ವರದಿಗಾರರು :
ಅರಕೇಶ್.ಎಸ್ ||
ಸ್ಥಳ :
ರಾಮನಗರ
ವರದಿ ದಿನಾಂಕ :
21-11-2025
ಜಾತಿಯಿಂದನೆ, ಹಲ್ಲೆ ಆರೋಪ: ಬಿಗ್ ಬಾಸ್ ತಂಡದ ಮೇಲೆ ಸಂಧ್ಯಾ ಪವಿತ್ರ ದೂರು
ರಾಮನಗರ: ಬಿಗ್ ಬಾಸ್ ಕಾರ್ಯಕ್ರಮದ ಸುತ್ತ ಮತ್ತೊಂದು ವಿವಾದ ಸ್ಫೋಟಿಸಿದೆ. ಕಾರ್ಯಕ್ರಮದ ಸ್ಪರ್ಧಿಗಳಾದ ಅಶ್ವಿನಿ ಗೌಡ, ರಿಶಾ ಹಾಗೂ ನಿರೂಪಕ ಕಿಚ್ಚ ಸುದೀಪ್ ವಿರುದ್ಧ ಹೊಸ ದೂರು ದಾಖಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ರಕ್ಷಿತಾ ಶೆಟ್ಟಿ ಮೇಲೆ ಜಾತಿಯಿಂದನೆ ಮಾಡಲಾಗಿದೆ ಹಾಗೂ ‘ಗಿಲ್ಲಿ’ ತಂಡದ ನಟರ ಮೇಲೆ ಹಲ್ಲೆ ಮತ್ತು ಅವಹೇಳನಕಾರಿ ಪದ ಬಳಕೆ ನಡೆದಿದೆ ಎನ್ನುವ ಆರೋಪವನ್ನು ಬೆಂಗಳೂರು ಮೂಲದ ಸಂಧ್ಯಾ ಪವಿತ್ರ ಅವರು ಸಲ್ಲಿಸಿದ್ದಾರೆ.
ದೂರು ಸ್ವೀಕರಿಸಿದ ಬೆಂಗಳೂರು ದಕ್ಷಿಣ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಪ್ರಕರಣಕ್ಕೆ ಸಂಬಂಧಿಸಿದ FIR ದಾಖಲಿಸಲು ದೂರುದಾರರಿಗೆ ಬಿಡದಿ ಪೊಲೀಸ್ ಠಾಣೆಗೆ ತೆರಳಲು ಸಲಹೆ ನೀಡಿದ್ದಾರೆ. ಈ ಪ್ರಕರಣ ಮತ್ತೊಮ್ಮೆ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ನಡೆದುಬರುವ ವರ್ತನೆ ಮತ್ತು ನಿಯಮಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ.
