
ಲೈವ್ ಟಿವಿ ನ್ಯೂಸ್

ದಿನಾಂಕ : 05-04-2025
ವಿಚ್ಛೇದನದ ಬಳಿಕ ಸುಮ್ಮನೆ ಕೂರದ ಧನಶ್ರೀ ವರ್ಮ; ದೊಡ್ಡ ರಿಯಾಲಿಟಿ ಶೋನಲ್ಲಿ ಸ್ಪರ್ಧೆ?
ವರದಿಗಾರರು : ಬೆಂಗಳೂರು
ವರದಿ ಸ್ಥಳ :ವಿವ ಬಿ ಯಂ
ಒಟ್ಟು ಓದುಗರ ಸಂಖ್ಯೆ : 12114+
ಕ್ರಿಕೆಟರ್ ಯಜುವೇಂದ್ರ ಚಹಾಲ್ ಅವರಿಂದ ವಿಚ್ಛೇದನದ ನಂತರ ಧನಶ್ರೀ ವರ್ಮಾ ಅವರು ಹಿಂದಿ ರಿಯಾಲಿಟಿ ಶೋ ಒಂದರಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಮೊದಲ ಹಂತದ ಮಾತುಕತೆಗಳು ನಡೆಯುತ್ತಿದ್ದು, ಈ ಸುದ್ದಿ ಅವರ ಅಭಿಮಾನಿಗಳಲ್ಲಿ ಸಂತೋಷವನ್ನುಂಟುಮಾಡಿದೆ. ಇದು ಅವರಿಗೆ ಚಿತ್ರರಂಗಕ್ಕೆ ಪ್ರವೇಶಿಸಲು ಉತ್ತಮ ಅವಕಾಶವಾಗಬಹುದು ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.
ಕ್ರಿಕೆಟರ್ ಯಜುವೇಂದ್ರ ಚಹಾಲ್ (Yuzvendra Chahal) ಹಾಗೂ ಧನಶ್ರೀ ಅವರು ನಾಲ್ಕು ವರ್ಷಗಳ ದಾಂಪತ್ಯವನ್ನು ಇತ್ತೀಚೆಗೆ ಕೊನೆಗೊಳಿಸಿದ್ದಾರೆ. ಅವರು ವಿಚ್ಛೇದನದ ಬಳಿಕ ತಲೆಮೇಲೆ ಕೈ ಹೊತ್ತು ಸುಮ್ಮನೆ ಕೂತಿಲ್ಲ ಅಥವಾ ಯಾರಾದರೂ ಏನಾದರೂ ಅಂದುಕೊಂಡರೆ ಎಂದು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇರುವುದನ್ನು ನಿಲ್ಲಿಸಿಲ್ಲ. ಧನಶ್ರೀ (Dhanashree) ಈಗ ಹಿಂದಿಯ ದೊಡ್ಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಲಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಅವರು ಚಿತ್ರರಂಗಕ್ಕೂ ಕಾಲಿಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಹಿಂದಿಯಲ್ಲಿ ‘ಖತ್ರೋ ಕೆ ಖಿಲಾಡಿ’ ಸಾಕಷ್ಟು ಜನಪ್ರಿಯತೆ ಪಡೆದ ರಿಯಾಲಿಟಿ ಶೋ. ಈಗಾಗಲೇ 14 ಸೀಸನ್ಗಳು ಬಂದು ಹೋಗಿದ್ದು, 15ನೇ ಸೀಸನ್ಗೆ ಸಿದ್ಧತೆ ನಡೆಯುತ್ತಿದೆ. ಇದನ್ನು ನಿರ್ದೇಶಕ ರೋಹಿತ್ ಶೆಟ್ಟಿ ಅವರು ನಡೆಸಿಕೊಡಲಿದ್ದಾರೆ. ಈ ಶೋಗೆ ಧನಶ್ರೀ ಅವರು ಬರಲಿದ್ದು, ತಮ್ಮ ಸಾಮರ್ಥ್ಯವನ್ನು ಅವರು ತೋರಿಸಲಿದ್ದಾರೆ ಎಂದು ವರದಿ ಆಗಿದೆ.
ಸದ್ಯ ‘ಖತ್ರೋ ಕೆ ಖಿಲಾಡಿ’ ತಂಡದವರು ಧನಶ್ರೀ ಜೊತೆ ಮಾತುಕತೆ ನಡೆಸಿದ್ದಾರೆ. ಧನಶ್ರೀ ಅವರು ಸದ್ಯ ಎಲ್ಲ ಕಡೆಗಳಲ್ಲೂ ಸುದ್ದಿಯಲ್ಲಿದ್ದಾರೆ. ಅವರನ್ನು ಶೋಗೆ ಕರೆತಂದರೆ ಒಳ್ಳೆಯದು ಎಂಬುದು ವಾಹಿನಿಯವರ ಆಲೋಚನೆ. ಹೀಗಾಗಿ, ಸದ್ಯ ಮೊದಲ ಹಂತದ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಎಲ್ಲವೂ ಫೈನಲ್ ಆದರೆ, ಅವರು ‘ಖತ್ರೋ ಕೆ ಖಿಲಾಡಿ’ಯ 15ನೇ ಸೀಸನ್ನ ಸ್ಪರ್ಧಿ ಆಗಲಿದ್ದಾರೆ.
ಧನಶ್ರೀ ಅವರಿಗೆ ರಿಯಾಲಿಟಿ ಶೋ ಹೊಸದಲ್ಲ. ಈ ಮೊದಲು ‘ಝಲಕ್ ಧಿಕ್ಲಾ ಜಾ’ ಶೋನಲ್ಲಿ ಅವರು ಭಾಗಿ ಆಗಿದ್ದರು. 2023ರಲ್ಲಿ ಶೋ ಪ್ರಸಾರ ಕಂಡಿತ್ತು. ಚಹಾಲ್ ಕೂಡ ಶೋನಲ್ಲಿ ಭಾಗಿ ಆಗಿ ಪತ್ನಿಗೆ ಬೆಂಬಲ ಸೂಚಿಸಿದ್ದರು.
ಧನಶ್ರೀ ಹಾಗೂ ಚಾಹಲ್ 2020ರಲ್ಲಿ ವಿವಾಹ ಆದರು. ನಾಲ್ಕು ವರ್ಷಗಳ ಕಾಲ ಒಟ್ಟಿಗೆ ಇದ್ದ ಇವರು ಈ ವರ್ಷ ಮಾರ್ಚ್ನಲ್ಲಿ ಬೇರೆ ಆದರು. ಇವರು 2022ರಿಂದಲೇ ಬೇರೆ ಬೇರೆ ಆಗಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಧನಶ್ರೀಗೆ 4.75 ಕೋಟಿ ರೂಪಾಯಿ ಜೀವನಾಂಶ ಸಿಕ್ಕಿದೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















