ವರದಿಗಾರರು :
ಅರ್ಕೇಶ್ ||
ಸ್ಥಳ :
ರಾಮನಗರ
ವರದಿ ದಿನಾಂಕ :
21-11-2025
ಬೇಟೆಗೆ ತೆರಳಿದ ವೇಳೆ ನಾಡಬಂದೂಕಿನ ಮಿಸ್‌ಫೈರ್ – ವ್ಯಕ್ತಿ ಸ್ಥಳದಲ್ಲೇ ಸಾವಿಗೆ ಶರಣು
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕೆಬ್ಬೆಪಾಳ್ಯ ಗ್ರಾಮದ ಬಳಿ ನಡೆದ ದುರ್ಘಟನೆಯಲ್ಲಿ ಯುವಕನೊಬ್ಬ ನಾಡಬಂದೂಕಿನ ಮಿಸ್‌ಫೈರ್‌ಗೆ ಬಲಿಯಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮೃತರಾದವರು ಪಾಂಡುರಂಗ (35). ಸ್ನೇಹಿತ ಕಿರಣ್ ಜೊತೆ ಬೆಳಗಿನ ಜಾವ ಜಮೀನಿನ ಬಳಿ ಕಾಡುಪ್ರಾಣಿ ಬೇಟೆಗೆ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ. ಅಕ್ರಮವಾಗಿ ನಾಡಬಂದೂಕು ಹೊಂದಿದ್ದ ಪಾಂಡುರಂಗ ಬೇಟೆಗೆ ಸರಂಜಾಮು ಸಿದ್ಧಪಡಿಸುತ್ತಿರುವಾಗ ಬಂದೂಕು ತಪ್ಪಾಗಿ ಸಿಡಿದು ಗುಂಡು ಕಾಲಿಗೆ ತಗುಲಿದೆ ಎಂದು ತಿಳಿದುಬಂದಿದೆ.
ಗುಂಡೇಟಿನಿಂದ ತೀವ್ರ ರಕ್ತಸ್ರಾವವಾಗಿದ್ದು, ಸ್ಥಳದಲ್ಲೇ ಕುಸಿದು ಬಿದ್ದ ಪಾಂಡುರಂಗ ಅವರನ್ನು ರಕ್ಷಿಸುವ ಮುನ್ನವೇ ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಮಾಗಡಿ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಅಕ್ರಮ ಬಂದೂಕು ಬಳಕೆ ಸಂಬಂಧವೂ ತನಿಖೆ ಆರಂಭಿಸಿದ್ದಾರೆ.
