ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
10-05-2025
ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರೋ ಭಾರತೀಯ ವೀರ ಯೋಧರಿಗೆ ಜೋಶ್ ಹ್ಯಾಜಲ್‌ವುಡ್ ಸೆಲ್ಯೂಟ್!
ನವದೆಹಲಿ: ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ಕೆಚ್ಚೆದೆಯ ಭಾರತೀಯ ಯೋಧರು ನಿಜವಾಗಿಯೂ ಲೆಜೆಂಡ್ಸ್ ಎಂದು ಆಸ್ಟ್ರೇಲಿಯಾ ಕ್ರಿಕೆಟಿಗ ಹಾಗೂ ಆರ್‌ಸಿಬಿ ಆಟಗಾರ ಜೋಶ್ ಹ್ಯಾಜಲ್‌ವುಡ್ ಹಾಡಿಹೊಗಳಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಒಬ್ಬ ಆಸ್ಟ್ರೇಲಿಯಾದ ಕ್ರಿಕೆಟಿಗನಾಗಿ, ಪಾಕಿಸ್ತಾನ ಮೂಲದ ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವ ನಮ್ಮ ಕೆಚ್ಚೆದೆಯ ಭಾರತೀಯ ಸೇನಾ ಪಡೆಯಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ನೀವು ನಿಜವಾದ ಲೆಜೆಂಡ್ಸ್ ಎಂದು ಭಾರತದ ಸೈನಿಕರಿಗೆ ನನ್ನ ಹೃದಯಾಂತರದಿಂದ ಹೇಳಲು ಬಯಸುತ್ತೇನೆ. ನಿಮ್ಮ ಧೈರ್ಯ, ತ್ಯಾಗ ಮತ್ತು ರಾಷ್ಟ್ರವನ್ನು ರಕ್ಷಿಸುವ ಅಚಲ ಬದ್ಧತೆ ನನ್ನನ್ನೂ ಒಳಗೊಂಡಂತೆ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದ್ದಾರೆ.
ಶಾಂತಿ ಮತ್ತು ಏಕತೆಯ ಮೌಲ್ಯಗಳನ್ನು ರಕ್ಷಿಸುವ ದೃಢಸಂಕಲ್ಪದೊಂದಿಗೆ ನೀವು ಪ್ರತಿದಿನ ಊಹಿಸಲಾಗದ ಅಡೆತಡೆಗಳನ್ನು ಎದುರಿಸುತ್ತಿದ್ದೀರಿ. ನಿಮ್ಮ ಹೋರಾಟವು ಭಾರತಕ್ಕಾಗಿ ಮಾತ್ರವಲ್ಲ, ಸುರಕ್ಷಿತ ಪ್ರಪಂಚದ ಭರವಸೆಗಾಗಿ ಎಂದು ತಿಳಿಯಿರಿ. ನಾವು ಆಸ್ಟ್ರೇಲಿಯಾದವರಾಗಿ ನಿಮ್ಮ ಬದ್ಧತೆಯನ್ನು ಮೆಚ್ಚುತ್ತೇವೆ. ನಾನು ನಿಮ್ಮನ್ನು ಸದಾ ಪ್ರೋತ್ಸಾಹಿಸುತ್ತೇನೆ. ದೃಢವಾಗಿರಿ, ಸುರಕ್ಷಿತವಾಗಿರಿ. ವಿಶ್ವವೇ ನಿಮ್ಮ ಬೆಂಬಲಕ್ಕಿದೆ ಎಂದು ಭರವಸೆಯ ನುಡಿಗಳನ್ನಾಡಿದರು.
