5 ನಿಮಿಷಕ್ಕೆ 400 ಕಿಮೀ – ಇವಿ ಜಗತ್ತಿನ ನಿದ್ದೆಗೆಡಿಸಿದ ಬಿವೈಡಿ!

ವರದಿಗಾರರು : ಮೀನಾಕ್ಷಿ ರಮೇಶ್ ರಾಠೋಡ್ || ಸ್ಥಳ : ಬೆಂಗಳೂರು
ವರದಿ ದಿನಾಂಕ : 02-04-2025

5 ನಿಮಿಷಕ್ಕೆ 400 ಕಿಮೀ – ಇವಿ ಜಗತ್ತಿನ ನಿದ್ದೆಗೆಡಿಸಿದ ಬಿವೈಡಿ!

ಎಲೆಕ್ಟ್ರಿಕ್ ಕಾರು ಚಾರ್ಜ್‌ ಆಗೋದಕ್ಕೆ ಗಂಟೆಗಟ್ಟಲೇ ಬೇಕು, ಪೆಟ್ರೋಲ್‌ ಕಾರು ಆದ್ರೆ 5 ನಿಮಿಷಕ್ಕೆ ಪೆಟ್ರೋಲ್ ಟ್ಯಾಂಕ್‌ ತುಂಬಿ ಬಿಡುತ್ತೆ. ಯಾರಿಗೆ ಬೇಕು ಈ ಎಲೆಕ್ಟ್ರಿಕ್ ಕಾರು ಎಂದು ನಿಮ್ಮ ಮನಸ್ಸಿನಲ್ಲಿ ತಿರಸ್ಕಾರ ಬಂದಿದ್ದರೆ ಈ ಸುದ್ದಿ ಓದಿ! ಮತ್ಯಾವತ್ತೂ ನೀವು ಎಲೆಕ್ಟ್ರಿಕ್ ಕಾರಿನ ಬಗ್ಗೆ ತಿರಸ್ಕಾರದ ಮಾತಾಡಲ್ಲ!

ಚೀನಾದ ಕಾರು ತಯಾರಕ ಕಂಪನಿ ಬಿಲ್ಡ್ ಯುವರ್ ಡ್ರೀಮ್ (BYD) ಜನರ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದೆ. ಈ ಮೂಲಕ ಕಂಪನಿಯು ದೊಡ್ಡ ಯಶಸ್ಸನ್ನು ಕಂಡಿದೆ. ಕಾರನ್ನು ವೇಗವಾಗಿ ಚಾರ್ಜ್‌ ಮಾಡಲು ವಿಶಿಷ್ಟವಾದ ತಂತ್ರಜ್ಞಾನವನ್ನು ಬಿವೈಡಿ ಪರಿಚಯಿಸಿದೆ. ಈ ತಂತ್ರಜ್ಞಾನದಿಂದ ಕಾರಿನ ಇಂಧನದ ಟ್ಯಾಂಕ್‌ಗೆ ಪೆಟ್ರೋಲ್‌ ತುಂಬುವಷ್ಟೇ ಸಮಯದಲ್ಲಿ ಬ್ಯಾಟರಿ ಚಾರ್ಜ್‌ ಆಗುತ್ತದೆ! ಇದು ಬಿವೈಡಿ ತಂತ್ರಜ್ಞಾನದ ವಿಶೇಷ.

ಈ ಸಮಯದಲ್ಲಿ ಚಾರ್ಜ್‌ ಆದ ಬ್ಯಾಟರಿ, ಸುಮಾರು 400 ಕಿ.ಮೀ ಕ್ರಮಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದನ್ನು ಎಲೆಕ್ಟ್ರಿಕ್ ಕಾರುಗಳ ವಲಯದಲ್ಲಿ ಪ್ರಮುಖ ಸಾಧನೆ ಎಂದು ಪರಿಗಣಿಸಲಾಗಿದೆ. ಇದು EV ಉದ್ಯಮದ ದಿಕ್ಕನ್ನೇ ಬದಲಾಯಿಸುತ್ತದೆ ಎಂಬ ವಿಶ್ವಾಸ ಸಹ ಮೂಡಿಸಿದೆ.

