
ಲೈವ್ ಟಿವಿ ನ್ಯೂಸ್

ದಿನಾಂಕ : 31-03-2025
ಸೆಟ್ಟೇರಿತು ಚಿರಂಜೀವಿ 157ನೇ ಸಿನಿಮಾ- ಕ್ಲಾಪ್ ಮಾಡಿ ಶುಭ ಹಾರೈಸಿದ ವಿಕ್ಟರಿ ವೆಂಕಟೇಶ್ !
ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ್
ವರದಿ ಸ್ಥಳ :ಬೆಂಗಳೂರು
ಒಟ್ಟು ಓದುಗರ ಸಂಖ್ಯೆ : 14458+
ಮೆಗಾಸ್ಟಾರ್ ಚಿರಂಜೀವಿ ಹೊಸ ಸಿನಿಮಾ ಸೆಟ್ಟೇರಿದೆ. ಬಹುನಿರೀಕ್ಷಿತ ವಿಶ್ವಂಭರ ಸಿನಿಮಾ ರಿಲೀಸ್‌ಗೂ ಮುನ್ನವೇ ಹೊಸ ಚಿತ್ರಕ್ಕೆ ಚಿರಂಜೀವಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅವರ ಮುಂದಿನ ಸಿನಿಮಾಗೆ ಖ್ಯಾತ ನಿರ್ದೇಶಕ ಅನಿಲ್ ರವಿಪುಡಿ ನಿರ್ದೇಶನ ಮಾಡ್ತಿದ್ದಾರೆ.
ಹೈದರಾಬಾದ್‌ನಲ್ಲಿ ಚಿತ್ರದ ಮುಹೂರ್ತ ಸಮಾರಂಭ ಜರುಗಿದೆ. ಚಿತ್ರಕ್ಕೆ ವಿಕ್ಟರಿ ವೆಂಕಟೇಶ್ ಕ್ಲ್ಯಾಪ್ ಮಾಡಿ ಶುಭಕೋರಿದ್ದಾರೆ. ನಿರ್ಮಾಪಕ ಅಲ್ಲು ಅರವಿಂದ್ ಕ್ಯಾಮೆರಾಗೆ ಚಾಲನೆ ನೀಡಿದರು. ಖ್ಯಾತ ನಿರ್ದೇಶಕ ಕೆ. ರಾಘವೇಂದ್ರ ಫಸ್ಟ್ ಶಾಟ್ ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಖ್ಯಾತ ನಿರ್ಮಾಪಕರಾದ ದಿಲ್ ರಾಜು ಹಾಗೂ ಸಿರೀಶ್ ಸ್ಕ್ರಿಪ್ಟ್ ಹಸ್ತಾಂತರಿಸಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ನಿರ್ದೇಶಕರಾದ ಬಾಬಿ, ವಸಿಷ್ಠ, ಶ್ರೀಕಾಂತ್ ಒಡೆಲಾ, ಖ್ಯಾತ ಕಥೆಗಾರ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿರಂಜೀವಿ ನಟನೆಯ 157ನೇ ಚಿತ್ರಕ್ಕೆ ನಿರ್ದೇಶಕ ಅನಿಲ್ ರವಿಪುಡಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕ ಮೆಗಾಸ್ಟಾರ್ ಅವರನ್ನು ಹೊಸ ಅವತಾರದಲ್ಲಿ ಪರಿಚಯಿಸಲು ರೆಡಿಯಾಗಿದ್ದಾರೆ. ಶಂಕರ್ ವರಪ್ರಸಾದ್ ಎಂಬ ಪಾತ್ರದಲ್ಲಿ ಚಿರಂಜೀವಿ ನಟಿಸಲಿದ್ದಾರೆ.ಅನಿಲ್ ರವಿಪುಡಿ ಮನರಂಜನೆಗೆ ಎಮೋಷನ್ ಟಚ್ ಕೊಟ್ಟು ಕಥೆ ರೂಪಿಸಿದ್ದಾರಂತೆ.
ಶೈನ್ ಸ್ಕ್ರೀನ್‌ಗಳು ಮತ್ತು ಗೋಲ್ಡ್ ಬಾಕ್ಸ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ನಡಿ ಸಾಹು ಗರಪತಿ ಮತ್ತು ಸುಶ್ಮಿತಾ ಕೊನಿಡೇಲ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅರ್ಚನಾ ಪ್ರೆಸೆಂಟ್ ಮಾಡುತ್ತಿದ್ದಾರೆ. ಭೀಮ್ ಸಿಸಿರೋಲಿಯೋ ಸಂಗೀತ ನಿರ್ದೇಶನ, ತಮ್ಮಿರಾಜು ಸಂಕಲನ, ಸಮೀರ್ ರೆಡ್ಡಿ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ. ಶೀಘ್ರದಲ್ಲೇ ಚಿರಂಜೀವಿಯವರ 157 ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















