ವರದಿಗಾರರು :
ದರ್ಶನ್ ಎಂ ಎನ್ ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
06-11-2025
ಹರಿಹರ: ಬಾರ್ ದರೋಡೆ ಪ್ರಕರಣ, ಪೊಲೀಸ್ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರು ಆರೋಪಿಗಳು ಬಂಧನ
ಹರಿಹರ, ದಾವಣಗೆರೆ: ಕೆಲವೇ ಗಂಟೆಗಳಲ್ಲಿ ಹರಿಹರ ಪೊಲೀಸರು ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಆರು ಮಂದಿಯನ್ನು ಬಂಧಿಸಿದ್ದಾರೆ. ಹರಿಹರ ನಗರದ ವಿಜಯನಗರ ನಿವಾಸಿ ಆದಿತ್ಯ ಅವರು ರಾತ್ರಿ 10 ಗಂಟೆಗೆ ತಮ್ಮ ಕೊಂಡಜ್ಜಿಯಲ್ಲಿರುವ ಬಾರ್ ಬಂದ್ ಮಾಡಿಕೊಂಡು ಹೊಂಡಾ ಆಕ್ಟಿವಾ ಸ್ಕೂಟಿಯಲ್ಲಿ ಹೊರಟಾಗ, ಐದು ಮಂದಿ ಆರೋಪಿಗಳು ಎರಡು ಬೈಕ್‌ಗಳಲ್ಲಿ ಹಿಂಬಾಲಿಸಿ, ಕಬ್ಬಿಣದ ಆಯುಧದಿಂದ ಹಲ್ಲೆ ನಡೆಸಿ 67,000 ರೂ ನಗದು ದರೋಡೆ ಮಾಡಿದ್ದಾರೆ. ಈ ಘಟನೆ ಸಂಬಂಧ ದೂರು ನೀಡಿದ್ದಾರೆ. ಹರಿಹರ ವೃತ್ತ ನಿರೀಕ್ಷಕ ಸುರೇಶ್ ಸಗರಿ ಅವರ ನೇತೃತ್ವದಲ್ಲಿ ಪಿಎಸ್ಐ ಯುವರಾಜ ಕಂಬಳಿ, ಮಂಜುಳಾ ಮತ್ತು ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಕೆಲವೇ ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗಕ್ಕೆ ಹೂಡಲಾಗಿದೆ.
ಬಂಧಿತ ಆರೋಪಿಗಳು: ಹನುಮಂತ (24), ತರಗಾರ, ಕೊಂಡಜ್ಜಿ ಅಮಿತ್ (20), ಕಬ್ಬಿಣ ಕಟ್ಟುವ ಕೆಲಸ ಅಜಿತ್ (24), ಹಮಾಲಿ, ಬೇತೂರು ರಸ್ತೆ ವಿಷ್ಣು ಆರ್., ಬಾರ್ ಬಿಲ್ಡಿಂಗ್ ಕಾರ್ಮಿಕ, ಕೊಂಡಜ್ಜಿ ಕಿರಣ್ (22), ಹಮಾಲಿ, ಬೇತೂರು ರಸ್ತೆ ಅಜೇಯ (25), ವ್ಯವಹಾರಸ್ಥ
ವಶಪಡಿಸಿಕೊಂಡ ವಸ್ತುಗಳು: ₹30,120 ನಗದು ₹1,80,000 ಮೌಲ್ಯದ 2 ಬೈಕ್‌ಗಳು ₹20,000 ಮೌಲ್ಯದ 5 ಮೊಬೈಲ್‌ಗಳು ಅರ್ಧಚಂದ್ರಾಕಾರದ ಕಬ್ಬಿಣದ ಹಂಚ್ (ಆಯುಧ) 1 ಸ್ಕೂಟಿ ಹರಿಹರ ಪೊಲೀಸರು ಈ ಪ್ರಕರಣದಲ್ಲಿ ತ್ವರಿತ ಕ್ರಮದ ಮೂಲಕ ಸಾರ್ವಜನಿಕರ ಭದ್ರತೆ ಕಾಪಾಡಿದ್ದಾರೆ ಎಂದು ವರದಿ ಮಾಡಲಾಗಿದೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಿಮ್ಮ ವಾಟ್ಸಾಪ್ ಗ್ರೂಪ್‌ಗೆ 7892441717 ಸಂಖ್ಯೆಯನ್ನು ಸೇರಿಸಿ
