ವರದಿಗಾರರು :
ನರೇಂದ್ರ ಬಾಬು ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
04-03-2025
ಒಂದೇ ತಿಂಗಳಲ್ಲಿ 40 ಲಕ್ಷ ಪ್ರಯಾಣಿಕರು ಮೆಟ್ರೋದಿಂದ ದೂರ !
ಬೆಂಗಳೂರು: ಸಿಲಿಕಾನ್ ಸಿಟಿ ಮಂದಿ ಮೆಟ್ರೋ ಪ್ರಯಾಣದಿಂದ ದಿನೇ ದಿನೇ ದೂರ ಸರಿಯುತ್ತಿದ್ದಾರೆ. ಟಿಕೆಟ್ ದರ ಏರಿಕೆಯಿಂದ ಬೇಸತ್ತಿರುವ ಜನ ಈಗ ಮೆಟ್ರೋ ಬದಲು ಬೇರೆ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಒಂದೇ ತಿಂಗಳಲ್ಲಿ ಬರೋಬ್ಬರಿ 40 ಲಕ್ಷ ಜನ ಮೆಟ್ರೋ ಪ್ರಯಾಣ ಬಿಟ್ಟಿರುವುದು ಇದಕ್ಕೆ ಸಾಕ್ಷಿ.
ಪ್ರಯಾಣಿಕರ ಸಂಖ್ಯ 8 ಲಕ್ಷದಿಂದ 7.46 ಲಕ್ಷಕ್ಕೆ ಕುಸಿತ ಜನವರಿಯಲ್ಲಿ 2.49 ಕೋಟಿ ಜನರು ಮೆಟ್ರೋದಲ್ಲಿ ಪ್ರಯಾಣಿಸಿದ್ದರೆ, ಫೆಬ್ರವರಿಯಲ್ಲಿ ಈ ಸಂಖ್ಯೆ 2.09 ಕೋಟಿಗೆ ಇಳಿದಿದೆ. ಪ್ರತಿದಿನ ಸರಾಸರಿ 8 ಲಕ್ಷ ಜನರು ಮೆಟ್ರೋದಲ್ಲಿ ಓಡಾಡುತ್ತಿದ್ದರು. ಈಗ ಈ ಸಂಖ್ಯೆ 7.46 ಲಕ್ಷಕ್ಕೆ ಕುಸಿದಿದೆ.
