
ಲೈವ್ ಟಿವಿ ನ್ಯೂಸ್

ದಿನಾಂಕ : 20-03-2025
ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಸಿನಿಮಾ ಮಾ.30ರಂದು ರಿಲೀಸ್ ಆಗಲಿದೆ !
ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ್
ವರದಿ ಸ್ಥಳ : ಬೆಂಗಳೂರು
ಒಟ್ಟು ಓದುಗರ ಸಂಖ್ಯೆ : 18193+
ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಚಿತ್ರದ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿದೆ. ಮಾ.30ರಂದು ‘ಸಿಕಂದರ್’ ಸಿನಿಮಾ ರಿಲೀಸ್ ಆಗಲಿದೆ.
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತು ಸಲ್ಮಾನ್ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರುವ ’ಸಿಕಂದರ್’ ಸಿನಿಮಾ ಇದೇ ಮಾ.30ಕ್ಕೆ ಬೆಳ್ಳಿಪರದೆಗೆ ಅಪ್ಪಳಿಸಲಿದೆ. ಈಗಾಗಲೇ ಸಾಂಗ್ಸ್, ಟೀಸರ್ ಮೂಲಕ ‘ಸಿಕಂದರ್’ ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಏಬ್ಬಿಸಿದೆ. ಹಾಗಾಗಿ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.
ಅಂದಹಾಗೆ, ಸಲ್ಮಾನ್, ರಶ್ಮಿಕಾ ಮಂದಣ್ಣ, ‘ಮಗಧೀರ’ ನಟಿ ಕಾಜಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಎ.ಆರ್ ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. ಸಾಜಿದ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.
ಇನ್ನೂ ಮೊದಲ ಬಾರಿಗೆ ಸಲ್ಮಾನ್ ಜೊತೆ ರಶ್ಮಿಕಾ ನಟಿಸಿರೋ ಕಾರಣ ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಯಿದೆ. ಇತ್ತೀಚಿಗೆ ರಶ್ಮಿಕಾ ನಟಿಸಿದ ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳು ಸೂಪರ್ ಸಕ್ಸಸ್ ಕಂಡಿದೆ. ಇತ್ತೀಚೆಗೆ ಸಲ್ಮಾನ್ ನಟಿಸಿರುವ ಸಿನಿಮಾಗಳು ಚಿತ್ರಮಂದಿರದಲ್ಲಿ ಮಕಾಡೆ ಮಲಗಿದೆ. ಹಾಗಾಗಿ ‘ಸಿಕಂದರ್’ ಚಿತ್ರ ಸಕ್ಸಸ್ ಕಾಣುತ್ತಾ? ಎಂಬುದನ್ನು ಕಾದುನೋಡಬೇಕಿದೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















