ವರದಿಗಾರರು :
ಸಿಂಚನ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
30-10-2025
ಮಧ್ಯದ ನಶೆಯಲ್ಲಿ ಹುಲಿಗೆ ಮದ್ಯಪಾನ ಕುಡಿಸಿದ ಭೂಪ
ಮಧ್ಯ ಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಹುಲಿಯನ್ನು ಬೆಕ್ಕು ಎಂದು ಮುದ್ದಿಸಿ ಅದಕ್ಕೆ ಮದ್ಯಪಾನ ನೀಡುತ್ತಿರುವ ವಿಲಕ್ಷಣ ವಿಡಿಯೋ ವೈರಲ್ ಆಗಿದೆ. ಪೆಂಚ್ ಹುಲಿ ಅಭಯಾರಣ್ಯದ ಸಮೀಪದ ರಾಜೀವ್ ಪಾಟೀಲ್ ೫೨ ಕುಡಿದ ಮತ್ತಿನಲ್ಲಿ ಹುಲಿಯೊಂದಿಗೆ ಆಟವಾಡಲು ಪ್ರಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ವಿಡಿಯೋದಲ್ಲಿ ಹುಲಿ ಮಧ್ಯವನ್ನು ನಿರಾಕರಿಸುತ್ತದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕುಡುಕರ ಧೈರ್ಯ ಎಂದು ಸದ್ದು ಮಾಡುತ್ತಿದ್ದರು ಸಂರಕ್ಷಿತ ಪ್ರದೇಶದ ಉಪ ನಿರ್ದೇಶಕರು ಇದನ್ನು ತಿರುಚಿದ ಕ್ಲಿಪ್ ಅನುಮಾನ ಎಂದು ವ್ಯಕ್ತಪಡಿಸಿ, ತನಿಖೆಗೆ ಆದೇಶಿಸಿದ್ದಾರೆ