ಮಾ.17 ರಂದು ಕಂಪನಿಯ ಶೆನ್ಜೆನ್ ಪ್ರಧಾನ ಕಚೇರಿಯಿಂದ BYD ಸಂಸ್ಥಾಪಕ ಮತ್ತು ಅಧ್ಯಕ್ಷ ವಾಂಗ್ ಚುವಾನ್ಫು ಈ ಚಾರ್ಜಿಂಗ್‌ ವ್ಯವಸ್ಥೆಯನ್ನು ಘೋಷಿಸಿದ್ದರು. ಈ ವ್ಯವಸ್ಥೆಗೆ ʻಸೂಪರ್ ಇ-ಪ್ಲಾಟ್‌ಫಾರ್ಮ್ʼ ಎಂದು ಹೆಸರಿಡಲಾಗಿದೆ. ಇದು ಟೆಸ್ಲಾಗಿಂತ ಮೂರು ಪಟ್ಟು ವೇಗವಾಗಿ ಚಾರ್ಜ್‌ ಆಗುವ ಸಾಮರ್ಥ್ಯ ಹೊಂದಿದೆ.

BYDಯ ಹೊಸ ಆರ್ಕಿಟೆಕ್ಚರ್​ 1000 ವೋಲ್ಟ್‌ಗಳ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 1000 ಕಿಲೋವ್ಯಾಟ್‌ಗಳವರೆಗೆ (1 ಮೆಗಾವ್ಯಾಟ್) ಚಾರ್ಜಿಂಗ್ ವೇಗವನ್ನು ಹೊಂದಿದೆ. ಇದು ಟೆಸ್ಲಾದ ಹೊಸ V4 ಸೂಪರ್‌ಚಾರ್ಜರ್‌ಗೆ ಹೋಲಿಸಿದರೆ ಅದು ಸೂಪರ್‌ಚಾರ್ಜರ್ ಗರಿಷ್ಠ 500kW ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 15 ನಿಮಿಷಗಳಲ್ಲಿ ಸುಮಾರು 275 ಕಿಮೀ ಸಂಚರಿಸುವಷ್ಟು ಬ್ಯಾಟರಿ ಚಾರ್ಜ್‌ ಆಗುತ್ತದೆ. BYD ಯ ಸೂಪರ್‌ಚಾರ್ಜರ್ 3 ಪಟ್ಟು ಕಡಿಮೆ ಸಮಯದಲ್ಲಿ ಟೆಸ್ಲಾಗಿಂತ ಹೆಚ್ಚಿನ ದೂರ ಕ್ರಮಿಸುವ ಶಕ್ತಿಯನ್ನು ಬ್ಯಾಟರಿಗೆ ಒದಗಿಸುತ್ತದೆ.

ಅತ್ಯಂತ ಸುರಕ್ಷಿತ ಬ್ಯಾಟರಿ : BYD 1500 ವೋಲ್ಟ್‌ಗಳವರೆಗಿನ ಸಿಲಿಕಾನ್ ಕಾರ್ಬೈಡ್ ಪವರ್ ಚಿಪ್‌ಗಳೊಂದಿಗೆ ತನ್ನದೇ ಆದ ಫ್ಲ್ಯಾಶ್ ಚಾರ್ಜಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ಕಂಪನಿ ಅಭಿವೃದ್ಧಿಪಡಿಸಿದ ಬ್ಲೇಡ್ ಲಿಥಿಯಂ-ಐಯಾನ್ ಫಾಸ್ಫೇಟ್ ಬ್ಯಾಟರಿ ವಿಶ್ವದಲ್ಲೇ ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ EV ಬ್ಯಾಟರಿಯಾಗಿದೆ.

