಸ್ಟೇಡಿಯಂನಲ್ಲಿ ಕರೆಂಟ್ ಹೋಗಿದೆ. ಆಗ ಪಾಕಿಸ್ತಾನದ ತಹೀರ್ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಅಚ್ಚರಿ ಏನೆಂದರೆ, ಕರೆಂಟ್ ಹೋಗುವಷ್ಟರಲ್ಲಿ ತಹೀರ್ ಔಟ್ ಆಗಿದ್ದರು. 31 ಎಸೆತಗಳಲ್ಲಿ 33 ರನ್ ಗಳಿಸಿದ್ದ ತಹೀರ್ ಪೆವಿಲಿಯನ್‌ನತ್ತ ಮುಖ ಮಾಡಿದರು. ಈ ಘಟನೆಯು ಸ್ಟೇಡಿಯಂನಲ್ಲಿದ್ದ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿತು.
ಶನಿವಾರ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಮೂರನೇ ಏಕದಿನ ಪಂದ್ಯ ನಡೆಯಿತು. ಮೊದಲು ಕ್ರೀಸ್‌ಗೆ ಇಳಿದ ನ್ಯೂಜಿಲೆಂಡ್ ತಂಡ 50 ಓವರ್‌ಗಳಲ್ಲಿ 264 ರನ್ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ ಪಾಕ್ ತಂಡ, 40 ಓವರ್‌ಗಳಲ್ಲಿ 221 ರನ್‌ಗೆ ಆಲೌಟ್ ಆಯಿತು. ಈ ಮೂಲಕ ನ್ಯೂಜಿಲೆಂಡ್ ತಂಡ ಪಾಕಿಸ್ತಾನವನ್ನು 3-0 ಅಂತರದಲ್ಲಿ ವೈಟ್‌ವಾಶ್ ಮಾಡಿತು.
