ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
09-11-2025
ಬೀದರದ ಪ್ರತಿಭೆ ದಿಶಾ — 33.50 ಮೀಟರ್ ಭಲ್ಲೆ ಎಸೆದು ಹೊಸ ಕ್ರೀಡಾ ಇತಿಹಾಸ!
ಭಲ್ಲೆ ಎಸೆತ: ಹೊಸ ದಾಖಲೆ ಬರೆದ ಬೀದರನ ದಿಶಾ 19ನೇ ಅಂತರಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದ ಭಲ್ಲೆ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವಮೂಲಕ ಅಖಿಲ ಭಾರತ ಮಟ್ಟದ ಅಂತರವಿಶ್ವವಿದ್ಯಾಲಯ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ದಿಶಾ ನೆಲವಾಡೆ
ಬೀದರ್: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ಶರಣೇಶ್ವರ ರೇಷ್ಮೆ ಬಿ.ಎಡ್. ಕಾಲೇಜು ವತಿಯಿಂದ ಕಲಬುರಗಿಯಲ್ಲ್ಲಿ ಶುಕ್ರವಾರ ನಡೆದ 19ನೇ ಅಂತರಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟದ ಭಲ್ಲೆ ಎಸೆತ ಸ್ಪರ್ಧೆಯಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ದಿಶಾ ನೆಲವಾಡೆ ಹೊಸ ದಾಖಲೆ ಬರೆದಿದ್ದಾರೆ.2010-11 ರಲ್ಲಿ ನಿಶಾ ಎಂ. 29.72 ಮೀಟರ್ ದೂರ ಭಲ್ಲೆ ಎಸೆದದ್ದು ಈವರೆಗಿನ ದಾಖಲೆಯಾಗಿತ್ತು. ದಿಶಾ ಅವರು 33.50 ಮೀಟರ್ ದೂರ ಭಲ್ಲೆ ಎಸೆದು ಹಿಂದಿನ ದಾಖಲೆ ಮುರಿದರು. ಜತೆಗೆ ಪ್ರಥಮ ಸ್ಥಾನ ಬಾಚಿಕೊಂಡು, ಅಖಿಲ ಭಾರತ ಮಟ್ಟದ ಅಂತರವಿಶ್ವವಿದ್ಯಾಲಯ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಿದರು.ಹೊಸ ದಾಖಲೆ ನಿರ್ಮಿಸಿದ್ದಕ್ಕೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ದಿಶಾ ಅವರಿಗೆ ರೂ. 5 ಸಾವಿರ ನಗದು ಬಹುಮಾನ ವಿತರಿಸಲಾಯಿತು.ಭಲ್ಲೆ ಎಸೆತ ಸ್ಪರ್ಧೆಯಲ್ಲಿ ದಿಶಾ ಹೊಸ ದಾಖಲೆ ಬರೆದಿದ್ದಕ್ಕೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಮನೋಜಕುಮಾರ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ರವಿ ನಾಯಕ್ ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