BYDಯ ಕಾರುಗಳಲ್ಲಿ ತನ್ನದೇ ಆದ ಅಭಿವೃದ್ಧಿಪಡಿಸಿದ BLADE ಬ್ಯಾಟರಿ ತಂತ್ರಜ್ಞಾನವನ್ನು ಬಳಸುತ್ತದೆ. ಇದನ್ನು ಸೂಪರ್ ಇ-ಪ್ಲಾಟ್‌ಫಾರ್ಮ್ ಪ್ರಕಾರ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಸಮತಟ್ಟಾದ ರಚನೆ ಇತರ ಕಾರು ತಯಾರಕರು ಬಳಸುವ ಸಿಲಿಂಡರ್ ಮತ್ತು ಪೌಲ್ ವಿನ್ಯಾಸ ಬ್ಯಾಟರಿಗಳಿಗಿಂತ ಉತ್ತಮವಾಗಿದೆ.

ಸೂಪರ್‌ಚಾರ್ಜರ್‌ನ ಅನಾನೂಕೂಲವೇನು?: BYDಯ ಈ ಸೂಪರ್‌ಚಾರ್ಜರ್ ಬ್ಯಾಟರಿಗೆ (Battery) ಅತಿ ಹೆಚ್ಚಿನ ವೋಲ್ಟೇಜ್‌ನಲ್ಲಿ ಕರೆಂಟ್ ಪೂರೈಸುತ್ತದೆ. ಇದು ಕೆಲವು ಬ್ಯಾಟರಿಗಳಿಗೆ ಹಾನಿಕಾರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಿದ್ಯುತ್ ಕಾರುಗಳಲ್ಲಿ NMC (ನಿಕಲ್ ಮ್ಯಾಂಗನೀಸ್ ಕೋಬಾಲ್ಟ್), LFP (ಲಿಥಿಯಂ ಐರನ್ ಫಾಸ್ಫೇಟ್) ನಂತಹ ಬ್ಯಾಟರಿಗಳನ್ನು ಬಳಸಲಾಗುತ್ತದೆ. ಹೆಚ್ಚಿನ ವೋಲ್ಟೇಜ್‌ನಿಂದಾಗಿ ಈ ಬ್ಯಾಟರಿಗಳು ಬೇಗನೆ ಬಿಸಿಯಾಗಬಹುದು. ಅಷ್ಟೇ ಅಲ್ಲ ಬ್ಯಾಟರಿ ವೇಗವಾಗಿ ಖಾಲಿಯಾಗುವ ಸಂಭವ ಇದೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಸೂಪರ್‌ಚಾರ್ಜರ್‌ ಯಾವ ಮಾಡೆಲ್‌ ಕಾರಿಗೆ ಲಭ್ಯ? : BYD ತನ್ನ ಎರಡು ಪ್ರೀಮಿಯಂ ಮಾದರಿಗಳಲ್ಲಿ ಈ ತಂತ್ರಜ್ಞಾನವನ್ನು ನೀಡುತ್ತಿದೆ. ಇದರಲ್ಲಿ ಹಾನ್ ಎಲ್ ಸೆಡಾನ್ ಮತ್ತು ಟ್ಯಾಂಗ್ ಎಲ್ ಎಸ್‌ಯುವಿ ಸೇರಿವೆ. ಅವುಗಳ ಬೆಲೆ ಕ್ರಮವಾಗಿ 270,000 ಯುವಾನ್ (30 ಲಕ್ಷ ರೂ.) ಮತ್ತು 280,000 ಯುವಾನ್ (33.5 ಲಕ್ಷ ರೂ.) ಈ ಎರಡೂ ಕಾರುಗಳಲ್ಲಿ ಕಂಪನಿಯು ಅಡ್ವಾನ್ಸ್ಡ್ ಡ್ರೈವಿಂಗ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ವ್ಯವಸ್ಥೆಯನ್ನು ಒದಗಿಸಿದೆ.

