ವರದಿಗಾರರು :
ಮಲ್ಲಿಕಾರ್ಜುನ ಬಿ ಎಚ್ ||
ಸ್ಥಳ :
ಕಲಬುರಗಿ
ವರದಿ ದಿನಾಂಕ :
15-11-2025
“ಬಿಹಾರ ಎನ್‌ಡಿಎ ಗೆಲುವಿಗೆ ವಾಡಿಯಲ್ಲಿ ಬಿಜೆಪಿ ಸಂಭ್ರಮ ಜೋರಾಗಿ”
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವಾಡಿ ಪಟ್ಟಣದ ಆಜಾದ್ ವೃತ್ತದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿದರು. ಸಿಹಿ ಹಂಚಿಕೆ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಥಳೀಯ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, ಎನ್‌ಡಿಎ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮತದಾರರಿಗೆ ಧನ್ಯವಾದಗಳನ್ನು ತಿಳಿಸಿದರು.
ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ, “ಬಿಜೆಪಿ ಮತಗಳ್ಳತನ ಮಾಡಿದೆ ಎಂಬ ರಾಹುಲ್ ಗಾಂಧಿಯ ಆರೋಪಕ್ಕೆ ಬಿಹಾರದ ಜಾಗೃತ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಅಭಿವೃದ್ಧಿ ವಿರೋಧಿಗಳು ಸೋಲು ಕಂಡಾಗ ಮತಯಂತ್ರ-ಮತ ಕಳುವಿನ ನಾಟಕ ಆರಂಭಿಸುವುದು ಹೊಸದೇನಲ್ಲ” ಎಂದು ಹೇಳಿದರು.
ಪುರಸಭೆ ವಿರೋಧ ಪಕ್ಷದ ಮಾಜಿ ನಾಯಕ ಭೀಮಶಾ ಜಿರೋಳ್ಳಿ ಮಾತನಾಡಿ, “ಈ ಫಲಿತಾಂಶ ಪ್ರಧಾನಿ ಮೋದಿಯವರ ಜನಪ್ರಿಯತೆಯ ಪ್ರತಿಬಿಂಬ. ವಿರೋಧ ಪಕ್ಷಗಳು ದೇಶ, ಸಂವಿಧಾನ ಮತ್ತು ಜನರ ಗೌರವವನ್ನು ಕಲಿಯುವ ಕಾಲ ಬಂದಿದೆ” ಎಂದರು.
ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್‌ಸಿ ಮೋರ್ಚಾ ಅಧ್ಯಕ್ಷ ದೌಲತರಾವ, ಕಿಶನ ಜಾಧವ, ಅಂಬದಾಸ ಜಾಧವ, ಶಿವಶಂಕರ ಕಾಶೆಟ್ಟಿ, ರಾಮು ರಾಠೋಡ, ವಿಶ್ವರಾಧ್ಯ ತಳವಾರ, ಈರಣ್ಣಗೌಡ ಕಡಬೂರ, ಬಾಳು ಪವಾರ, ಸಿದ್ದಾರ್ಥ ವಾಡಿ, ಮಲ್ಲಿಕಾರ್ಜುನ ಹೇರೊರ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿ ‘ಬಿಜೆಪಿ ಜಯಘೋಷ’ ಮೊಳಗಿಸಿದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
