ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
28-04-2025
ಪಾಕ್ ಮೇಲೆ ಡಿಜಿಟಲ್ ಸ್ಟ್ರೈಕ್ – ಬಿಬಿಸಿಗೂ ಬಿಸಿ ಮುಟ್ಟಿಸಿದ ಸರ್ಕಾರ !
ನವದೆಹಲಿ: ಪಹಲ್ಗಾಮ್ ದಾಳಿಯ ನಂತರ ಭಾರತದ ಬಗ್ಗೆ ಸುಳ್ಳು ಮಾಹಿತಿಯನ್ನು ಪ್ರಕಟಿಸುತ್ತಿದ್ದ ಪಾಕಿಸ್ತಾನ ಯೂಟ್ಯೂಬ್ ಚಾನೆಲ್‌ಗಳ ಮೇಲೆ ಭಾರತ ಡಿಜಿಟಲ್ ಸ್ಟ್ರೈಕ್ ಮಾಡಿದೆ.
ಕೇಂದ್ರ ಗೃಹ ಸಚಿವಾಲದ ಶಿಫಾರಸುಗಳ ಆಧಾರದಲ್ಲಿ 16 ಯೂಟ್ಯೂಬ್ ಚಾನೆಲ್‌ಗಳನ್ನು ಯೂಟ್ಯೂಬ್ ಭಾರತದಲ್ಲಿ ಬ್ಲಾಕ್ ಮಾಡಿದೆ. ಬ್ಲಾಕ್ ಆದ ಚಾನೆಲ್‌ಗಳ ಪಟ್ಟಿಯಲ್ಲಿ ಡಾನ್ ನ್ಯೂಸ್, ಸಾಮ್ನಾ ಟಿವಿ, ಜಿಯೊ ನ್ಯೂಸ್, ಪಾಕ್ ಮಾಜಿ ಆಟಗಾರ ಶೋಯೆಬ್ ಅಕ್ತರ್ ಅವರ ಚಾನೆಲ್ ಇದೆ.
ಉಗ್ರರ ದಾಳಿಯ ನಂತರ ಭಾರತ, ಭಾರತೀಯ ಸೇನೆ, ಭದ್ರತಾ ಪಡೆಗಳ ವಿರುದ್ಧ ಪ್ರಚೋದನಕಾರಿ ವಿಷಯವನ್ನು ಪ್ರಸಾರ ಮಾಡುತ್ತಿದ್ದವು.
ಈಗ ಈ ಚಾನೆಲ್ ವಿಡಿಯೋ ಮೇಲೆ ಕ್ಲಿಕ್ ಮಾಡಿದರೆ “This content is currently unavailable in this country because of an order from the government related to national security or public order.” ಎಂಬ ಸಂದೇಶ ಕಾಣಿಸುತ್ತಿದೆ.
ಪಹಲ್ಗಾಮ್ ದಾಳಿಯ ನಂತರ ಭಾರತವನ್ನು ಗುರಿಯಾಗಿಸಿ ವರದಿ ಪ್ರಕಟಿಸುತ್ತಿರುವ ಯುಕೆ ಮೂಲದ ಬಿಬಿಸಿಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿ ಮಾಡಿದೆ. ತನ್ನ ಸುದ್ದಿಗಳಲ್ಲಿ ʼmilitantsʼ ಜಾಗದಲ್ಲಿ ʼterroristsʼ ಎಂದು ಬಳಸುವಂತೆ ಸೂಚಿಸಿದೆ.
ಕನ್ನಡದಲ್ಲಿ Militants ಪದಕ್ಕೆ ಅರ್ಥ ಹುಡುಕಿದರೆ ʼಉಗ್ರರುʼ ಎಂದೇ ಗೂಗಲ್ ತೋರಿಸುತ್ತದೆ. ಆದರೆ ಇಂಗ್ಲಿಷ್‌ನಲ್ಲಿ Militants ಅಂದರೆ ಉಗ್ರರು ಎಂಬ ಅರ್ಥ ಬರುವುದಿಲ್ಲ. ಸಶಸ್ತ್ರ ಪ್ರತಿರೋಧ, ದಂಗೆಗಳು ಅಥವಾ ಗೆರಿಲ್ಲಾ ಯುದ್ಧದಲ್ಲಿ ತೊಡಗಿರುವ ವ್ಯಕ್ತಿಗಳು, ಬಂಡುಕೋರರು ಅಥವಾ ಗುಂಪುಗಳನ್ನು ವಿವರಿಸಲು ಸಾಮಾನ್ಯವಾಗಿ ಈ ಪದವನ್ನು ಬಳಸಲಾಗುತ್ತದೆ. ಸರ್ಕಾರದ ವಿರುದ್ಧ ವಿಮೋಚನಾ ಹೋರಾಟ ಮಾಡುತ್ತಿರುವ ವಿಮೋಚನಾ ಹೋರಾಟಗಾರರು, ಪ್ರತ್ಯೇಕವಾದಿಗಳು ಎಂಬ ಅರ್ಥ ಕೊಡುತ್ತದೆ.
