ವರದಿಗಾರರು :
ಸಾತಪ್ಪ ಮಾಂಗ್ಲಿ ||
ಸ್ಥಳ :
ಧಾರವಾಡ
ವರದಿ ದಿನಾಂಕ :
01-12-2025
ಕಲಘಟಗಿ ಪಟ್ಟಣದಲ್ಲಿ ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾ�
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಶನಿವಾರ ಒಂದು ಸನ್ಮಾನ ಕಾರ್ಯಕ್ರಮ ನಡೆಯಿತು. ಘರ್ಲ್ಸ್ ಇಂಗ್ಲಿಷ್ ಸ್ಕೂಲ್‌ನಲ್ಲಿ ಆಯೋಜಿತ ಕಾರ್ಯಕ್ರಮವನ್ನು ತಾಲೂಕು ದಂಡಾಧಿಕಾರಿ ಬಸವರಾಜ ಹೊಂಕನ ಅವರು ಸಸಿಗೆ ನೀರುರೆಸಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷ ಸೋಮಲಿಂಗ ಒಡೆಯರ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿದೇವಿ ಸಜ್ಜನ ಉಪಸ್ಥಿತರಿದ್ದರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎಚ್. ಎನ್. ಸುನಗದ ಮತ್ತು ಕೇಂದ್ರ ಪ್ರಶಸ್ತಿ ಪುರಸ್ಕೃತ ಅಶೋಕ ಅರ್ಕಸಾಲಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮುಖ್ಯ ಶಿಕ್ಷಕ ಶ್ರೀಧರ ಪಾಟೀಲಕುಲಕರ್ಣಿ ಮತ್ತು ಶ್ಯಾಸ್ತ್ರೀಯ ಸಂಗೀತ ಶಿಕ್ಷಕಿ ಪದ್ಮಾಕ್ಷಿ ಒಡೆಯರ ವಿಶೇಷ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಪತ್ರಕರ್ತ ಉಮೇಶ್ ಜೋಶಿ ನಿರೂಪಿಸಿದ್ದರು. ಕರ್ನಾಟಕ ಸಂಗ್ರಾಮ ಸೇನೆಯ ಅಧ್ಯಕ್ಷ ಸಾತಪ್ಪ ಕುಂಕೂರ ಸ್ವಾಗತಿಸಿದರೆ, ಸುಭಾಸ ಕಂಪ್ಲಿಕೋಪ್ಪ ವಂದಿಸಿದರು. ಅಧಿಕೃತರ ಪ್ರಕಾರ, ವಿದ್ಯಾರ್ಥಿಗಳು ಮತ್ತು ಸಾಧನೆ ಮಾಡಿದ ಮಹನೀಯರು ಸನ್ಮಾನ ಪಡೆದಿದ್ದು, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಕಾರ್ಯಮಟ್ಟ ಸಾಧನೆ ಮಾಡಿದವರಿಗೆ ಪ್ರೋತ್ಸಾಹ ನೀಡಲು ಈ ಕಾರ್ಯಕ್ರಮ ಮಹತ್ವಪೂರ್ಣವಾಗಿದೆ.
