ವರದಿಗಾರರು :
ಮೀನಾಕ್ಷಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
21-03-2025
ಸೂರ್ಯ ನಟನೆಯ ‘ರೆಟ್ರೋ’ ಸಿನಿಮಾ ಬಗ್ಗೆ ಸಿಕ್ತು ಬಿಗ್ ಅಪ್‌ಡೇಟ್
ಕಾಲಿವುಡ್ ನಟ ಸೂರ್ಯ ನಟನೆಯ ‘ರೆಟ್ರೋ’ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ವೊಂದು ಸಿಕ್ಕಿದೆ. ‘ರೆಟ್ರೋ’ ಚಿತ್ರದ 2ನೇ ಹಾಡಿನ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಮಾ.21ರಂದು ಸಾಂಗ್ ರಿಲೀಸ್ ಆಗಲಿದೆ . ರೆಟ್ರೋ ಸಿನಿಮಾದಲ್ಲಿ ಸೂರ್ಯ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ಗ್ಯಾಂಗ್ಸ್ಟರ್ ಪಾತ್ರದಲ್ಲಿ ಸೂರ್ಯ ಜೀವತುಂಬಿದ್ದಾರೆ. ಈಗಾಗಲೇ ‘ಕನ್ನಾಡಿ ಪೂವೇ’ ಎನ್ನುವ ಸಾಂಗ್ವೊಂದು ರಿಲೀಸ್ ಆಗಿ ಪ್ರೇಕ್ಷಕರ ಮನಗೆದ್ದಿದೆ. ಈಗ ಎರಡನೇ ಹಾಡನ್ನು ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ.