ಸೂಪರ್‌ಚಾರ್ಜರ್‌ನಿಂದ ಬಿವೈಡಿ ಮಾರಾಟ ಹೆಚ್ಚಳ : ಸೂಪರ್‌ಚಾರ್ಜರ್‌ನಿಂದ ಚೀನಾ ಕಳೆದ ವರ್ಷ ಇವಿ ಮಾರಾಟದಲ್ಲಿ 40% ಬೆಳವಣಿಗೆಯನ್ನು ಸಾಧಿಸಿತ್ತು. ಇನ್ನೂ ಚೀನಾದಾದ್ಯಂತ 4,000 ಕ್ಕೂ ಹೆಚ್ಚು ಹೊಸ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಬಿವೈಡಿ ಮುಂದಾಗಿದೆ. ಈ ಸುದ್ದಿಯ ಬೆನ್ನಲ್ಲೇ ಅಮೆರಿಕ ಮೂಲದ ಟೆಸ್ಲಾ ಷೇರುಗಳು ಕುಸಿತ ಕಂಡಿತ್ತು.

ವಿವ ಟೆಕ್ ಕಚೇರಿಯಲ್ಲಿ ಕ್ರಿಸ್ಮಸ್ ಸಡಗರ

ಒಟ್ಟು ಓದುಗರ ಸಂಖ್ಯೆ : 1454+

ಬೀದರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವೀರ ಬಾಲ ದಿವಸ ಆಚರಣೆ

ಒಟ್ಟು ಓದುಗರ ಸಂಖ್ಯೆ : 1537+

ಕಾಲುನಡಿಯಲ್ಲಿ ಮಾಗಡಿಯಿಂದ ಮಂತ್ರಾಲಯಕ್ಕೆ ಪಾದಯಾತ್ರೆ.

ಒಟ್ಟು ಓದುಗರ ಸಂಖ್ಯೆ : 1996+

ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಎರಕಟ್ಟೆ ಬಳಿ ಗಂಡಾನೆ ಸಾವು

ಒಟ್ಟು ಓದುಗರ ಸಂಖ್ಯೆ : 2007+

ನ್ಯಾಯಾಲಯಗಳಲ್ಲಿ 2026 ರ ಜನವರಿ 2 ರಿಂದ 90 ದಿನಗಳ ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 2.0″ ಅಭಿಯಾನ..

