ವರದಿಗಾರರು :
ಬಸವರಾಜ್ ನವಣಿ ||
ಸ್ಥಳ :
ಬೆಳಗಾವಿ
ವರದಿ ದಿನಾಂಕ :
17-11-2025
ಚಳಿಗಾಲ ಅಧಿವೇಶನ ವಿರುದ್ಧ ಎಂಇಎಸ್ ಮಹಾಮೇಳಾವ; ಪೊಲೀಸ್ ಆಯುಕ್ತರಿಗೆ ಮನವಿ
ಬೆಳಗಾವಿಯಲ್ಲಿ ಡಿ. 8ರಂದು ನಡೆಯುವ ಚಳಿಗಾಲದ ಅಧಿವೇಶನದ ವಿರೋಧಿಸಿ ಎಮ್ ಇಎಸ್ ಸಂಘಟನೆ ಮಹಾಮೇಳಾವ ನಡೆಸಲು ಮುಂದಾಗಿದೆ. ಅದಕ್ಕೆ ಸಿದ್ದತೆ ನಡೆಸಿದ್ದು, ಈ ಬಗ್ಗೆ ಬೆಳಗಾವಿಯ ಮರಾಠಾ ಭವನದಲ್ಲಿ ರವಿವಾರ ಸಭೆ ನಡೆಸಿದ್ದಾರೆ. ಅಲ್ಲದೆ ಕನ್ನಡಗರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ತಾವೇ ಆಂದೋಲನ ಮಾಡುವ ಬಗ್ಗೆ ಪೊಲೀಸ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅಶಾಂತಿಯನ್ನು ಉಂಟು ಮಾಡುವ ಝಾಪಾಗಳು ರವಿವಾರ ಬೆಳಗಾವಿಯ ಮರಾಠಾ ಭವನದಲ್ಲಿ ಸಭೆ ನಡೆಸಿ ರಾಜ್ಯ ಸರಕಾರ ಬರುವ ಡಿ. 8ರಂದು ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ಚಳಿಗಾಲ ಅಧಿವೇಶನ ವಿರುದ್ಧ ಮಹಾಮೇಳಾವ ನಡೆಸುವ ಕುರಿತು ಚರ್ಚೆ ನಡೆಸಿದ್ದಾರೆ.
ಅಲ್ಲದೆ ಬೆಳಗಾವಿಯಲ್ಲಿ ಕನ್ನಡಿಗರು ಅನ್ಯ ಭಾಷೆಯ ನಾಮಫಲಕಗಳ ವಿರುದ್ಧ ನಡೆಸುತ್ತಿರುವ ಹೋರಾಟದ ವಿರುದ್ದ ಕ್ರಮಕೈಗೊಳ್ಳುವಂತೆ ಬೆಳಗಾವಿ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರಿಗೆ ಮನವಿ ಸಲ್ಲಿಸಿ, ಕನ್ನಡಿಗರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ತಾವು ಆಂದೋಲನ ನಡೆಸುವು ದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಮಾಜಿ ಶಾಸಕ ಕಿಣೇಕರ ತಾವು ಬರುವ ಡಿ. 8ರಂದು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ವಿರುದ್ಧ ಮಹಾಮೇಳಾವ ನಡ ನೀಡುವಂತೆ ಪೊಲೀಸ್ ಆಯುಕ್ತರಿಗೆ ಮನ ಕಿಣೇಕರ ಹೇಳಿಕೆ ನೀಡಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
