
ಲೈವ್ ಟಿವಿ ನ್ಯೂಸ್

ದಿನಾಂಕ : 16-04-2025
ರೀಲ್ಸ್ ಕೇಸ್ – ರಜತ್ ಜೈಲಿಗೆ, ವಿನಯ್‌ಗೆ 500 ರೂ. ದಂಡ
ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ್
ವರದಿ ಸ್ಥಳ :ಬೆಂಗಳೂರು
ಒಟ್ಟು ಓದುಗರ ಸಂಖ್ಯೆ : 6842+
ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ರಜತ್‌ಗೆ 14 ದಿನ ನ್ಯಾಯಾಂಗ ಬಂಧನಕ್ಕೆ 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದ್ರೆ, ವಿನಯ್‌ಗೆ 500 ರೂ. ದಂಡ ವಿಧಿಸುವ ಮೂಲಕ ರಿಲೀಫ್ ಕೊಟ್ಟಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಮಾತನಾಡಿ, ರಜತ್‌ಗೆ ಜೈಲಿಗೆ ಹೋಗಿದ್ದು ಬೇಸರ ಆಗಿದೆ ಎಂದು ಹೇಳಿದ್ದಾರೆ.
ವಾರಂಟ್ ರಿಕಾಲ್ ಆಗಿದ್ರಿಂದ ವಿನಯ್‌ಗೆ ಈ ಕೇಸ್‌ನಿಂದ ರಿಲೀಫ್ ಸಿಕ್ಕಿದೆ. ಕೋರ್ಟ್‌ಗೆ ವಕೀಲರೊಂದಿಗೆ ಹಾಜರಾಗಿ ವಿನಯ್ ಕ್ಷಮೆಯಾಚಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಚಾರಣೆಗೆ ಸಹಕಾರ ನೀಡೋದಾಗಿ ತಿಳಿಸಿದರು. ಹಾಗಾಗಿ ವಿನಯ್‌ಗೆ 500 ರೂ. ದಂಡವನ್ನು 24ನೇ ಎಸಿಎಂಎಂ ನ್ಯಾಯಾಲಯ ವಿಧಿಸಿದೆ.
ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ವಿನಯ್ ಗೌಡ, ನಾನು ಅರ್ಜಿ ಹಾಕಿದ್ದಕ್ಕೆ ವಾರಂಟ್ ರಿಕಾಲ್ ಆಗಿತ್ತು. ನನಗೆ ವಾರಂಟ್ ಆಗಿರಲಿಲ್ಲ. ನಿನ್ನೆ ಸಂಜೆ ಪೊಲೀಸ್ ಠಾಣೆಗೆ ಹೋಗಿ ಬಂದಿದ್ದೇನೆ. ನನ್ನ ವಕೀಲರು ಇಂದು ಕೋರ್ಟ್ ಬರಲು ಹೇಳಿದ್ದರು. ಹಾಗಾಗಿ ಅವರೊಂದಿಗೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ರಜತ್ ಮೇಲೆ ಸಿಟ್ಟಿಲ್ಲ. ಕೋರ್ಟ್ ಆದೇಶಕ್ಕೆ ನಾವು ಗೌರವ ನೀಡಬೇಕಾಗತ್ತದೆ ಎಂದು ತಿಳಿಸಿದರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