ಒಟ್ಟು ಓದುಗರ ಸಂಖ್ಯೆ : 2095+

ಇಂದು ಸಿಎಂ ಸಿದ್ದರಾಮಯ್ಯ ದಾವಣಗೆರೆಗೆ

ಒಟ್ಟು ಓದುಗರ ಸಂಖ್ಯೆ : 2123+

ವಿವಿಧ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಕೆ.ಹೆಚ್ ಮುನಿಯಪ್ಪ

ಒಟ್ಟು ಓದುಗರ ಸಂಖ್ಯೆ : 2225+

ವಿದ್ಯಾನಗರ ಪೊಲೀಸರ ಕಾರ್ಯಾಚರಣೆ: ಅಕ್ರಮ ಮಾದಕ ವಸ್ತು ಮಾರಾಟ-ಸೇವನೆ; ನಾಲ್ವರು ಬಂಧನ

ಒಟ್ಟು ಓದುಗರ ಸಂಖ್ಯೆ : 2129+

ಶಾಮನೂರು ಶಿವಶಂಕರಪ್ಪ ಸ್ಮೃತಿ ಸ್ಥಳಕ್ಕೆ ಎಚ್.ಡಿ. ಕುಮಾರಸ್ವಾಮಿ ನಮನ

ಒಟ್ಟು ಓದುಗರ ಸಂಖ್ಯೆ : 2141+

ಅದ್ದೂರಿಯಾಗಿ ನಡೆದ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ

ಒಟ್ಟು ಓದುಗರ ಸಂಖ್ಯೆ : 2187+

ಮನುಸ್ಮೃತಿ ದಹನ ದಿನ

ಒಟ್ಟು ಓದುಗರ ಸಂಖ್ಯೆ : 2151+

ಹಿಟ್ ಅಂಡ್ ರನ್ ಅಪಘಾತದಲ್ಲಿ ಮರಣ ಹೊಂದಿದ ರಾಜನಾಯಕನ ಕುಟುಂಬಕ್ಕೆ ಸರ್ಕಾರದ ವತಿಯಿಂದ 2 ಲಕ್ಷ ಪರಿಹಾರ

ಒಟ್ಟು ಓದುಗರ ಸಂಖ್ಯೆ : 4820+

ಚಿಕ್ಕತುಷ್ಟೂರಿನಲ್ಲಿ 13.5 ಎಕರೆ ವ್ಯಾಪ್ತಿಯಲ್ಲಿ ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ನಿರ್ಮಾಣ

ಒಟ್ಟು ಓದುಗರ ಸಂಖ್ಯೆ : 4802+

ಯೇಸು ಕ್ರಿಸ್ತನ ಹುಟ್ಟುಹಬ್ಬ (ಕ್ರಿಸ್‌ಮಸ್) ಕುರಿತು ಲೇಖನ

ಒಟ್ಟು ಓದುಗರ ಸಂಖ್ಯೆ : 5016+

ಅಟಲ್ ಎಂಬ ಅಜಾತಶತ್ರು.

ಒಟ್ಟು ಓದುಗರ ಸಂಖ್ಯೆ : 5026+

ಶಾಂತಿದೂತ ಏಸುಕ್ರಿಸ್ತನ ಜನುಮದಿನ

ಒಟ್ಟು ಓದುಗರ ಸಂಖ್ಯೆ : 5220+

ಮಾರ್ಕ್ - 45 ??? ಅಸಲಿ ಕಹಾನಿ

ಒಟ್ಟು ಓದುಗರ ಸಂಖ್ಯೆ : 5265+

ಕಾಂಗ್ರೆಸ್ ಸರ್ಕಾರದ ದ್ವೇಷಭಾಷಣ ಅಪರಾಧಗಳ ಮಸೂದೆ ಕೂಡಲೇ ವಾಪಸ್ ಪಡೆಯುಂತೆ  ಬಿಜೆಪಿ ಪ್ರತಿಭಟನೆ

ಒಟ್ಟು ಓದುಗರ ಸಂಖ್ಯೆ : 7521+

ದಾವಣಗೆರೆ ಜಿಲ್ಲೆಯ 240 ಕಾರ್ಖಾನೆಗಳಲ್ಲಿ ಸುರಕ್ಷತಾ ಕ್ರಮಗಳಿದೆಯೇ? ಅವಘಡ ತಪ್ಪಿಸಲು ತಕ್ಷಣ ಪರಿಶೀಲನೆ ಅಗತ್ಯ

ಒಟ್ಟು ಓದುಗರ ಸಂಖ್ಯೆ : 7614+

ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಶಾಶ್ವತ ಯೌಗಿಕ ಹಾಗೂ ನೈಸರ್ಗಿಕ ಕೃಷಿ ಕುರಿತು ಕಾರ್ಯಗಾರ

ಒಟ್ಟು ಓದುಗರ ಸಂಖ್ಯೆ : 7639+

ಪುನೀತ್ ರಾಜ್‍ಕುಮಾರ್ ಕಪ್’ ಸೀಸನ್ 4 ಚಾಂಪಿಯನ್

ಒಟ್ಟು ಓದುಗರ ಸಂಖ್ಯೆ : 7643+

ದಾವಣಗೆರೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣ

ಒಟ್ಟು ಓದುಗರ ಸಂಖ್ಯೆ : 7651+

ದಾವಣಗೆರೆ ಆನಗೋಡು ಗ್ರಾಮದಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ನಾಪತ್ತೆ

