ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
02-09-2025
ಬಡವನ ಸಿಟ್ಟು ದವಡೆಗೆ ಮೂಲ ಅಂದಹಾಗೆ ನನ್ನ ದುಃಖ ಕೇಳೋರ್ಯಾರು ಎಂಬಾತಾಗಿದೆ ಭಾರಿ ಮಳೆಯಿಂದ ತನ್ನ ಬೆಳೆಯನ್ನು ಕಳ�
ಬದುಕಿನ ಸಾಗಿಸಲು ರೈತ ಹೆಂಡತಿ ಮಕ್ಕಳೊಂದಿಗೆ ಗೊಳಾಟ ರೈತನ ಕಷ್ಟ ಕೇಳೋರ್ಯಾರು....? ಬೀದರ್ ಜಿಲ್ಲೆ ಔರಾದ ತಾಲೂಕಿನ ಗಡಿಕುಸನೂರ ಗ್ರಾಮದ ರೈತರು ಕಣ್ಣೀರು... ಗಡಿ ಜಿಲ್ಲೆ ಬೀದರ್ ನಲ್ಲಿ ಸುರಿದ ಭಾರಿ ಮಳೆಗೆ ಹಾಳಾಯಿತು ಬೆಳೆ..ಮಳೆ ಬೆಳೆ ಹಾನಿ ಮಾಡಿದ್ದು ರೈತರ ಗಾಯಕ್ಕೆ ಉಪ್ಪು ಸವರಿದಂತೆ ಮಹಾರಾಷ್ಟ್ರದ ಧನೆಗಾಂವ ಡ್ಯಾಮ್ ನಿಂದ ಮಾಂಜ್ರಾ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಹಿನ್ನೆಲೆ, ಮಾಂಜರಾ ನದಿ ಭಾಗದ ರೈತರಿಗೆ ಗಾಯದ ಮೇಲೆ ಬರೆ ಎಳೆ ದಂತಾಗಿದ್ದೆ..... ಮಹಾರಾಷ್ಟ್ರದ ಧನೆಗಾಂವ ಡ್ಯಾಮ್ ನುಂದ ನಿರಂತರ ಮಾಂಜರಾ ನದಿಗೆ ಬಿಡಲಾದ ನೀರಿನಿಂದ ಮಾಂಜರಾ ನದಿ ದಡದ ರೈತರಿಗೆ ಸಂಕಷ್ಟ್ , ಮಾಂಜರಾ ನದಿ ಹಿನ್ನಿರಿನಿಂದ ಸಾವಿರಾರು ಎಕ್ಕರೆ ಉದ್ದು ಹೆಸರು ಬಿತ್ತನೆ ಮಾಡಿದ ಉದ್ದು ಹೆಸರು ಕೊಯ್ಲು ಮಾಡಿ ಒಂದಡೇ ಇಟ್ಟಿದ ಭಣಮಿ ಜಲಾವೃತವಾಗಿದ್ದು ರೈತರಿಗೆ ಸಂಕಷ್ಟ ...... ಮೊಳಕಾಲು ಉದ್ದ ಕೆಸರಿನಲ್ಲಿಯೇ ತೆರಳಿ ಸ್ವಲ್ಪ ಸ್ವಲ್ಪ ಹೆಸರು (ಭಾರ)ಹೊರಗೆ ತರುತ್ತಿರುವ ರೈತರು..... ಸುರಿದ ಮಳೆಗೆ ಹಾಗೂ ಮಾಂಜರಾ ನದಿ ಹಿನ್ನಿರಿನಿಂದ ಹೊಲಕ್ಕೆ ನುಗ್ಗಿದ ನೀರಿನಿಂದ ಸಾವಿರಾರು ರುಪಾಯಿ ಖರ್ಚು ಮಾಡಿ ಬಿತ್ತಿ ಬೆಳೆದ ಬೆಳೆ ರೈತನ ಕಣ್ಮುಂದೆ ಹಾಳಾಗುತ್ತಿದ್ದು ರೈತನ ಗೋಳು ಕೇಳೋರ್ಯಾರು..? ಕೈಗೆ ಬಂದ ತತ್ತು ಬಾಯಿಗೆ ಬಾರದಂತೆ ಕಣ್ಮುಂದೆ ಕೋಳೆಯತ್ತಿರುವ ಹೆಸರು ಉದ್ದು ನೋಡಿ ರೈತ ತನ್ನ ಹೆಂಡತ್ತಿ ಮಕ್ಕಳೊಂದಿಗೆ ಮೊಳಕಾಲು ಉದ್ದ ಕೆಸರಿನಲ್ಲಿಯೇ ಗೋಳಾಟ ಹೆಂಡತಿ ಮಕ್ಕಳೊಂದಿಗೆ ರೈತ ಕಣ್ಣಿರು....... ಬಡವನ ಸಿಟ್ಟು ದವಡೆಗೆ ಮೂಲ ಅಂದಹಾಗೆ ನನ್ನ ದುಃಖ ಕೇಳೋರ್ಯಾರು ಎಂದ ರೈತರು ನರಲಾಡಿದರು
