ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
07-03-2025
'M3 ಅಲ್ಟ್ರಾ' ಚಿಪ್‌ಸೆಟ್ ಪರಿಚಯಿಸಿದ ಆಪಲ್ !
Apple Reveals Most Powerful Chip M3 Ultra: ಆಪಲ್ ಹೊಸ ಪವರ್ಫುಲ್ 'M3 ಅಲ್ಟ್ರಾ' ಚಿಪ್ಸೆಟ್ ಅನ್ನು ಘೋಷಿಸಿದೆ. ಇದು ತನ್ನ ಮ್ಯಾಕ್‌ಬುಕ್ ಸ್ಟುಡಿಯೋದಲ್ಲಿ ಪರಿಚಯಿಸಿತು. ಇದು ಆಪಲ್ ರಚಿಸಿದ ಅತ್ಯಧಿಕ ಕಾರ್ಯಕ್ಷಮತೆಯ ಚಿಪ್ ಆಗಿದ್ದು, 'M1 ಅಲ್ಟ್ರಾ' ಗಿಂತ 2.6 ಪಟ್ಟು ಹೆಚ್ಚಿನ ಕಾರ್ಯಕ್ಷಮತೆ ನೀಡುತ್ತದೆ. ಅಲ್ಲದೇ ಈ ಚಿಪ್‌ಸೆಟ್ ವೈಯಕ್ತಿಕ ಕಂಪ್ಯೂಟರ್‌ನಲ್ಲಿ ಎಂದಿಗಿಂತಲೂ ಹೆಚ್ಚು ಯೂನಿಫೈಡ್ ಮೆಮೊರಿಯನ್ನು ಹೊಂದಿದೆ.
ಈ ಹೊಸ ಚಿಪ್‌ಸೆಟ್ ಮ್ಯಾಕ್‌ನಲ್ಲಿ ಅತ್ಯಂತ ಪವರ್ಫುಲ್ CPU ಮತ್ತು GPU ನೀಡುತ್ತದೆ. ನ್ಯೂರಲ್ ಎಂಜಿನ್ ಕೋರ್‌ಗಳನ್ನು ದ್ವಿಗುಣಗೊಳಿಸುತ್ತದೆ. ಅಲ್ಲದೇ ಈ ಚಿಪ್ Thunderbolt 5 ಕನೆಕ್ಟಿವಿಟಿ, 512GB ವರೆಗೆ ಯೂನಿಫೈಡ್ ಮೆಮೊರಿಗೆ ಸಪೋರ್ಟ್ ಮಾಡುತ್ತದೆ. ಇದು ಪರ್ಸನಲ್ ಕಂಪ್ಯೂಟರ್‌ನಲ್ಲಿ ಇದುವರೆಗಿನ ಅತಿ ಹೆಚ್ಚು ಆಗಿದೆ. ಎಂ3 ಅಲ್ಟ್ರಾದಂತಹ ಶಕ್ತಿಶಾಲಿ ಚಿಪ್ ಇನ್ನೊಂದಿಲ್ಲ ಎಂದು ಆ್ಯಪಲ್‌ನ ಹಾರ್ಡ್‌ವೇರ್ ಟೆಕ್ನಾಲಜೀಸ್‌ನ ಹಿರಿಯ ಉಪಾಧ್ಯಕ್ಷ ಜಾನಿ ಸ್ರೌಜಿ ಹೇಳಿದ್ದಾರೆ.