ಒಟ್ಟು ಓದುಗರ ಸಂಖ್ಯೆ : 7660+

ನ್ಯೂ ಇಯರ್ ಭದ್ರತೆಗೆ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕ್ರಮ

ಒಟ್ಟು ಓದುಗರ ಸಂಖ್ಯೆ : 7935+

ಉದ್ಯಾನ ನಗರಿಯಲ್ಲಿ ಕ್ರಿಸ್ಮಸ್ ಸಂಭ್ರಮ.

ಒಟ್ಟು ಓದುಗರ ಸಂಖ್ಯೆ : 7944+

ಡ್ರಗ್ಸ್ ಕೇಸಲ್ಲಿ ಭಾಗಿಯಾದವರ ಮೇಲೆ ಮುಲಾಜಿಲ್ಲದೇ ಕ್ರಮವೆಂದ್ರು ಎಸ್ಪಿ ಉಮಾ ಪ್ರಶಾಂತ್..

ಒಟ್ಟು ಓದುಗರ ಸಂಖ್ಯೆ : 10303+

ಚಿರತೆಗಿಟ್ಟಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ, 3 ತಾಸು ಬೋನಿನಲ್ಲೇ ಚೀರಾಟ !

ಒಟ್ಟು ಓದುಗರ ಸಂಖ್ಯೆ : 10475+

ಡಿಸೆಂಬರ್ 29 ರಂದು ಬೊಮ್ಮಗೊಂಡೇಶ್ವರ ದೇವಸ್ಥಾನ ಭೂಮಿ ಪೂಜೆ

ಒಟ್ಟು ಓದುಗರ ಸಂಖ್ಯೆ : 10488+

ಮುದೇನೂರು ಗ್ರಾಮದ ನವೀನ್ ಕುಮಾರ ಕಡಾರಿ ಭಗತ್ ಸಿಂಗ್ ಜನ್ಮಸ್ಥಳ ಬಂಗಾಕ್ಕೆ 2300 ಕಿ.ಮೀ ಸೈಕಲ್ ಪಯಣ

ಒಟ್ಟು ಓದುಗರ ಸಂಖ್ಯೆ : 10816+

2025 ವರ್ಷಕ್ಕೆ ಗುಡ್ ಬೈ ಹೇಳಲು ದಿನಗಣನೆ ಸಂಭ್ರಮ ಮತ್ತು ಸುರಕ್ಷತಾ ಕ್ರಮ

ಒಟ್ಟು ಓದುಗರ ಸಂಖ್ಯೆ : 10978+

ಬುದ್ಧಿಶಕ್ತಿ, ವಿವೇಕ ಮತ್ತು ಜ್ಞಾನದಿಂದಲೇ ಹಕ್ಕು–ಸೌಲಭ್ಯಗಳ ಸಾಧನೆ: ಜಿ.ಬಿ. ವಿನಯ್ ಕುಮಾರ್

ಒಟ್ಟು ಓದುಗರ ಸಂಖ್ಯೆ : 11042+

ನಲ್ಲೂರು ಜ್ಯುಯಲರ್ಸ್ ಕುಟುಂಬದಿಂದ ಕೊಡುಗೆ.

