ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
06-03-2025
ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಮ್ಯಾಕ್‌ಬುಕ್ ಏರ್ !
Apple MacBook Air M4 Launched: ಟೆಕ್ ದೈತ್ಯ ಆಪಲ್ ಫುಲ್ ಸ್ಪೀಡ್ನಲ್ಲಿದೆ. ಹೊಸ ಉತ್ಪನ್ನಗಳನ್ನು ಒಂದರ ನಂತರ ಒಂದರಂತೆ ಬಿಡುಗಡೆ ಮಾಡುತ್ತಿದೆ. ಕೆಲ ದಿನಗಳ ಹಿಂದೆ ಐಫೋನ್ 16ಇ, M3 ಚಿಪ್‌ನೊಂದಿಗೆ iPad Air, 11 ನೇ ತಲೆಮಾರಿನ iPad (2025) ಐಪ್ಯಾಡ್ ಏರ್‌ಗಾಗಿ ಹೊಸ ಮ್ಯಾಜಿಕ್ ಕೀಬೋರ್ಡ್ ಅನ್ನು ಸಹ ಬಿಡುಗಡೆ ಮಾಡಿತು. ಈಗ ತನ್ನ ಇತ್ತೀಚಿನ M4 ಚಿಪ್‌ನೊಂದಿಗೆ ಹೊಸ ಮ್ಯಾಕ್‌ಬುಕ್ ಏರ್ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ.
ಮಾರ್ಚ್ 2024 ರಲ್ಲಿ ಬಿಡುಗಡೆಯಾದ M3 ಮ್ಯಾಕ್‌ಬುಕ್ ಏರ್ ಉತ್ತಮ ಜನಪ್ರಿಯತೆಯೊಂದಿಗೆ ಮಾರಾಟದಲ್ಲಿ ಗಗನಕ್ಕೇರುತ್ತಿದೆ. ಕಂಪನಿಯು ಇದೀಗ ತನ್ನ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು ಭಾರತೀಯ ಮಾರುಕಟ್ಟೆಯಲ್ಲಿ M4 ಚಿಪ್‌ಸೆಟ್‌ನೊಂದಿಗೆ ಅಪ್ಡೇಟ್ಡ್ ಹೊಸ ಮ್ಯಾಕ್‌ಬುಕ್ ಏರ್ ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಲ್ಯಾಪ್‌ಟಾಪ್ ಎಂಟ್ರಿಯೊಂದಿಗೆ ಆಪಲ್ ಈಗ ತನ್ನ ಹಳೆಯ M2 ಮತ್ತು M3 ಚಿಪ್‌ಸೆಟ್ ಮ್ಯಾಕ್‌ಬುಕ್ ಏರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೊರಹಾಕುತ್ತಿದೆ.
ಮ್ಯಾಕ್‌ಬುಕ್ ಏರ್ ಎಂ4 ಮಾರಾಟ: ಭಾರತದಲ್ಲಿ ಈ ಹೊಸ ಮ್ಯಾಕ್‌ಬುಕ್ ಏರ್‌ಗಾಗಿ ಪ್ರೀ - ಆರ್ಡರ್‌ಗಳು ಮಾರ್ಚ್ 5 ರಿಂದ ಪ್ರಾರಂಭವಾಗಿದ್ದು, ಇದರ ಮಾರಾಟ ಮಾರ್ಚ್ 12 ರಿಂದ ಶುರುವಾಗಲಿದೆ.
ಆಪಲ್‌ನ ಈ ಹೊಸ ಲ್ಯಾಪ್‌ಟಾಪ್ 13 ಇಂಚುಗಳು ಮತ್ತು 15 ಇಂಚುಗಳ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇನ್ನು ಇವು ಸ್ಕೈಬ್ಲೂ, ಸಿಲ್ವರ್, ಸ್ಟಾರ್ಲೈಟ್ ಮತ್ತು ಮಿಡ್ನೈಡ್ ಕಲರ್ ಆಪ್ಶನ್ಗಳಲ್ಲಿ ಮೂಡಿ ಬರಲಿವೆ.
13 ಇಂಚಿನ ಮ್ಯಾಕ್‌ಬುಕ್ ಏರ್ ಬೆಲೆ ರೂ. 99,900 ಆದ್ರೆ, 15 ಇಂಚಿನ ಮ್ಯಾಕ್‌ಬುಕ್ ಏರ್ ಬೆಲೆ ರೂ. 1,24,900 ಆಗಿದೆ.
