ವರದಿಗಾರರು :
ನಾ.ಅಶ್ವಥ್ ಕುಮಾರ್ ||
ಸ್ಥಳ :
ಚಾಮರಾಜನಗರ
ವರದಿ ದಿನಾಂಕ :
13-11-2025
ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಚಿಕಿತ್ಸೆಗಾಗಿ ಒಂದು ವರ್ಷ ಜಾಮೀನು ಮಂಜೂರು
ಚಾಮರಾಜನಗರ : ಜಿಲ್ಲೆಯ ಸೂಳ್ವಾಡಿ ಕಿಚ್ಚಗುತ್ತಿ ಮಾರಿಯಮ್ಮ ದೇವಾಲಯದಲ್ಲಿ ನಡೆದಿದ್ದ ವಿಷ ಮಿಶ್ರಿತ ಪ್ರಸಾದ ವಿತರಣೆಯಲ್ಲಿ 17 ಭಕ್ತರು ಮೃತಪಟ್ಟ ಪ್ರಕರಣದ ಆರೋಪಿಯಾಗಿರುವ ಸಾಲೂರು ಮಠದ ಹಿಂದಿನ ಸ್ವಾಮೀಜಿ ಇಮ್ಮಡ್ಡಿ ಮಹದೇವಸ್ವಾಮಿರವರಿಗೆ ವೈದ್ಯಕೀಯ ಚಿಕಿತ್ಸೆಗೆಂದು ಒಂದು ವರ್ಷಗಳ ಕಾಲ ಷರತ್ತು ಬದ್ದ ಜಾಮೀನನ್ನು ಹೈಕೋರ್ಟ್ ಮಂಜೂರು ಮಾಡಿದೆ.
2018 ರ ಡಿಸೆಂಬರ್ 14 ರಂದು ಮದ್ಯಾಹ್ನದ ವೇಳೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿ ಸಮೀಪದ ಸೂಳ್ವಾಡಿ ಕಿಚ್ಚಗುತ್ತಿ ಮಾರಿಯಮ್ಮ ದೇವಾಲಯದಲ್ಲಿ ವಿಷ ಮಿಶ್ರಿತ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿದ್ದು, 119 ಮಂದಿ ಅಸ್ವಸ್ಥಗೊಂಡ ಪ್ರಕರಣದಲ್ಲಿ ಕಾರಾಗೃಹದಲ್ಲಿರುವ ಇಮ್ಮಡ್ಡಿ ಮಹದೇವಸ್ವಾಮಿ ರವರ ಆರೋಗ್ಯ ಸ್ಥಿತಿ ಹದಗೆಡುತ್ತಿರುವ ಹಿನ್ನಲೆಯಲ್ಲಿ ಚಿಕಿತ್ಸೆಗೆಂದು ಜಾಮೀನು ಮಂಜೂರು ಮಾಡುವಂತೆ ಹೈಕೋರ್ಟ್ ಗೆ ಅರ್ಜಿಸಿದ್ದರು ಇಮ್ಮಡಿ ಮಹದೇವಸ್ವಾಮಿ ಪರ ವಕೀಲರು
ನ್ಯಾಯಮೂರ್ತಿ ಎಸ್.ರಾಚಯ್ಯ ಅವರ ಪೀಠ, ಮೇಲ್ಮನವಿ ದಾರರಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ಅಗತ್ಯ ವಿರುವ ಹಿನ್ನೆಲೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗುತ್ತಿದೆ ಎಂದು ತಿಳಿಸಿತು.