ಒಟ್ಟು ಓದುಗರ ಸಂಖ್ಯೆ : 11066+

ಹುಣಸೂರು ನಗರದಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು

ಒಟ್ಟು ಓದುಗರ ಸಂಖ್ಯೆ : 11129+

ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತ್ತು ದೇವನಹಳ್ಳಿ ಮಂಡಲ ಪದಾಧಿಕಾರಿಗಳ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 11111+

ರಾಷ್ಟ್ರೀಯ ರೈತರ ದಿನ

ಒಟ್ಟು ಓದುಗರ ಸಂಖ್ಯೆ : 11101+

ತಹಸೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳಿಗೆ ಶಾಸಕರ ಗ್ರಾಮ ಸಂಚಾರದಿಂದ ವಿನಾಯ್ತಿ ನೀಡುವಂತೆ ಮನವಿ

ಒಟ್ಟು ಓದುಗರ ಸಂಖ್ಯೆ : 13105+

ಇಸ್ರೋ ಜಾಗತಿಕ ಬ್ರಾಡ್‌ಬ್ಯಾಂಡ್ ಉಪಗ್ರಹ ಉಡಾವಣೆ

ಒಟ್ಟು ಓದುಗರ ಸಂಖ್ಯೆ : 13558+

ಹೆಣ್ಣುಮಕ್ಕಳು ಸ್ವಾವಲಂಬಿಯಾಗಲು ಪ್ರಯತ್ನಿಸಬೇಕು ಡಾ. ವಿಶಾಲಾಕ್ಷಿ ವಿ. ಕರಡ್ಡಿ

ಒಟ್ಟು ಓದುಗರ ಸಂಖ್ಯೆ : 13593+

ಕೈ ಮುಗಿತಿನಿ ಕಿತ್ತಾಡ್ಬೇಡ್ರಪ್ಪೋ....ನಾಯಕದ್ವಯರ ಕುರ್ಚಿ ಕದನ ಹೈರಾಣಾದ ಕಾಂಗ್ರೆಸ್ ಹೈ ಕಮಾಂಡ್

ಒಟ್ಟು ಓದುಗರ ಸಂಖ್ಯೆ : 13585+

ರಾಷ್ಟ್ರೀಯ ಗಣಿತ ದಿನ

ಒಟ್ಟು ಓದುಗರ ಸಂಖ್ಯೆ : 13837+

ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್: ಕೋಲಾರದ ಜಗದೀಶ್ ಕೆ.ಸಿ.ಗೆ ಚಿನ್ನ–ಕಂಚು

ಒಟ್ಟು ಓದುಗರ ಸಂಖ್ಯೆ : 13939+

ಮುಕ್ತಿ ಕಾಲೋನಿಯ ಬಾಳೆ ತೋಟದಲ್ಲಿ ನಿತ್ರಾಣವಾಗಿದ್ದ ಹುಲಿ ಸೆರೆ

ಒಟ್ಟು ಓದುಗರ ಸಂಖ್ಯೆ : 13955+

ಚಿಕ್ಕೋಡಿ ನ್ಯಾಯಾಲಯ ಆವರಣದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ

ಒಟ್ಟು ಓದುಗರ ಸಂಖ್ಯೆ : 13947+

ಬಿಸಿ ನೀರಿಗೆ ಬಿದ್ದು ಎರಡು ವರ್ಷದ ಹೆಣ್ಣು ಮಗು ಸಾವು

ಒಟ್ಟು ಓದುಗರ ಸಂಖ್ಯೆ : 13973+

ಗಡಿಜಿಲ್ಲೆಯಲ್ಲಿ‌ ಹುಲಿಗಳ‌ ಓಡಾಟ

ಒಟ್ಟು ಓದುಗರ ಸಂಖ್ಯೆ : 18845+

ಜೈ ಹನುಮಾನ್

ಒಟ್ಟು ಓದುಗರ ಸಂಖ್ಯೆ : 19120+

ಕಲೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದೆ.ಪರಮೇಶ್ವ ಪಾಟೀಲ್ ತಡಪಳ್ಳ

ಒಟ್ಟು ಓದುಗರ ಸಂಖ್ಯೆ : 19192+

ಕೊರಟಗೆರೆಯಲ್ಲಿ ತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವ

ಒಟ್ಟು ಓದುಗರ ಸಂಖ್ಯೆ : 19290+