ಈ 'M3 ಅಲ್ಟ್ರಾ' ವೇಗದ ಕನೆಕ್ಟಿವಿಟಿ, ದೃಢವಾದ ವಿಸ್ತರಣೆಗಾಗಿ ಪ್ರತಿ ಪೋರ್ಟ್‌ಗೆ 2 ಪಟ್ಟು ಹೆಚ್ಚು ಬ್ಯಾಂಡ್‌ವಿಡ್ತ್‌ನೊಂದಿಗೆ 'Thunderbolt 5' ಅನ್ನು ಸಹ ಹೊಂದಿದೆ ಎಂದು ಆಪಲ್ ನ್ಯೂಸ್‌ರೂಮ್ ಪೋಸ್ಟ್‌ನಲ್ಲಿ ವಿವರಿಸಿದೆ. ಆಪಲ್ ತನ್ನ ಹೊಸ ಅಲ್ಟ್ರಾಫ್ಯೂಷನ್ ಪ್ಯಾಕೇಜಿಂಗ್ ಆರ್ಕಿಟೆಕ್ಚರ್ ಬಳಸಿ ಇದನ್ನು ನಿರ್ಮಿಸಿದೆ. ಇದು ಲೋ ಲೆಟನ್ಸಿ, ಅಧಿಕ ಬ್ಯಾಂಡ್‌ವಿಡ್ತ್ ಅನ್ನು ನೀಡುವ 10 ಸಾವಿರಕ್ಕೂ ಹೆಚ್ಚು ಹೈ-ಸ್ಪೀಡ್ ಕನೆಕ್ಷನ್ಗಳಿಗೆ ಎರಡು M3 ಮ್ಯಾಕ್ಸ್ ಡೈಸ್‌ಗಳನ್ನು ಸಂಪರ್ಕಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇನ್ನು ಪವರ್ ಎಫಿಶಿಯೆನ್ಸಿ ಅನ್ನು ಮೆಂಟೈನ್ ಮಾಡುವುದಕ್ಕೆ ಹೆಚ್ಚಿನ ಕಾರ್ಯಕ್ಷಮತೆಗಾಗಿ ಸಂಯೋಜಿತ ಡೈಸ್‌ಗಳನ್ನು ಸಿಂಗಲ್, ಯೂನಿಫೈಡ್ ಚಿಪ್‌ನಂತೆ ಪರಿಗಣಿಸಲು ಇದು ಸಿಸ್ಟಮ್ ಅನ್ನು ಅನುಮತಿಸುತ್ತದೆ. M3 ಅಲ್ಟ್ರಾ ಚಿಪ್‌ನಿಂದ ನಡೆಸಲ್ಪಡುವ ಹೊಸ ಮ್ಯಾಕ್ ಸ್ಟುಡಿಯೊದ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸಲು ಅಲ್ಟ್ರಾಫ್ಯೂಷನ್ ಒಟ್ಟು 184 ಬಿಲಿಯನ್ ಟ್ರಾನ್ಸಿಸ್ಟರ್‌ಗಳನ್ನು ಒಟ್ಟುಗೂಡಿಸುತ್ತದೆ.
'M3 ಅಲ್ಟ್ರಾ' 32-ಕೋರ್‌ಗಳ CPU (24 ಪರ್ಫಾರ್ಮೆನ್ಸ್ ಕೋರ್‌ಗಳು + 8 ಎಫಿಶಿಯನ್ಸಿ ಕೋರ್‌ಗಳು) ವರೆಗೆ ಹೊಂದಿದೆ. ಇದು 'M2 ಅಲ್ಟ್ರಾ' ಚಿಪ್‌ಸೆಟ್‌ಗಿಂತ 1.5 ಪಟ್ಟು ಹೆಚ್ಚು ಕಾರ್ಯಕ್ಷಮತೆಯನ್ನು ನೀಡುತ್ತದೆ ಮತ್ತು 'M1 ಅಲ್ಟ್ರಾ' ಗಿಂತ 1.8 ಪಟ್ಟು ಹೆಚ್ಚಿನ ಕಾರ್ಯಕ್ಷಮತೆ ನೀಡುತ್ತದೆ. ಇದರ GPU 80 ಗ್ರಾಫಿಕ್ಸ್ ಕೋರ್‌ಗಳನ್ನು ಹೊಂದಿದೆ. ಇದು 'M2 ಅಲ್ಟ್ರಾ' ಗಿಂತ 2 ಪಟ್ಟು ಹೆಚ್ಚು ಮತ್ತು 'M1 ಅಲ್ಟ್ರಾ' ಗಿಂತ 2.6 ಪಟ್ಟು ಹೆಚ್ಚು ಕಾರ್ಯಕ್ಷಮತೆಯನ್ನು ನೀಡುತ್ತದೆ.
ಚಿಪ್ ಡೈನಾಮಿಕ್ ಕ್ಯಾಶಿಂಗ್, ಹಾರ್ಡ್‌ವೇರ್-ಆಕ್ಸಿಲರೇಟೆಡ್ ಮೆಶ್ ಶೇಡಿಂಗ್ ಮತ್ತು ರೇ ಟ್ರೇಸಿಂಗ್‌ನೊಂದಿಗೆ ಸುಧಾರಿತ ಗ್ರಾಫಿಕ್ಸ್ ಆರ್ಕಿಟೆಕ್ಚರ್ ಅನ್ನು ಸಹ ಒಳಗೊಂಡಿದೆ. ಇದು ಬೇಡಿಕೆಯ ಕಂಟೆಂಟ್ ರಚನೆ ಮತ್ತು ಗೇಮಿಂಗ್‌ಗೆ ಸೂಕ್ತವಾಗಿದೆ. ಇದರ 32-ಕೋರ್ ನ್ಯೂರಲ್ ಇಂಜಿನ್ AI ಮತ್ತು ಯಂತ್ರ ಕಲಿಕೆಯ ಸಾಮರ್ಥ್ಯಗಳನ್ನು ಪವರ್ ಮಾಡುತ್ತದೆ. ಈ 'M3 ಅಲ್ಟ್ರಾ' ಚಿಪ್ ಮ್ಯಾಕ್ ಸ್ಟುಡಿಯೊಗೆ 600 ಬಿಲಿಯನ್ ಪ್ಯಾರಾಮೀಟರ್‌ಗಳೊಂದಿಗೆ ನೇರವಾಗಿ ಸಾಧನದಲ್ಲಿಯೇ LLM ಗಳನ್ನು ಚಲಾಯಿಸಲು ಅನುಮತಿಸುತ್ತದೆ.
