ಲೈವ್ ಟಿವಿ ನ್ಯೂಸ್

ದಿನಾಂಕ : 03-04-2025

ಸದ್ದಿಲ್ಲದೇ ಗುಡ್ ನ್ಯೂಸ್ ಕೊಟ್ಟ Bigg Boss ಧರ್ಮ ಕೀರ್ತಿರಾಜ್‌; ಜೊತೆಗಿರುವ ನಟಿ ಯಾರು ಅಂತ ಗೊತ್ತಾಯ್ತಾ?

ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ್
ವರದಿ ಸ್ಥಳ :ಬೆಂಗಳೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 13061+

'ಬಿಗ್ ಬಾಸ್' ಕನ್ನಡ ಸೀಸನ್ 11ರಲ್ಲಿ ಎಲ್ಲರಿಂದ ಜಂಟಲ್‌ಮನ್ ಅಂತ ಕರೆಸಿಕೊಂಡವರು ನಟ ಧರ್ಮ ಕೀರ್ತಿರಾಜ್. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ 17 ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಈಗಲೂ ಧರ್ಮ ಅವರ ಕೈತುಂಬಾ ಸಿನಿಮಾಗಳಿವೆ. ಈ ಮಧ್ಯೆ ಒಂದು ಶುಭ ಸುದ್ದಿಯನ್ನು ಧರ್ಮ ಹಂಚಿಕೊಂಡಿದ್ದಾರೆ. ಅದೇನಪ್ಪ ಅಂದ್ರೆ, ಅವರೀಗ ಟಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

ಯಾವುದು ಆ ತೆಲುಗು ಸಿನಿಮಾ? : ಹೌದು, ತೆಲುಗಿನ 'ಬ್ಲಡ್ ರೋಸಸ್' ಅನ್ನೋ ಕ್ರೈಮ್ ಥ್ರಿಲ್ಲರ್ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್ ಅವರು ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಸಿಕೊಂಡಿದ್ದಾರೆ. ಅದರ ಫಸ್ಟ್ ಲುಕ್ ಇಂದು (ಏ.2) ರಿಲೀಸ್ ಆಗಿದೆ. ಹೈದರಾಬಾದ್‌ನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲೂ ಈ ಸಿನಿಮಾಗೆ ಶೂಟಿಂಗ್ ಮಾಡಲಾಗಿದೆ.

'ಬ್ಲಡ್ ರೋಸಸ್' ಸಿನಿಮಾವನ್ನು ಟಿಬಿಆರ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹರೀಶ್ ಕೆ ನಿರ್ಮಾಣ ಮಾಡಿದ್ದು, ಎಂ ಗುರುರಾಜನ್ ಅವರು ನಿರ್ದೇಶನ ಮಾಡಿದ್ದಾರೆ. ಶ್ರೀಲು, ಸುಮನ್, ಟಾರ್ಜನ್, ಘರ್ಷಣ ಶ್ರೀನಿವಾಸ್, ಜಗದೀಶ್ವರಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವಕುಮಾರ್ ಛಾಯಾಗ್ರಹಣ ಇರುವ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಭರದಿಂದ ಸಾಗಿವೆ.

ನಾಯಕಿ ಯಾರು ಗೊತ್ತಾಯ್ತಾ?: ಇನ್ನು, ಈ ಸಿನಿಮಾದಲ್ಲಿ ನಾಯಕಿಯಾಗಿ ಅಪ್ಸರ ರಾಣಿ ಕಾಣಿಸಿಕೊಂಡಿದ್ದಾರೆ. ಇವರನ್ನೆಲ್ಲೋ ನೋಡಿರುವ ಹಾಗೇ ಇದೆ ಅಲ್ವಾ ಅಂತ ಅನ್ನಿಸಿದರೆ, ಅದು ಬೇರೆಲ್ಲೂ ಅಲ್ಲ, ರಾಮ್‌ ಗೋಪಾಲ್ ವರ್ಮ ಅವರ ಸಿನಿಮಾಗಳಲ್ಲಿ! ಹೌದು, ಆರ್‌ಜಿವಿ ನಿರ್ದೇಶನ ಮಾಡಿರುವ 'ಡೇಂಜರಸ್' ಸಿನಿಮಾದಲ್ಲಿ ಸಖತ್ ಆಗಿಯೇ ಮಿಂಚಿದ್ದರು ಅಪ್ಸರ ರಾಣಿ, 'ಡಿ ಕಂಪನಿ', 'ಕ್ರ್ಯಾಕ್', 'ಸೀಟಿಮಾರ್', 'ಹಂಟ್' ಮುಂತಾದ ಸಿನಿಮಾಗಳಲ್ಲಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ ಕೂಡ. ಉತ್ತರಾಂಚಲ ಮೂಲದ ಈ ನಟಿ ಫೇಮಸ್ ಆಗೋದ್ರಲ್ಲಿ ರಾಮ್‌ ಗೋಪಾಲ್ ವರ್ಮ ಪಾಲು ಜಾಸ್ತಿ ಇದೆ ಎಂದೇ ಹೇಳಬಹುದು.

ಇದೀಗ ಅಪ್ಸರ ರಾಣಿ ಅವರು ನಟ ಧರ್ಮ ಜೊತೆಗೆ 'ಬ್ಲಡ್ ರೋಸಸ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಪ್ಸರ ರಾಣಿ ಕೂಡ ಇಲ್ಲಿ ಪೊಲೀಸ್ ಅಧಿಕಾರಿಯಾಗಿಯೇ ಮಿಂಚಲಿದ್ದಾರೆ. ಅತೀ ಶೀಘ್ರದಲ್ಲೇ ಈ ಸಿನಿಮಾವನ್ನು ತೆರೆಗೆ ತರುವ ಪ್ಲ್ಯಾನ್ ಚಿತ್ರತಂಡದ್ದು. ಧರ್ಮ ನಟಿಸಿರುವುದರಿಂದ ಕನ್ನಡದಲ್ಲೂ ಈ ಚಿತ್ರ ತೆರೆಗೆ ಬರಲಿದೆಯಾ? ಕಾದುನೋಡಬೇಕು.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand