ವರದಿಗಾರರು :
ದರ್ಶನ್ ಎಂ.ಎನ್ ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
28-11-2025
ದಾವಣಗೆರೆ ಜಿಲ್ಲೆ – ಚದುರಂಗ ಪ್ರಿಯರಿಗೆ ದೊಡ್ಡ ಅವಕಾಶ!
ದಾವಣಗೆರೆ ಜಿಲ್ಲಾ ಚೆಸ್ ಅಸೋಸಿಯೇಷನ್ ನವರು ನವೆಂಬರ್ 30, ಭಾನುವಾರ ಗುರುಭವನ, ಎವಿಕೆ ಕಾಲೇಜ್ ರಸ್ತೆ, ದಾವಣಗೆರೆ ನಲ್ಲಿ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯನ್ನು ಆಯೋಜಿಸುತ್ತಿದ್ದಾರೆ. ಸ್ಪರ್ಧೆ ಬೆಳಿಗ್ಗೆ 10:30ಕ್ಕೆ ಪ್ರಾರಂಭ ಆಗಿ, ಸಂಜೆ 5:00ಕ್ಕೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಈ ಸ್ಪರ್ಧೆ ದಾವಣಗೆರೆ ಜಿಲ್ಲೆಯ ಸ್ಪರ್ಧಾಳುಗಳಿಗೆ ಮಾತ್ರ. ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದೆ: 16 ವರ್ಷದೊಳಗಿನ ವಿಭಾಗ 16 ವರ್ಷ ಮೇಲ್ಪಟ್ಟ ವಿಭಾಗ
16 ವರ್ಷದೊಳಗಿನ ವಿಭಾಗದ ಒಳಗಿನ ಉಪವಿಭಾಗಗಳು: 8 ವರ್ಷದೊಳಗಿನವರು, 10 ವರ್ಷದೊಳಗಿನವರು, 12 ವರ್ಷದೊಳಗಿನವರು, 14 ವರ್ಷದೊಳಗಿನವರು. ಪ್ರತ್ಯೇಕವಾಗಿ ಟಾಪ್ 5 ಸ್ಪರ್ಧಾಳುಗಳಿಗೆ ವಿಶೇಷ ಟ್ರೋಫಿ ನೀಡಲಾಗುತ್ತದೆ. ಬಹುಮಾನ ವಿವರಗಳು: 1ನೇ ಬಹುಮಾನ: ₹2,500 + ಟ್ರೋಫಿ 2ನೇ ಬಹುಮಾನ: ₹2,000 + ಟ್ರೋಫಿ 3ನೇ ಬಹುಮಾನ: ₹1,500 + ಟ್ರೋಫಿ 4ನೇ ಬಹುಮಾನ: ₹1,000 + ಟ್ರೋಫಿ 5ನೇ ಬಹುಮಾನ: ₹500 + ಟ್ರೋಫಿ 6ನೇ–10ನೇ ಸ್ಥಾನ: ಪಾರಿತೋಷಕ ನೋಂದಣಿ ಸಂಪರ್ಕ: ಯುವರಾಜ್ – 9945613469 / 7259310197. ಸ್ಪರ್ಧಾಳುಗಳು ತಮ್ಮ ವಯಸ್ಸು ತೋರಿಸುವ ಪ್ರಮಾಣಪತ್ರವನ್ನು ಖಾತ್ರಿ ಪಡಿಸಿಕೊಳ್ಳಿ.