ಮ್ಯಾಕ್‌ಬುಕ್ ಏರ್ M4 ಸ್ಪೆಸಿಫಿಕೇಶನ್ಸ್: *ಡಿಸೈನ್: 13 ಇಂಚಿನ ಮತ್ತು 15-ಇಂಚಿನ ಮ್ಯಾಕ್‌ಬುಕ್ ಏರ್ ವೇರಿಯಂಟ್ಸ್ ಅಲ್ಯೂಮಿನಿಯಂ ಯುನಿಬಾಡಿ ಡಿಸೈನ್ನೊಂದಿಗೆ ಬರುತ್ತವೆ. 13 ಇಂಚಿನ ವೇರಿಯಂಟ್ 1.24 ಕೆಜಿ ಮತ್ತು 15-ಇಂಚಿನ ವೇರಿಯಂಟ್ 1.51 ಕೆಜಿ ತೂಕವಿದೆ. *ಡಿಸ್ಪ್ಲೇ: 13 ಇಂಚಿನ ವೇರಿಯಂಟ್ 13.6-ಇಂಚಿನ ಲಿಕ್ವಿಡ್ ರೆಟಿನಾ ಡಿಸ್ಪ್ಲೇ ಮತ್ತು 2560x1664 ಪಿಕ್ಸೆಲ್ಸ್ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇನ್ನು 15-ಇಂಚಿನ ವೇರಿಯಂಟ್ 15.3-ಇಂಚಿನ ಲಿಕ್ವಿಡ್ ರೆಟಿನಾ ಡಿಸ್ಪ್ಲೆ ಮತ್ತು 2880 x 1864 ಪಿಕ್ಸೆಲ್ಸ್ ರೆಸಲ್ಯೂಶನ್ ಹೊಂದಿದೆ. ಈ ಎರಡೂ ರೂಪಾಂತರಗಳು 500 ನಿಟ್ಸ್ ಬ್ರೈಟ್ನೆಸ್ ಹೊಂದಿದೆ. *ಪ್ರೊಸೆಸರ್: ಈ ಹೊಸ ಮ್ಯಾಕ್‌ಬುಕ್ ಏರ್ ಆಪಲ್ M4 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. *RAM ಮತ್ತು ಸ್ಟೋರೇಜ್: ಇತ್ತೀಚಿನ ಮ್ಯಾಕ್‌ಬುಕ್ ಏರ್ 13 ಇಂಚಿನ ಮತ್ತು 15 ಇಂಚಿನ ವೇರಿಯಂಟ್ಸ್ 16GB, 24GB ಮತ್ತು 32GB RAM ಆಪ್ಶನ್ಳೊಂದಿಗೆ 256GB ಮತ್ತು 512GB SSD ಸ್ಟೋರೇಜ್ ಸ್ಥಳಾವಕಾಶದ ಆಯ್ಕೆಗಳೊಂದಿಗೆ ಲಭ್ಯವಿದೆ. *ಸಾಫ್ಟ್‌ವೇರ್: ಈ ಸಾಧನವು ಮ್ಯಾಕೋಸ್ ಸಿಕ್ವೊಯಾವನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. ಇದು ಆಪಲ್ ಇಂಟೆಲಿಜೆನ್ಸ್ ಬೆಂಬಲಿಸುತ್ತದೆ. *ಕ್ಯಾಮೆರಾ: ಈ ಹೊಸ ಮ್ಯಾಕ್‌ಬುಕ್ ಏರ್‌ನ ಎರಡೂ ರೂಪಾಂತರಗಳು 12MP ಸೆಂಟರ್ ಸ್ಟೇಜ್ ಕ್ಯಾಮೆರಾದೊಂದಿಗೆ ಲಭ್ಯ ಇವೆ. *ಬ್ಯಾಟರಿ: 13 ಇಂಚಿನ ಮ್ಯಾಕ್‌ಬುಕ್ ಏರ್ 53.8 Whr Li-ಪಾಲಿಮರ್ ಬ್ಯಾಟರಿ ಮತ್ತು 30W USB ಟೈಪ್-ಸಿ ಅಡಾಪ್ಟರ್ ಹೊಂದಿದೆ. ಅಂತೆಯೇ 15 ಇಂಚಿನ ರೂಪಾಂತರವು 66.5 Whr ಲಿಥಿಯಂ-ಪಾಲಿಮರ್ ಬ್ಯಾಟರಿ ಮತ್ತು 35W USB ಟೈಪ್-ಸಿ ಅಡಾಪ್ಟರ್ ಹೊಂದಿದೆ. ಇವೆರಡೂ 70W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತವೆ. *ಕನೆಕ್ಟಿವಿಟಿ: ಈ ಹೊಸ ಮ್ಯಾಕ್‌ಬುಕ್ ಏರ್ Wi-Fi 6E, ಬ್ಲೂಟೂತ್ 5.3 ಮತ್ತು ಎರಡು Thunderbolt 4 ಪೋರ್ಟ್‌ಗಳನ್ನು ಹೊಂದಿದೆ. ಇವುಗಳ ಜೊತೆಗೆ ಇದು 4-ಸ್ಪೀಕರ್ ಸೌಂಡ್ ಸಿಸ್ಟಮ್, ಬ್ಯಾಕ್‌ಲಿಟ್ ಮ್ಯಾಜಿಕ್ ಕೀಬೋರ್ಡ್, ಟಚ್ ಐಡಿ ಬೆಂಬಲವನ್ನು ನೀಡುತ್ತದೆ. ಸಾಧನವು ಮಲ್ಟಿ-ಡಿಸ್ಪ್ಲೇ ಸೆಟಪ್ ಅನ್ನು ಸಹ ಸಪೋರ್ಟ್ ಮಾಡುತ್ತದೆ.
ಆಪಲ್‌ನ ಇತ್ತೀಚಿನ M4 ಚಿಪ್‌ಸೆಟ್‌ನೊಂದಿಗೆ ಮ್ಯಾಕ್‌ಬುಕ್ ಏರ್ ಬಿಡುಗಡೆಯೊಂದಿಗೆ ಹಳೆಯ M2 ಮತ್ತು M3 ಆಧಾರಿತ ಮ್ಯಾಕ್‌ಬುಕ್ ಏರ್ ಅನ್ನು ಆಪಲ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಲಭ್ಯವಿರುವುದಿಲ್ಲ. ಆದರೂ ನೀವು ಈ ಮಾದರಿಗಳನ್ನು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ವೆಬ್‌ಸೈಟ್‌ಗಳ ಮೂಲಕ ಸ್ಟಾಕ್ ಇರುವವರೆಗೆ ಖರೀದಿಸಬಹುದಾಗಿದೆ.
