ವರದಿಗಾರರು :
ಫಯಾಜ್ ತೇಲಿ , ||
ಸ್ಥಳ :
ಕೊಪ್ಪಳ
ವರದಿ ದಿನಾಂಕ :
09-09-2025
“ಹಿಂಗಾರು ಬಿತ್ತನಗೆ ಬೀಜ ಯೂರಿಯಾ ಗೊಬ್ಬರ ಕೊರತೆ ಆಗದಂತೆ ರಾಜ್ಯ ರೈತ ಸಂಘದಿಂದ ಆಗ್ರಹ”
ರಾಜ್ಯಾದ್ಯಂತ ಹಿಂಗಾರು ಬಿತ್ತನಗೆ ಬೀಜ ಯೂರಿಯಾ ಗೊಬ್ಬರ ಕೊರತೆ ಆಗದಂತೆ ಮುಂಚಿತವಾಗಿ ಸಂಗ್ರಹಣೆ ಮಾಡಲು ರಾಜ್ಯ ರೈತ ಸಂಘದಿಂದ ಆಗ್ರಹಿಸಿದರು. ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಪೂರ್ವ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ಈರುಳ್ಳಿಗೆ ಹಾಕಲು ಕೊಪ್ಪಳ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೊರತೆಯಿಂದಾಗಿ ಈಗಾಗಲೇ ಹೆಸರು ಸೇರಿದಂತೆ ಮೆಕ್ಕೆಜೋಳ ಈರುಳ್ಳಿ ಬೆಳೆ ಕೆಂಪಾಗಿ ಸಪೂರ್ಣ ನಾಶವಾಗಿದೆ. ನಾಶಾವಾದ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು ಆಗ್ರಹಿಸಿದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಕೃಷಿ ಸಚಿವರು ಸ್ಥಳೀಯ ಶಾಸಕರು ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲೆಯ ರೈತರು ಯೂರಿಯಾ ರಸಗೊಬ್ಬರ ಬೀಜ ಎಷ್ಟು ಖರೀದಿಸಿದರೂ ಸಿಗುವಂತೆ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮುಂಚಿತವಾಗಿ ಹಿಂಗಾರು ಬಿತ್ತನಗೆ ಯೂರಿಯಾ ಗೊಬ್ಬರ ಬೀಜ ಸಂಗ್ರಹಣೆ ಮಾಡಿ ಇಟ್ಟುಕೊಳ್ಳಬೇಕೆಂದು ರೈತ ಸಂಘದ ರಾಜು ಉಪಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಹಾಗೂ ರೈತ ಮುಖಂಡ ಯಲ್ಲಪ್ಪ ಎಚ್ ಬಾಬರಿ ಇವರು ಮುಂಚಿತವಾಗಿ ಕ್ರಮಕೈಗೊಳ್ಳಲು ರಾಜ್ಯ ರೈತ ಸಂಘದಿಂದ ಎಚ್ಚರಿಸಿದರು.