RAM: 'M3 ಅಲ್ಟ್ರಾ' ಚಿಪ್‌ಸೆಟ್ 96GB ಯಿಂದ 512GB ವರೆಗಿನ ಯೂನಿಫೈಡ್ ಮೆಮೊರಿ ಆಪ್ಶನ್ಗಳನ್ನು ಹೊಂದಿದೆ.
ಎಕ್ಸ್ಟರ್ನಲ್ ಡಿಸ್‌ಪ್ಲೇಗಳು: ಈ 'M3 ಅಲ್ಟ್ರಾ'ದಲ್ಲಿನ ಡಿಸ್‌ಪ್ಲೇ ಎಂಜಿನ್ ಮ್ಯಾಕ್ ಸ್ಟುಡಿಯೊಗೆ 8 ಪ್ರೊ ಡಿಸ್‌ಪ್ಲೇ XDR ವರೆಗೆ ಸಂಪರ್ಕಿಸಲು ಅನುಮತಿಸುತ್ತದೆ. ಇದು 160 ಮಿಲಿಯನ್ ಪಿಕ್ಸೆಲ್‌ಗಳನ್ನು ಡ್ರೈವ್ ಮಾಡುತ್ತದೆ.
ಥಂಡರ್ಬೋಲ್ಟ್ 5: ಆಪಲ್ ಮ್ಯಾಕ್ ಸ್ಟುಡಿಯೊದೊಂದಿಗೆ 'M3 ಅಲ್ಟ್ರಾ' ಚಿಪ್ಸೆಟ್ Thunderbolt 5 ಅನ್ನು ಪರಿಚಯಿಸಿತು. ಇದು 120 Gb/s ಡೇಟಾ ವರ್ಗಾವಣೆ ವೇಗವನ್ನು ನೀಡುತ್ತದೆ. ಇದು 'ಥಂಡರ್ ಬೋಲ್ಟ್ 4' ಗಿಂತ 2 ಪಟ್ಟು ಹೆಚ್ಚು. ಪ್ರತಿ 'ಥಂಡರ್ಬೋಲ್ಟ್ 5' ಪೋರ್ಟ್ ತನ್ನದೇ ಆದ ಕಸ್ಟಮ್-ಡಿಸೈನ್ಡ್ ಕಂಟ್ರೋಲರ್ ಅನ್ನು ಹೊಂದಿದೆ. ಇದು ಮ್ಯಾಕ್ ಸ್ಟುಡಿಯೊದಲ್ಲಿ ಪ್ರತಿ ಪೋರ್ಟ್‌ಗೆ ಮೀಸಲಾದ ಬ್ಯಾಂಡ್‌ವಿಡ್ತ್ ಅನ್ನು ಒದಗಿಸುತ್ತದೆ. ಟೆಕ್ ಉದ್ಯಮದಲ್ಲಿ ಇದು 'ಥಂಡರ್ಬೋಲ್ಟ್ 5' ನ ಅತ್ಯಂತ ಸಮರ್ಥ ಅನುಷ್ಠಾನವಾಗಿದೆ ಎಂದು ಆಪಲ್ ಹೇಳುತ್ತದೆ.
ಎಕ್ಸ್ಟರ್ನಲ್ ಸ್ಟೋರೇಜ್, ಡಾಕಿಂಗ್, ಹಬ್ ಸೊಲ್ಯೂಷನ್ಗಾಗಿ ವೇಗದ ಡೇಟಾ ವರ್ಗಾವಣೆ ಅಗತ್ಯವಿರುವ ವೃತ್ತಿಪರ ಬಳಕೆದಾರರಿಗೆ ಈ ಅಪ್‌ಗ್ರೇಡ್ ಪ್ರಯೋಜನಕಾರಿಯಾಗಿದೆ. ಅಲ್ಲದೆ ಈ 'ಥಂಡರ್ಬೋಲ್ಟ್ 5' ಮಲ್ಟಿಫುಲ್ ಮ್ಯಾಕ್ ಸ್ಟುಡಿಯೋ ಸಿಸ್ಟಮ್‌ಗಳನ್ನು ವರ್ಕ್‌ಫ್ಲೋಗಳನ್ನು ಸುಧಾರಿಸಲು ಒಟ್ಟಿಗೆ ಸಂಪರ್ಕಿಸಲು ಅನುಮತಿಸುತ್ತದೆ.
