ವರದಿಗಾರರು :
ಕಿಶೋರ್ ಎ. ಸಿ. ||
ಸ್ಥಳ :
ಕೃಷ್ಣರಾಜಪೇಟೆ
ವರದಿ ದಿನಾಂಕ :
07-11-2025
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಗುಡ್‌ನ್ಯೂಸ್: ₹3 ಲಕ್ಷವರೆಗೂ ಕಡಿಮೆ ಬಡ್ಡಿದರ ಸಾಲ!
ಕೃಷ್ಣರಾಜಪೇಟೆ: ರಾಜ್ಯದ ಕೋಟ್ಯಾಂತರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗಾಗಿ ಸಂತೋಷದ ಸುದ್ದಿ ಬಂದಿದೆ. ಈಗಾಗಲೇ ಪ್ರತಿ ತಿಂಗಳು ₹2,000 ಪಾವತಿ ಪಡೆಯುತ್ತಿರುವ ಮಹಿಳೆಯರಿಗೆ ಸರ್ಕಾರ ಮತ್ತೊಂದು ಆರ್ಥಿಕ ಭದ್ರತೆ ನೀಡುತ್ತಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಘೋಷಿಸಿರುವಂತೆ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ‘ಗೃಹಲಕ್ಷ್ಮಿ ಸೊಸೈಟಿ’ ಮೂಲಕ ₹3 ಲಕ್ಷವರೆಗೂ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ನಿರ್ಧರಿಸಲಾಗಿದೆ.
ಈ ಯೋಜನೆ ಮಹಿಳೆಯರಿಗೆ ತಮ್ಮ ಸ್ವಂತ ಉದ್ಯಮ, ವ್ಯವಹಾರ ಅಥವಾ ಜೀವನೋಪಾಯವನ್ನು ಸುಗಮವಾಗಿ ರೂಪಿಸಲು ಅವಕಾಶ ನೀಡುತ್ತದೆ. ಗೃಹಲಕ್ಷ್ಮಿ ಯೋಜನೆಯ ಈ ಹೊಸ ಹಂತವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮತ್ತೊಂದು ದೊಡ್ಡ ಹೆಜ್ಜೆಯಾಗಲಿದೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
